ಮುತ್ತಿನನಗರಿಯಲ್ಲಿ 50 ಲಕ್ಷ ರೂಪಾಯಿ ಡೈಮಂಡ್ ರಿಂಗ್ ಕಳವು
ಪೊಲೀಸರಿಗೆ ಸಿಸಿಟಿವಿಯಿಂದ ಡೈಮಂಡ್ ಕದ್ದ ಕಳ್ಳಿ ಸಿಕ್ಕಿಬಿದ್ದಳು
ಬಂಜಾರ ಹಿಲ್ಸ್‌ನ ಫೇಮಸ್ ಡೆಂಟಲ್ ಕ್ಲಿನಿಕ್‌ನಲ್ಲಿ ನಡೆದ ಘಟನೆ
ಹೈದರಾಬಾದ್: ಮುತ್ತಿನನಗರಿ ಅಂತಾನೇ ಫೇಮಸ್ ಆದ ಹೈದರಾಬಾದ್‌ನಲ್ಲಿ 50 ಲಕ್ಷ ರೂಪಾಯಿ ಬೆಲೆ ಬಾಳುವ ಡೈಮಂಡ್ ರಿಂಗ್ ಕದ್ದು ಕಮೋಡ್‌ಗೆ ಬಿಸಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಕಳ್ಳಿಯನ್ನ ಸುಲಭವಾಗಿ ಕಂಡು ಹಿಡಿದ್ರೂ ಕದ್ದ ಡೈಮಂಡ್ ರಿಂಗ್ ಅನ್ನ ಹುಡುಕಲು ಹರಸಾಹಸ ಪಟ್ಟಿದ್ದಾರೆ. ಡೈಮಂಡ್ ರಿಂಗ್ ಕದ್ದಿದ್ದು ಯಾರು? ಕೊನೆಗೆ ಪೊಲೀಸರಿಗೆ ಕಳ್ಳಿ ಹಾಗೂ ಡೈಮಂಡ್ ರಿಂಗ್ ಸಿಕ್ಕಿದ್ದು ಹೇಗೆ ಅನ್ನೋ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿ FMS ಡೆಂಟಲ್ ಮತ್ತು ಸ್ಕಿನ್ ಕ್ಲಿನಿಕ್ ಇದೆ. ಕಳೆದ ಜೂನ್ 27ರಂದು ಈ ಕ್ಲಿನಿಕ್‌ಗೆ ಉದ್ಯಮಿ ನರೇಂದ್ರ ಕುಮಾರ್ ಅಗರ್‌ವಾಲ್ ಮೊಮ್ಮಗಳು ಆಗಮಿಸಿದ್ದಾರೆ. ಇದೇ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುವಾಗ ಆಕೆಯು 50 ಲಕ್ಷ ಮೌಲ್ಯದ ಡೈಮಂಡ್ ರಿಂಗ್ ಅನ್ನು ಪಕ್ಕದಲ್ಲಿದ್ದ ಟೇಬಲ್ ಮೇಲೆ ಬಿಚ್ಚಿಟ್ಟಿದ್ದಾರೆ. ಚಿಕಿತ್ಸೆ ಪಡೆದ ಬಳಿಕ ಆಕೆ ಡೈಮಂಡ್ ರಿಂಗ್ ಮರೆತು ಕ್ಲಿನಿಕ್‌ನಿಂದ ಹೊರ ನಡೆದಿದ್ದಾರೆ. ಮನೆಗೆ ಹೋದಾಗ ತಾನು ಡೈಮಂಡ್ ರಿಂಗ್ ಕಳೆದುಕೊಂಡಿರೋದು ಗೊತ್ತಾಗಿದೆ. ಯೋಚನೆ ಮಾಡಿದಾಗ ಡೆಂಟಲ್ ಮತ್ತು ಸ್ಕಿನ್ ಕ್ಲಿನಿಕ್‌ನಲ್ಲಿ ತನ್ನ ಕೈಯಿಂದ ಬಿಚ್ಚಿಟ್ಟಿದ್ದು ನೆನಪಾಗಿದೆ.
