newsfirstkannada.com

ಪದೇ ಪದೇ ಕ್ವಾಟ್ಲೆ ಕೊಟ್ಟು ಕಾಲೆಳೆಯುತ್ತಿದ್ದ ಗೆಳೆಯನನ್ನೇ ಕೊಂದ ಯುವಕರು; ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತನ ಬರ್ಬರ ಹತ್ಯೆ

Share :

18-11-2023

    ಎಲ್ಲರ ಕಾಲೆಳೆದು ಮಾತನಾಡುತ್ತಿದ್ದ ಯುವಕನ ಕೊಂದ ಗೆಳೆಯರು

    ಕೂಲಿ ಕೆಲಸ ಅರಿಸಿ ಗೆಳೆಯರೊಂದಿಗೆ ಬೆಂಗಳೂರಿಗೆ ಬಂದಿದ್ದ ಲಕ್ಷ್ಮಣ್‌

    ಪಾರ್ಟಿ ವೇಳೆ ಶುರುವಾದ ಸ್ನೇಹಿತರ ಜಗಳ ಭೀಕರ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಜೀವದ ಗೆಳೆಯರ ಜೊತೆ ಕಾಲೆಳೆದು ಮಾತನಾಡೋ ಮುನ್ನ ಹುಷಾರ್ ಆಗಿರಬೇಕು. ಯಾಕಂದ್ರೆ ಸಿಲ್ಲಿ, ಸಿಲ್ಲಿ ಕಾರಣಗಳಿಗೆಲ್ಲ ಶುರುವಾಗೋ ಕಿರಿಕ್‌ಗಳು ಭಯಾನಕ ಕೊಲೆಯಲ್ಲಿ ಎಂಡ್ ಆಗುತ್ತದೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದೇ ಬರ್ಬರ ಹತ್ಯೆಯಾಗಿದೆ. ಸ್ನೇಹಿತರ ರಕ್ತಪಾತಕ್ಕೆ ಕಾರಣ ಏನು ಅಂತ ಕೇಳಿದ್ರೆ ನೀವೂ ಶಾಕ್ ಆಗ್ತೀರಾ.

ಎಲ್ಲಾ ಫ್ರೆಂಡ್ಸ್‌ ಒಟ್ಟಿಗೆ ಸೇರಿದ್ರೆ ಕಾಮಿಡಿ ಮಾಡೋದು, ಒಬ್ಬರನ್ನೊಬ್ಬರು ಕಿಚಾಯಿಸುತ್ತಾ ಮಾತನಾಡೋದು ಕಾಮನ್. ಆದ್ರೆ ಕೊತ್ತನೂರಿನಲ್ಲಿ ಪದೇ ಪದೇ ಕೀಟಲೆ ಮಾಡಿ ಕಿಚಾಯಿಸುತ್ತಿದ್ದ ಎಂದು ಗೆಳೆಯನನ್ನೇ ಯುವಕರು ಕೊಂದು ಹಾಕಿದ್ದಾರೆ. ಕೊನೆಗೆ ಖಾಲಿ ಜಮೀನಿನಲ್ಲಿ ಶವ ಎಸೆದು ಎಸ್ಕೇಪ್ ಆಗಿದ್ದರು.

ಕೂಲಿ ಕೆಲಸಕ್ಕೆ ಬೆಂಗಳೂರಿಗೆ ಬಂದಿದ್ದ!

ಜಾರ್ಖಂಡ್ ಮೂಲದ ಲಕ್ಷಣ್ ಮಾಂಜಿ ಕೊಲೆಯಾದ ವ್ಯಕ್ತಿ. ಈತ ಇತ್ತೀಚೆಗೆ ಕೂಲಿ ಕೆಲಸ ಅರಿಸಿ ಗೆಳೆಯರೊಂದಿಗೆ ಬೆಂಗಳೂರಿಗೆ ಬಂದಿದ್ದ. ಗೆಳೆಯರೊಂದಿಗೆ ಬೆಂಗಳೂರಲ್ಲಿ ವಾಸವಿದ್ದ ಮೃತ ಲಕ್ಷ್ಮಣ್, ನವೆಂಬರ್ 16ರ ರಾತ್ರಿ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿದ್ದಾರೆ. ಪಾರ್ಟಿ ವೇಳೆ ಶುರುವಾದ ಗೆಳೆಯರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಯುವಕನ ಶವ ಪತ್ತೆಯಾದ 24 ಗಂಟೆಗಳಲ್ಲೇ ಕೊತ್ತನೂರು ಪೊಲೀಸರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯ ಸಂಬಂಧ ಜಗದೇವ್ ಹಾಗೂ ಚಂದನ್ ಕುಮಾರ್ ಎಂಬುವವರನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

ಲಕ್ಷ್ಮಣ್‌ ಮಾಂಜಿ ಜಾರ್ಖಂಡ್‌ನಲ್ಲಿದ್ದಾಗಿನಿಂದಲೂ ಎಲ್ಲರ ಕಾಲೆಳೆದು ಮಾತನಾಡುತ್ತಿದ್ದನಂತೆ. ಕುಡಿದ ಮೇಲೂ ಸಹ ಅದೇ ರೀತಿ ಮಾತಾಡಿದಾಗ ಹೊರಗೆ ಕರೆ ತಂದು ಸ್ನೇಹಿತರೆ ಕೊಲೆ ಮಾಡಿದ್ದಾರೆ. ಬೈರತಿಯ ಕ್ಯಾಲಸನಹಳ್ಳಿಯ ಖಾಲಿ ಜಮೀನಿಗೆ ಕರೆತಂದು ಹಾಲೋ ಬ್ಲಾಕ್ ಅನ್ನು ತಲೆಯ ಮೇಲೆ ಹಾಕಿ ಜಜ್ಜಿ ಕೊಲೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪದೇ ಪದೇ ಕ್ವಾಟ್ಲೆ ಕೊಟ್ಟು ಕಾಲೆಳೆಯುತ್ತಿದ್ದ ಗೆಳೆಯನನ್ನೇ ಕೊಂದ ಯುವಕರು; ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತನ ಬರ್ಬರ ಹತ್ಯೆ

https://newsfirstlive.com/wp-content/uploads/2023/11/Bangalore-Killer.jpg

Load More