newsfirstkannada.com

ಮನೆಗೆ ಆಸರೆಯಾಗಿದ್ದ ಒಬ್ಬನೇ ಮಗ ಅರಿಶಿನಗುಂಡಿ ಪಾಲಾದನು.. ದುಃಖದ ಮಡುವಿನಲ್ಲಿ ಶರತ್​ ಕುಟುಂಬ

Share :

25-07-2023

    ಅರಿಶಿನಗುಂಡಿ ಫಾಲ್ಸ್​ನಲ್ಲಿ ಬಿದ್ದ ಯುವಕನ ನಾಪತ್ತೆ ಪ್ರಕರಣ

    ಭದ್ರಾವತಿಯ ಕಡದಕಟ್ಟೆಯ ಸ್ನೇಹಿತರೊಂದಿಗೆ ಟ್ರಿಪ್​ ಹೋಗಿದ್ದನು

    23 ವರ್ಷದ ಶರತ್​ ಕುಮಾರ್​ ಮನೆಗೆ ಆಸರೆಯಾಗಿದ್ದನು

ಕೊಲ್ಲೂರು ಬಳಿ ಅರಿಶಿನಗುಂಡಿ ಫಾಲ್ಸ್ ನಲ್ಲಿ ಬಿದ್ದು ನಾಪತ್ತೆಯಾದ ಯುವಕ ಶರತ್ ಕುಮಾರ್ ಮನೆಯಲ್ಲಿ ದುಃಖದ ವಾತಾವರಣ ಮಡುಗಟ್ಟಿದೆ.

ನಾಪತ್ತೆಯಾದ ಶರತ್ ಕುಮಾರನು ಮುನಿಸ್ವಾಮಿ ಮತ್ತು ರಾಧಾ ದಂಪತಿಯ ಏಕೈಕ ಪುತ್ರನಾಗಿದ್ದು, ಭದ್ರಾವತಿಯ ಕೆ ಎಚ್ ನಗರದಲ್ಲಿರುವ ನಿವಾಸಿಯಾಗಿದ್ದನು. ಕಳೆದ ಭಾನುವಾರ ಬೆಳಗ್ಗೆ ಶರತ್ ಸ್ನೇಹಿತರೊಂದಿಗೆ ಕಾರಿನಲ್ಲಿ ಮನೆಯಿಂದ ಟ್ರಿಪ್ ಹೊರಟಿದ್ದನು. ಭದ್ರಾವತಿಯ ಕಡದಕಟ್ಟೆಯ ಸ್ನೇಹಿತರೊಂದಿಗೆ ತೆರಳಿದ್ದನು.

ಹಿಟಾಚಿ ಹಾಗೂ ಅಡಕೆ ತಟ್ಟೆ ಫ್ಯಾಕ್ಟರಿ ಇಟ್ಟುಕೊಂಡು ಶರತ್ ದುಡಿಮೆ ಮಾಡುತ್ತಿದ್ದನು. 23 ವರ್ಷದ ಈತ ಮನೆಗೆ ಆಸರೆಯಾಗಿದ್ದನು.

ಮಳೆಗಾಲದ ಹಿನ್ನೆಲೆಯಲ್ಲಿ ಹೆಚ್ಚಿನ ಕೆಲಸವಿಲ್ಲದ ಕಾರಣ ಸ್ನೇಹಿತರೊಂದಿಗೆ ಟ್ರಿಪ್ ಹೋಗಿದ್ದ ಶರತ್. ನಿನ್ನೆ ಅರಶಿನ ಗುಂಡಿ ಫಾಲ್ಸ್​ನಲ್ಲಿ ನೀರಿಗೆ ಜಾರಿ ಬಿದ್ದಿದ್ದಾನೆ.

ಇನ್ನು ಶರತ್ ಇಬ್ಬರು ತಂಗಿ ಹಾಗೂ ತಂದೆ-ತಾಯಿಯೊಂದಿಗೆ ವಾಸಿಸುತ್ತಿದ್ದನು. ಆದರೀಗ ಆತನ ನಾಪತ್ತೆ ಸಂಗತಿ ಕೇಳಿ ಮನೆಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರು ಶರತ್ ಮನೆಗೆ ಭೇಟಿ ನೀಡಿ ಧೈರ್ಯ ತುಂಬುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆಗೆ ಆಸರೆಯಾಗಿದ್ದ ಒಬ್ಬನೇ ಮಗ ಅರಿಶಿನಗುಂಡಿ ಪಾಲಾದನು.. ದುಃಖದ ಮಡುವಿನಲ್ಲಿ ಶರತ್​ ಕುಟುಂಬ

https://newsfirstlive.com/wp-content/uploads/2023/07/Sharath-Kumar.jpg

Load More