ಇದನ್ನೂ ಓದಿ: ಅಯ್ಯೋ ಚೊಂಬೇಶ್ವರ! ಈ ಕೋಟ್ಯಾಧೀಶ 27ನೇ ಬಾರಿ ಬರೆದ ಪರೀಕ್ಷೆಯೂ ಫೇಲ್
ಪೊಲೀಸರಿಗೆ ತಲೆನೋವಾದ ‘ಡೈಮಂಡ್’ ಕಳ್ಳಿ!
ನರೇಂದ್ರ ಕುಮಾರ್ ಅಗರ್‌ವಾಲ್ ಮೊಮ್ಮಗಳು ಮತ್ತೆ ಮನೆಯಿಂದ ಸೀದಾ ಕ್ಲಿನಿಕ್ ಹೋಗಿ ವಿಚಾರಿಸಿದಾಗ ಅಲ್ಲಿ ಡೈಮಂಡ್ ರಿಂಗ್ ನಾಪತ್ತೆಯಾಗಿದೆ. ಇಡೀ ಕ್ಲಿನಿಕ್ ಅನ್ನು ಎಷ್ಟೇ ಹುಡುಕಿದರೂ 50 ಲಕ್ಷ ಬೆಲೆಬಾಳುವ ರಿಂಗ್ ಸಿಕ್ಕಿಲ್ಲ. ಕೊನೆಗೆ ನರೇಂದ್ರ ಕುಮಾರ್ ಅವರು ಜ್ಯೂಬಿಲಿ ಹಿಲ್ಸ್ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ದಾಖಲಿಸುತ್ತಾರೆ. ಪೊಲೀಸರು ಕ್ಲಿನಿಕ್‌ಗೆ ಬಂದು ಸಿಬ್ಬಂದಿಯನ್ನು ವಿಚಾರಿಸಿದಾಗ ಯಾರು ಡೈಮಂಡ್ ರಿಂಗ್ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಸಿಸಿಟಿವಿಯನ್ನು ಪರಿಶೀಲಿಸಿದಾಗ ಕ್ಲಿನಿಕ್‌ನಲ್ಲಿದ್ದ ಮಹಿಳಾ ಸಿಬ್ಬಂದಿ ಡೈಮಂಡ್ ರಿಂಗ್ ಕದ್ದಿರೋದು ಪತ್ತೆಯಾಗಿದೆ.
ಸಿಸಿಟಿವಿ ಕೊಟ್ಟ ಸುಳಿವಿನಿಂದ 50 ಲಕ್ಷ ರೂಪಾಯಿಯ ಡೈಮಂಡ್ ರಿಂಗ್ ಕದ್ದಿದ್ದು ಯಾರು ಅನ್ನೋದು ಗೊತ್ತಾಗುತ್ತದೆ. ಕದ್ದ ಮಹಿಳೆ ಪೊಲೀಸರ ಭಯಕ್ಕೆ ಹೆದರಿ ಡೈಮಂಡ್ ರಿಂಗ್ ಅನ್ನು ವಾಷ್‌ರೂಮ್‌ನಲ್ಲಿದ್ದ ಕಮೋಡ್‌ಗೆ ಹಾಕಿರೋದಕ್ಕೆ ಒಪ್ಪಿಕೊಂಡಿದ್ದಾಳೆ. ವಿಚಾರಣೆ ನಡೆಸಿದ ಪೊಲೀಸರು ಕೊನೆಗೆ ಆ ಕಮೋಡ್ ಒಳಗಿನ ಡೈಮಂಡ್ ರಿಂಗ್ ಪತ್ತೆ ಹಚ್ಚಲು ಮುಂದಾಗುತ್ತಾರೆ. ಮೆಕಾನಿಕ್‌ಗಳನ್ನ ಕರೆಸಿ ಕಮೋಡ್‌ನ ಪೈಪ್‌ಲೈನ್‌ಗಳನ್ನು ತೆಗೆಸಿದಾಗ ಡೈಮಂಡ್ ರಿಂಗ್ ಸಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