Advertisment

ಗಂಡನ ಜೀವ ಉಳಿಸಲು ಹುಲಿ ಜೊತೆ ಹೋರಾಟ; ರೈತ ಮಹಿಳೆ ಧೈರ್ಯಕ್ಕೆ ಅರಣ್ಯಾಧಿಕಾರಿಗಳೇ ದಂಗು

author-image
admin
Updated On
ಗಂಡನ ಜೀವ ಉಳಿಸಲು ಹುಲಿ ಜೊತೆ ಹೋರಾಟ; ರೈತ ಮಹಿಳೆ ಧೈರ್ಯಕ್ಕೆ ಅರಣ್ಯಾಧಿಕಾರಿಗಳೇ ದಂಗು
Advertisment
  • ಹೊಲದಲ್ಲಿ ಹತ್ತಿ ಬಿಡಿಸುತ್ತಿದ್ದಾಗ ಗಂಡನ ಮೇಲೆ ಹುಲಿರಾಯನ ದಾಳಿ
  • ಅಸಾಧಾರಣ ಧೈರ್ಯ ಪ್ರದರ್ಶಿಸಿ ಹುಲಿ ಜೊತೆ ಮಹಿಳೆಯ ಹೋರಾಟ
  • ಒಂದು ಕ್ಷಣ ಸುಮ್ಮನಿದ್ದರೂ ಗಂಡನ ಪ್ರಾಣ ಪಕ್ಷಿ ಹಾರಿ ಹೋಗುತ್ತಿತ್ತು

ಮಹಿಳೆಯೊಬ್ಬರು ಹುಲಿಯೊಂದಿಗೆ ಹೋರಾಡಿ ತನ್ನ ಪತಿಯ ಜೀವ ಉಳಿಸಿರುವ ಘಟನೆ ತೆಲಂಗಾಣದ ಕುಮುರಂ ಜಿಲ್ಲೆಯ ಭೀಮ್ ಆಸಿಫಾಬಾದ್​ನ ದುಬ್ಬಗುಡ್ಡದಲ್ಲಿ ನಡೆದಿದೆ. ರೈತ ಸುರೇಶ್​ ಹತ್ತಿಯ ಹೊಲದಲ್ಲಿ ತನ್ನ ಪತ್ನಿಯ ಜೊತೆ ಕೆಲಸ ಮಾಡುತ್ತಿದ್ದಾಗ ಹುಲಿ ದಾಳಿ ಮಾಡಿದೆ. ಈ ವೇಳೆ ಅಸಾಧಾರಣ ಧೈರ್ಯ ಪ್ರದರ್ಶಿಸಿದ ಮಹಿಳೆ ಹುಲಿಯೊಂದಿಗೆ ಹೋರಾಡಿ ತನ್ನ ಪತಿಯನ್ನು ರಕ್ಷಿಸಿಕೊಂಡಿದ್ದಾಳೆ.

Advertisment

ಕಳೆದ ಶನಿವಾರ ಬೆಳಗ್ಗೆ ಎಂದಿನಂತೆ ಮಹಿಳೆ ಸುಜಾತಾ ಹೊಲದಲ್ಲಿ ಹತ್ತಿ ಬಿಡಿಸಲು ಹೋಗಿದ್ದಾರೆ. ಹೊಲದಲ್ಲಿ ಹುಲಿ ಹೊಂಚು ಹಾಕಿ ಕುಳಿತಿದ್ದನ್ನು ಗೊತ್ತಿಲ್ಲದ ಸುಜಾತಾ ಪತಿ ಸುರೇಶ್ ಎತ್ತಿನ ಬಂಡಿಯೊಂದಿಗೆ ಆಗಮಿಸಿದ್ದಾರೆ. ಎತ್ತಿನ ಬಂಡಿ ಹತ್ತಿರ ಬರುತ್ತಿದ್ದಂತೆ ಹುಲಿ ಸುರೇಶ್ ಮೇಲೆ ಎರಗಿದೆ. ಸುರೇಶ್ ಕುತ್ತಿಗೆಗೆ ಬಲವಾಗಿ ಪರಚಿದೆ. ಈ ವೇಳೆ ಕೇವಲ 15 ಮೀಟರ್​​ನಷ್ಟು ದೂರ ಕೆಲಸ ಮಾಡುತ್ತಿದ್ದ ಸುಜಾತಾ ಕೂಡಲೇ ತನ್ನ ಪತಿಯ ರಕ್ಷಣೆಗೆ ಧಾವಿಸಿದ್ದಾಳೆ. ತನ್ನ ಪ್ರಾಣವನ್ನೂ ಲೆಕ್ಕಿಸದೇ ಹುಲಿ ಜೊತೆ ಹೋರಾಡಿ ಪತಿ ಸುರೇಶ್​ರನ್ನು ರಕ್ಷಿಸಿದ್ದಾಳೆ.

