newsfirstkannada.com

ಅಬ್ಬಾ.. ಟೆರೇಸ್ ಮೇಲಿಂದ ಕೈ ಜಾರಿ ಬಿದ್ದ ಮಹಿಳೆ; ಬೆಂಗಳೂರಲ್ಲಿ ಭಯಾನಕ ದುರಂತ; ಆಗಿದ್ದೇನು?

Share :

Published June 21, 2024 at 9:43pm

    ನೇತಾಡುತ್ತಿದ್ದ ಮಹಿಳೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ವ್ಯಕ್ತಿ

    ಸುತ್ತಾಮುತ್ತಲಿನ ಜನ ನೋಡುತ್ತಿದ್ದಂತೆ ಕೆಳಗೆ ಬಿದ್ದಿರೋ ಮಹಿಳೆ!

    ಟೆರೇಸ್ ಮೇಲಿದ್ದ ಮಹಿಳೆ ಇದ್ದಕ್ಕಿದ್ದಂತೆ ಕೆಳಗೆ ಜಾರಿ ಬಿದ್ದಿದ್ದು ಹೇಗೆ?

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಗೋ ಅನಾಹುತಗಳು ಒಂದೆರಡಲ್ಲ. ಟೆರೇಸ್‌ ಮೇಲೆ ಪತಿಯೊಂದಿಗೆ ಕೆಲಸ ಮಾಡುತ್ತಿದ್ದ ಪತ್ನಿ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿರೋ ಘಟನೆ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕನಕನಗರದಲ್ಲಿ ನಡೆದಿದೆ. ಘಟನೆಯ ಭಯಾನಕ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ನೋಡುವವರಿಗೆ ಎದೆ ದಸಕ್‌ ಎನ್ನುವಂತಿದೆ.

ಕಟ್ಟಡದ ಮೇಲಿಂದ ಕೆಳಗೆ ಬಿದ್ದಿರೋ ಮಹಿಳೆಯನ್ನು 27 ವರ್ಷದ ರುಬಾಯ್ ಎಂದು ಗುರುತಿಸಲಾಗಿದೆ. ರುಬಾಯ್ ತನ್ನ ಗಂಡನ ಜೊತೆ ಕಟ್ಟಡದ ಮೇಲೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನ ಮೇಲೆ ಕಾಲಿಟ್ಟು ಜಾರಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ ಮನೆಗೆ ಇಬ್ಬರು ಹೆಂಡತಿಯರ ಜೊತೆ ಎಂಟ್ರಿ ಕೊಟ್ಟ ಮುದ್ದಿನ ಗಂಡ; ಉಳಿದ ಸ್ಪರ್ಧಿಗಳು ಯಾರು? 

ಟೆರೇಸ್ ಮೇಲಿಂದ ಕೆಳಗೆ ಜಾರಿದ್ದ ಪತ್ನಿಯನ್ನು ಕೂಡಲೇ ರುಬಾಯ್ ಪತಿ ಹಿಡಿದುಕೊಂಡಿದ್ದಾರೆ. ಕೈ ಗಟ್ಟಿಯಾಗಿ ಹಿಡಿದುಕೊಂಡಿದ್ದ ಪತಿ ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಮಹಿಳೆ ಕೈ ಜಾರಿ ಕೆಳಗೆ ಬಿದ್ದಿದ್ದಾರೆ. ಈ ಭಯಾನಕ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಕೂಡಲೇ ಕೆಳಗೆ ಬಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಗಂಭೀರವಾಗಿ ಗಾಯಗೊಂಡ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಟೆರೇಸ್ ಮೇಲಿಂದ ಬಿದ್ದಿರುವ ಮಹಿಳೆ ಸದ್ಯ ಕೋಮಾದಲ್ಲಿದ್ದಾರೆ ಎನ್ನಲಾಗಿದೆ. ಡಿಜೆ ಹಳ್ಳಿ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಟೆರೇಸ್ ಮೇಲಿಂದ ಕೈ ಜಾರಿ ಬಿದ್ದ ಮಹಿಳೆ; ಬೆಂಗಳೂರಲ್ಲಿ ಭಯಾನಕ ದುರಂತ; ಆಗಿದ್ದೇನು?

https://newsfirstlive.com/wp-content/uploads/2024/06/Bangalore-Lady-Fall.jpg

Load More