newsfirstkannada.com

ರೈಲು ದುರಂತದ ಪರಿಹಾರಕ್ಕಾಗಿ ಗಂಡನನ್ನೇ ಸಾಯಿಸಿದ ಹೆಂಡತಿ; ಒಡಿಶಾದಲ್ಲಿ ಎಂದೂ ಕೇಳದ ವಿಚಿತ್ರ ಘಟನೆ

Share :

07-06-2023

  ದುರಂತದಲ್ಲಿ ಮೃತಪಟ್ಟವರಿಗೆ ರೈಲ್ವೆ ಇಲಾಖೆ 10 ಲಕ್ಷ ಪರಿಹಾರ

  ನನ್ನ ಗಂಡ ಸತ್ತಿದ್ದಾನೆ ಎಂದು ಪರಿಹಾರದ ಅರ್ಜಿ ಹಾಕಿದ ಮಹಿಳೆ

  ಸುಳ್ಳು ದಾಖಲೆ ಕೊಟ್ಟ ಹೆಂಡತಿ ಮೇಲೆ ತಿರುಗಿಬಿದ್ದ ಪತಿರಾಯ

ಒಡಿಶಾದ ಬಾಲಾಸೋರ್ ರೈಲು ಅಪಘಾತ ಈ ಶತಮಾನದ ಭೀಕರ ದುರಂತ. 275ಕ್ಕೂ ಹೆಚ್ಚು ಮಂದಿ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ರೆ, ನೂರಾರು ಜನ ಇನ್ನೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇಡೀ ದೇಶವೇ ಪ್ರಾರ್ಥನೆ ಸಲ್ಲಿಸಿದೆ. ದುರಂತದಲ್ಲಿ ಮೃತಪಟ್ಟವರಿಗೆ ರೈಲ್ವೆ ಇಲಾಖೆ 10 ಲಕ್ಷ ಹಾಗೂ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲಾಗಿದೆ.

ಒಡಿಶಾ ರೈಲು ದುರಂತದಲ್ಲಿ ಸಾವನ್ನಪ್ಪಿದ ನೂರಾರು ಶವಗಳ ಗುರುತು ಪತ್ತೆ ಹಚ್ಚಲು ಪರದಾಟ ನಡೆಸಲಾಗುತ್ತಿದೆ. ಈ ಕರಾಳತೆ ಕಣ್‌ ಮುಂದೆ ಇರುವಾಗಲೇ ಒಡಿಶಾದಲ್ಲಿ ಮಹಿಳೆಯೊಬ್ಬರು ಪರಿಹಾರದ ದುಡ್ಡಿಗಾಗಿ ತನ್ನ ಗಂಡನನ್ನೇ ಸಾಯಿಸಿದ್ದಾಳೆ. ರೈಲು ಅಪಘಾತದಲ್ಲಿ ನನ್ನ ಗಂಡ ಸತ್ತಿದ್ದಾನೆ ಎಂದು ಪರಿಹಾರದ ಅರ್ಜಿ ಹಾಕಿದ್ದಾಳೆ. ಆದ್ರೆ, ವಿಚಿತ್ರ ಏನಂದ್ರೆ ಆ ಮಹಿಳೆ ಮಾಡಿದ ಮೋಸ ಪತ್ತೆಯಾಗಿದ್ದು ಸಿಕ್ಕಿಬಿದ್ದಿದ್ದಾಳೆ.

ಪರಿಹಾರದ ದುಡ್ಡಿಗಾಗಿ ಒಡಿಶಾದ ಕಟ್ಟಕ್‌ ಜಿಲ್ಲೆಯ ಮಹಿಳೆ ಗೀತಾಂಜಲಿ ದತ್ತಾ, ತನ್ನ ಗಂಡ ರೈಲಿನಲ್ಲಿ ಪ್ರಯಾಣ ನಡೆಸಿದ್ದ ಎಂದು ಸುಳ್ಳು ಹೇಳಿದ್ದಾಳೆ. ಪರಿಹಾರದ ದುಡ್ಡಿಗಾಗಿ ತನ್ನ ಗಂಡ ಸಾವನ್ನಪ್ಪಿರೋದಕ್ಕೆ ದಾಖಲಾತಿಗಳನ್ನು ರೆಡಿ ಮಾಡಿದ್ದಾಳೆ. ಆದರೆ ಮಹಿಳೆಯ ದುರಾದೃಷ್ಟ ಏನಂದ್ರೆ ಈಕೆ ಸಲ್ಲಿಸಿದ ದಾಖಲೆಗಳೆಲ್ಲಾ ಸುಳ್ಳು ಅನ್ನೋದು ಗೊತ್ತಾಗಿದೆ. ಅಷ್ಟೇ ಅಲ್ಲ, ಮೋಸ ಮಾಡಲು ಹೊಂಚು ಹಾಕಿದ್ದ ಮಹಿಳೆಯ ಗಂಡ ವಿಜಯ್ ದತ್ತಾ ಪೊಲೀಸರಿಗೆ ದೂರು ನೀಡಿದ್ದಾನೆ. ತನ್ನ ಹೆಂಡತಿ ಮಾಡಿದ ಮೋಸದ ಜಾಲವನ್ನು ಬಟಾಬಯಲು ಮಾಡಿದ್ದಾನೆ.

ತನ್ನ ಗಂಡ ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದ ಮಹಿಳೆ ನಕಲಿ ಆಧಾರ್ ಕಾರ್ಡ್‌ ತೋರಿಸಿ ಮೃತದೇಹವನ್ನು ತೋರಿಸಿದ್ದಾಳೆ. ಅಷ್ಟೇ ಅಲ್ಲ, ರೈಲು ದುರಂತದ ಪರಿಹಾರಕ್ಕೆ ಮನವಿ ಮಾಡಿದ್ದಾಳೆ. ಈ ಸುಳ್ಳಿನ ಸರಮಾಲೆ ಗೊತ್ತಾದ ಮೇಲೆ ಮಹಿಳೆಗೆ ಪೊಲೀಸರು ಎಚ್ಚರಿಸಿ ಕಳುಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ರೈಲು ದುರಂತದ ಪರಿಹಾರಕ್ಕಾಗಿ ಗಂಡನನ್ನೇ ಸಾಯಿಸಿದ ಹೆಂಡತಿ; ಒಡಿಶಾದಲ್ಲಿ ಎಂದೂ ಕೇಳದ ವಿಚಿತ್ರ ಘಟನೆ

https://newsfirstlive.com/wp-content/uploads/2023/06/Odisha-Train-4.jpg

Load More