ಚಟ್ಟದ ಮೇಲೆ ಮಲಗಿದ್ದ ಶವಕ್ಕೆ ಏನಾಯ್ತು?
ಚಿತಾಗಾರದಲ್ಲಿ ನೆರೆದಿದ್ದವರು ಓಡಿ ಹೋದ್ರು
ಇದು ಸಿನಿಮಾ ಶೂಟಿಂಗ್ ಸೀನ್ ಅಲ್ಲವೇ ಅಲ್ಲ
ಅಲ್ಲಿ ಎಲ್ಲವೂ ರೆಡಿಯಾಗಿತ್ತು. ಸಂಬಂಧಿಕರು, ನೆರೆಹೊರೆಯವರೆಲ್ಲಾ ಸೇರಿದ್ದರು. ಚಟ್ಟದ ಮೇಲೆ ಶವವೂ ಮಲಗಿತ್ತು. ಇನ್ನೆನ್ನೂ ಅಂತ್ಯ ಸಂಸ್ಕಾರ ಮುಗಿಸಬೇಕು ಅನ್ನುವಷ್ಟರಲ್ಲಿ ಸತ್ತಿದ್ದ ಯುವಕ ಅಲುಗಾಡಲು ಆರಂಭಿಸಿದ್ದಾನೆ. ಇದು ಯಾವುದೋ ಸಿನಿಮಾದ ಸೀನ್ ಅಲ್ಲ. ರಿಯಲ್ ಆಗಿ ನಡೆದಿರೋ ಮೈ ಜುಮ್ಮೆನ್ನಿಸೋ ಘಟನೆ.
ಮಧ್ಯಪ್ರದೇಶದ ಮೊರೆನಾದಲ್ಲಿ ಅಂತಿಮ ವಿಧಿವಿಧಾನಗಳಿಗೆ ಕೆಲವೇ ಕೆಲವು ನಿಮಿಷ ಬಾಕಿ ಇರುವಾಗ ವ್ಯಕ್ತಿಯೊಬ್ಬ ಚಿತಾಗಾರದಲ್ಲಿ ಎಚ್ಚರಗೊಂಡಿದ್ದಾನೆ. ತಕ್ಷಣವೇ ಬೆಚ್ಚಿಬಿದ್ದ ಸಂಬಂಧಿಕರಲ್ಲಿ ಕೆಲವರು ಓಡಿ ಹೋಗಿದ್ದಾರೆ. ಇನ್ನೂ ಕೆಲವರು ಸತ್ತಿದ್ದಾನೆ ಎಂದು ನಂಬಿದ್ದವನ ಉಸಿರಾಟ ಕಂಡು ಬೆಚ್ಚಿ ಬಿದ್ದಿದ್ದಾರೆ. ಮೂಗು, ಬಾಯಿಯ ಮೇಲೆ ಬೆರಳುಗಳನ್ನ ಇಟ್ಟು ವ್ಯಕ್ತಿಯ ಉಸಿರಾಟವನ್ನು ಪರೀಕ್ಷಿಸಿದ್ದಾರೆ.
ಜೀತು ಪ್ರಜಾಪತಿ ಎಂಬ ಯುವಕ ಹಲವು ದಿನಗಳಿಂದ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದ. ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರಿಂದ ಈತ ಸತ್ತೇ ಹೋದ ಎಂದು ಮನೆಯವರು, ಸಂಬಂಧಿಕರು ನಂಬಿದ್ದಾರೆ. ಸಂಬಂಧಿಕರು, ನೆರೆಹೊರೆಯವರು ಜೀತು ಪ್ರಜಾಪತಿ ಅವರ ಅಂತ್ಯಕ್ರಿಯೆಗೆ ಸಿದ್ಧತೆಯನ್ನು ಆರಂಭಿಸಿದ್ದಾರೆ. ಮೊರೆನಾದ ಶಾಂತಿಧಾಮಕ್ಕೆ ಶವವನ್ನು ಎತ್ತಿಕೊಂಡು ಹೋಗಿದ್ದಾರೆ.
ಶಾಂತಿಧಾಮದಲ್ಲಿ ಅಂತಿಮ ವಿಧಿವಿಧಾನಗಳು ಆರಂಭವಾಗಿದೆ. ಇನ್ನೆನ್ನೂ ಅಂತ್ಯಸಂಸ್ಕಾರ ನೆರವೇರಬೇಕು ಅನ್ನುವಷ್ಟರಲ್ಲಿ ದೇಹವು ಇದ್ದಕ್ಕಿದ್ದಂತೆ ಉಸಿರಾಡಲು ಆರಂಭಿಸಿದೆ. ತಕ್ಷಣವೇ ಸ್ಥಳಕ್ಕೆ ವೈದ್ಯರನ್ನು ಕರೆಸಿ ತಪಾಸಣೆ ನಡೆಸಲಾಗಿದೆ. ವೈದ್ಯರು ಪರೀಕ್ಷಿಸಿದಾಗ ವ್ಯಕ್ತಿಯ ಹೃದಯ ಇನ್ನೂ ಬಡಿಯುತ್ತಿದೆ ಅನ್ನೋದು ಗೊತ್ತಾಗಿದೆ. ಸತ್ತವನು ಇನ್ನೂ ಬದುಕಿದ್ದಾನೆ ಅನ್ನೋದು ಗೊತ್ತಾದ ಮೇಲೆ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