publive-image

ಪತಿ ಸುರೇಶ್ ಮೇಲೆ ಹುಲಿ ದಾಳಿ ಮಾಡಿದ್ದನ್ನು ನೋಡಿ ಮೊದಲು ಸುಜಾತಾಗೆ ಗಾಬರಿಯಾಗಿದೆ. ಆದರೆ ಆ ಕ್ಷಣಕ್ಕೆ ಧೈರ್ಯ ತಂದುಕೊಂಡು ಜೋರಾಗಿ ಕೂಗಾಡುತ್ತಾ ಅಲ್ಲಿಯೇ ಇದ್ದ ಕಲ್ಲು, ಬಡಿಗೆಗಳಿಂದ ಹುಲಿಯ ಮೇಲೆ ಪ್ರತಿ ದಾಳಿ ಮಾಡಿದ್ದಾಳೆ. ಸುಜಾತಾಳ ಕಲ್ಲು, ಬಡಿಗೆ ಏಟಿಗೆ ತತ್ತರಿಸಿದ ಹುಲಿ ಓಡಿ ಹೋಗಿದೆ. ಸುಜಾತಾಳ ಪತಿ ಸುರೇಶ್​ ಕುತ್ತಿಗೆ, ಎದೆಗೆ ಹುಲಿ ಗಾಯಗೊಳಿಸಿದ್ದು ಪ್ರಜ್ಞಾಹೀನರಾಗಿದ್ದಾರೆ. ಕೂಡಲೇ ಅಕ್ಕಪಕ್ಕ ಇದ್ದ ರೈತರನ್ನೂ ಕೂಗಿ ಕರೆದು ಪತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

‘ಹುಲಿ ನನ್ನ ಪತಿಯ ಮೇಲೆ ದಾಳಿ ಮಾಡಿದಾಗ ನಾನು ಒಂದು ಕ್ಷಣವೂ ನನ್ನ ಜೀವದ ಬಗ್ಗೆ ಯೋಚಿಸಲಿಲ್ಲ. ನನ್ನ ಗಂಡನನ್ನು ಉಳಿಸುವುದಷ್ಟೇ ನನ್ನ ಆದ್ಯತೆಯಾಗಿತ್ತು. ಒಂದು ಕ್ಷಣ ಸುಮ್ಮನಿದ್ದರೂ ಗಂಡನ ಜೀವ ಹೋಗುತ್ತಿತ್ತು’ ಅಂತ ಸುಜಾತಾ ಹೇಳಿದ್ದಾರೆ. ಸದ್ಯ ಕಾಗಜ್​ಪುರ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಸುರೇಶ್​ನನ್ನು ದಾಖಲಿಸಲಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ.

Advertisment

ಇದನ್ನೂ ಓದಿ: 5 ರಾಜ್ಯಗಳನ್ನು ನಡುಗಿಸಿದ ಸೈಕ್ಲೋನ್‌.. ಫೆಂಗಲ್‌ಗೆ ತುತ್ತಾದ 11 ಮಂದಿ; ಮನೆಯಿಂದ ಹೊರ ಬರೋಕೆ ಭಯ! VIDEO 

ಹುಲಿ ದಾಳಿ ವೇಳೆ ಸುಜಾತಾ ಗಾಬರಿಯಿಂದ ಓಡಿ ಹೋಗಿದ್ದರೆ ಹುಲಿ ರೈತ ಸುರೇಶ್​​ನನ್ನು ಸಾಯಿಸುತ್ತಿತ್ತು. ಸುಜಾತಾ ಧೈರ್ಯ ಪ್ರದರ್ಶಿಸಿ ಪತಿಯ ಪ್ರಾಣ ಉಳಿಸಿದ್ದು ಸ್ಥಳೀಯರು, ಅರಣ್ಯ ಅಧಿಕಾರಿಗಳು ಸುಜಾತಾ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ಶನಿವಾರ ಸುರೇಶ್​ ಮೇಲೆ ದಾಳಿ ಮಾಡಿದ್ದ ಹುಲಿ, ಶುಕ್ರವಾರದಂದು ಗನ್ನಾರಂನಲ್ಲಿ ಮಹಿಳೆ ಒಬ್ಬರನ್ನು ಕೊಂದು ಹಾಕಿದೆ. ಅಲ್ಲಿಂದ ಸುಮಾರು 20 ಕಿಮೀ ಪ್ರಯಾಣಿಸಿದೆ. ದುಬ್ಬಗುಡ್ಡದಲ್ಲಿ ರೈತ ಸುರೇಶ್​ ಮೇಲೆ ಹುಲಿ ದಾಳಿ ಮಾಡಿದೆ. ಹುಲಿಗಳು ನಿತ್ಯ ಸುಮಾರು 50 ಕಿಮೀ ಪ್ರಯಾಣಿಸುತ್ತವೆ ಅಂತ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಹುಲಿ ಪತ್ತೆಗೆ ಅರಣ್ಯ ಇಲಾಖೆ ಶೋಧ ನಡೆಸುತ್ತಿದ್ದು, ಡ್ರೋಣ್ ಮೂಲಕ ಕಾರ್ಯಾಚರಣೆ ಆರಂಭಿಸಿದೆ. ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment