newsfirstkannada.com

ಹರ ಹರ ಮಹಾದೇವ.. ಶಿವಲಿಂಗವನ್ನೇ ಮದುವೆಯಾದ ಬಿಕಾಂ ಓದಿದ ಯುವತಿ; ವಿವಾಹ ಮಹೋತ್ಸವ ಹೇಗಿತ್ತು ಗೊತ್ತಾ?

Share :

25-07-2023

    ನನಗೆ ಶಿವನಂತಹ ಪತಿಯೇ ಬೇಕು ಎಂದಿದ್ದ ಯುವತಿ

    ಶಿವಲಿಂಗದ ಜೊತೆ ನವವಧುವಿನ ಅದ್ಧೂರಿ ಮೆರವಣಿಗೆ

    ಬಾಲ್ಯದಿಂದಲೇ ಶಿವನನ್ನು ಪ್ರೀತಿಸಿ, ಆರಾಧಿಸುತ್ತಿದ್ದ ಹುಡುಗಿ

ಝಾನ್ಸಿ: ಸಾಮಾನ್ಯವಾಗಿ ಮನ ಮೆಚ್ಚಿದ ಹುಡುಗಿಯನ್ನ ಹುಡುಗ ಮದುವೆ ಆದಾಗ, ಪ್ರೀತಿಸಿದ ಯುವತಿ ಜೊತೆ ಸಪ್ತಪದಿ ತುಳಿಯುವಾಗ ಅದ್ಧೂರಿ ವಿವಾಹಗಳು ನಡೆಯೋದನ್ನು ನೋಡಿರ್ತೀವಿ. ಆದ್ರೆ, ದೇವರ ಜೊತೆ ಶಾಸ್ತ್ರ, ಸಂಪ್ರದಾಯಬದ್ಧವಾಗಿ ಮದುವೆ ಆಗೋದನ್ನ ನೋಡಿದ್ದೀರಾ. ಉತ್ತರಪ್ರದೇಶದ ಝಾನ್ಸಿಯಲ್ಲಿ ಶಿವಲಿಂಗದ ಜೊತೆ ಶಾಸ್ತ್ರೋಕ್ತವಾದ ವಿವಾಹ ಮಹೋತ್ಸವ ನಡೆದಿದೆ. ಬಿಕಾಂ ಓದಿದ ಯುವತಿ ಅದ್ಧೂರಿಯಾಗಿ ಶಿವಲಿಂಗವನ್ನೇ ವರಿಸಿದ್ದಾಳೆ.

ಶಿವಲಿಂಗವನ್ನೇ ಯುವತಿ ಅದ್ಧೂರಿಯಾಗಿ ಮದುವೆಯಾಗಿರೋ ಅಪರೂಪದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಝಾನ್ಸಿಯ ಗೋಲ್ಡಿ ಹೆಸರಿನ ಯುವತಿ ಕುಟುಂಬಸ್ಥರು, ಸಂಬಂಧಿಕರ ಸಮ್ಮುಖದಲ್ಲಿ ಶಿವನೇ ತನ್ನ ಪತಿಯೆಂದು ಸ್ವೀಕರಿಸಿದ್ದಾಳೆ. ಬಿಕಾಂ ಓದಿರುವ ಗೋಲ್ಡಿಗೆ ಬಾಲ್ಯದಿಂದಲೇ ಶಿವನೆಂದರೆ ಬಹಳ ಪ್ರೀತಿ. ನನಗೆ ಶಿವನಂತಹ ಪತಿಯೇ ಬೇಕು ಎಂದು ಆಸೆಪಟ್ಟಿದ್ದಾಳೆ. ಕೊನೆಗೆ ಶಿವನಂತಹ ಗಂಡ ಸಿಗದಿದ್ದರೂ ಶಿವನನ್ನೇ ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದಳಂತೆ. ಇದೀಗ ಬಾಲ್ಯದ ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾಳೆ.

ಕಳೆದ ಜುಲೈ 23ರಂದು ಝಾನ್ಸಿಯಲ್ಲಿ ಗೋಲ್ಡಿ ಹಾಗೂ ಶಿವಲಿಂಗದ ಜೊತೆ ಅದ್ಧೂರಿ ಕಲ್ಯಾಣ ನೆರವೇರಿದೆ. ಯುವತಿಯ ಆಸೆಗೆ ಒಪ್ಪಿಕೊಂಡ ಪೋಷಕರು ಮದುವೆಗೆ ಒಂದು ತಿಂಗಳಿಂದ ಭರ್ಜರಿ ತಯಾರಿ ನಡೆಸಿದ್ದಾರೆ. ಶಿವಲಿಂಗ ಹಾಗೂ ಯುವತಿಯನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗಿದೆ. ರಸ್ತೆಯಲ್ಲಿ ಶಿವಲಿಂಗದ ಮೆರವಣಿಗೆ ನಡೆಸಿ ಸಂಪ್ರದಾಯಬದ್ಧವಾಗಿ ಸಂಬಂಧಿಕರ ಮುಂದೆ ಮದುವೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹರ ಹರ ಮಹಾದೇವ.. ಶಿವಲಿಂಗವನ್ನೇ ಮದುವೆಯಾದ ಬಿಕಾಂ ಓದಿದ ಯುವತಿ; ವಿವಾಹ ಮಹೋತ್ಸವ ಹೇಗಿತ್ತು ಗೊತ್ತಾ?

https://newsfirstlive.com/wp-content/uploads/2023/07/Lord-Shiva.jpg

Load More