newsfirstkannada.com

ಸಾವಿನಲ್ಲೂ ಸಾರ್ಥಕತೆ ಮೆರೆದ 26 ವರ್ಷದ ಯುವಕ.. ಹೃದಯ, ಕಣ್ಣು, ಕಿಡ್ನಿ ಸೇರಿ ಅಂಗಾಂಗಗಳು ದಾನ

Share :

21-11-2023

    ಮೈಸೂರು ಬಳಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ

    ದೊಡ್ಡಬಳ್ಳಾಪುರ ತಾಲ್ಲೂಕು ಅಂತರಹಳ್ಳಿ ಗ್ರಾಮದ ಮಧುಸೂದನ

    ಹೃದಯ, 2 ಕಿಡ್ನಿ, ಶ್ವಾಸಕೋಶ, ಎರಡು ಕಣ್ಣು ಸೇರಿ ಅಂಗಾಂಗ ದಾನ

ಬದುಕಿದ್ದಾಗ ಇನ್ನೊಬ್ಬರಿಗೆ ಸಹಾಯ ಮಾಡೋದಕ್ಕಿಂತ ಸತ್ತ ಮೇಲೆ ಬೇರೆಯವರ ಬದುಕಿಗೆ ಆಸರೆಯಾಗೋದು ನಿಜವಾದ ಮನುಷ್ಯ ಧರ್ಮ. ಮಾನವೀಯತೆ ಮರೆಯಾಗಿರೋ ಕಾಲದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಅಂತರಹಳ್ಳಿ ಗ್ರಾಮದ ಯುವಕ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾನೆ. ಅಂಗಾಂಗ ದಾನ ಮಾಡೋ ಮೂಲಕ ಯುವಕನ ಕುಟುಂಬಸ್ಥರು ಬಹಳಷ್ಟು ಜನರಿಗೆ ಉಪಕಾರ ಮಾಡಿದ್ದಾರೆ.

ದೊಡ್ಡಬಳ್ಳಾಪುರ ತಾಲ್ಲೂಕು ಅಂತರಹಳ್ಳಿ ಗ್ರಾಮದ 26 ವರ್ಷದ ಮಧುಸೂದನ ಅವರ ಅಂಗಾಂಗ ದಾನ ಮಾಡಲಾಗಿದೆ. ಮಧುಸೂದನ್ ಮೆದುಳು ನಿಷ್ಕ್ರಿಯವಾದ ಹಿನ್ನೆಲೆ ಅವರ ಕುಟುಂಬಸ್ಥರು ಅಂಗಾಂಗ ದಾನ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.

ಕಳೆದ ನವೆಂಬರ್ 12ರಂದು ಪ್ರವಾಸ ಹೋಗಿದ್ದ ಮಧುಸೂದನ್‌ ಅವರಿಗೆ ಮೈಸೂರಿನ ಬಳಿ ಅಪಘಾತ ಸಂಭವಿಸಿತ್ತು. ನಾಲ್ಕು ದಿನ ಮೈಸೂರಿನಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಮಧುಸೂದನ್ ಚೇತರಿಸಿಕೊಂಡಿಲ್ಲ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.

ಗಂಭೀರ ಗಾಯಗೊಂಡಿದ್ದ ಮಧುಸೂದನ್ ಮೆದುಳು ನಿಷ್ಕ್ರಿಯಗೊಂಡಿದ್ದು, ಯುವಕನ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ. ಹೃದಯ, 2 ಕಿಡ್ನಿ, ಶ್ವಾಸಕೋಶ, ಎರಡು ಕಣ್ಣು ಸೇರಿದಂತೆ ಹಲವು ಅಂಗಗಳನ್ನು ದಾನ ಮಾಡಲಾಗಿದೆ. ಒಂದೇ ಒಂದು ಕಣ್ಣು ದಾನ ಮಾಡಿದ್ರೂ ಇತರರ ಬಾಳಲ್ಲಿ ಬೆಳಕಾಗಬಹುದು. ಅಂತಹದರಲ್ಲಿ ಮಧುಸೂದನ್ 2 ಕಣ್ಣು, ಹೃದಯ, ಕಿಡ್ನಿ, ಶ್ವಾಸಕೋಶ ಮತ್ತು ಅಂಗಾಂಗಳಿಂದ ಸುಮಾರು 10ಕ್ಕೂ ಜನರ ಜೀವ ಉಳಿಸಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವಿನಲ್ಲೂ ಸಾರ್ಥಕತೆ ಮೆರೆದ 26 ವರ್ಷದ ಯುವಕ.. ಹೃದಯ, ಕಣ್ಣು, ಕಿಡ್ನಿ ಸೇರಿ ಅಂಗಾಂಗಗಳು ದಾನ

https://newsfirstlive.com/wp-content/uploads/2023/11/Chikkaballapura.jpg

Load More