ಬೆಂಗಳೂರಿನಿಂದ ರಾಮನಗರದ ಕಡೆ ವೇಗವಾಗಿ ಬಂದ ಕಾರು
FIR ನಲ್ಲಿ ಅಪಘಾತ ಮಾಡಿದವರ ಹೆಸರು ದಾಖಲಿಸದ ಪೊಲೀಸರು
ಡಿ.ಕೆ ಶಿವಕುಮಾರ್, ಸಂಸದ ಡಿ.ಕೆ ಸುರೇಶ್ ಸೂಚನೆಗೂ ಕಿಮ್ಮಂತಿಲ್ಲ?
ರಾಮನಗರ: ಇನ್ನೂ ಬಾಳಿ ಬದುಕಬೇಕಾದ ವಯಸ್ಸು. ಸಾವಿರಾರು ಕನಸು ಕಟ್ಟಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಲ್ಲದೇ ದಿಕ್ಕಿಲ್ಲದ ತಾಯಿಗೆ ತಾನೇ ಮಗನ ಸ್ಥಾನದಲ್ಲಿ ನಿಂತು ಮನೆ ನಡೆಸ್ತಿದ್ದವಳು. ಈ ಫೋಟೋದಲ್ಲಿರುವ ಯುವತಿ ಹೆಸರು ಅಂಜುಮ್. ಕನಕಪುರ ಮುಖ್ಯರಸ್ತೆಯ ಆವಲಹಳ್ಳಿಯಿಂದ ರಾಮನಗರದಲ್ಲಿರುವ ತನ್ನ ಅಜ್ಜಿ ಮನೆಗೆ ಹೋಗ್ತಾ ಇದ್ದಳು.
ಈ ವೇಳೆ ರಾಮನಗರ ಪಟ್ಟಣ ನಗರಸಭೆ ಆಯುಕ್ತರ ಕಾರು ಅಂಜುಮ್ ಹೋಗುತ್ತಿದ್ದ ಬೈಕ್‌ಗೆ ಗುದ್ದಿದೆ. ಈ ಭೀಕರ ಅಪಘಾತದಿಂದಾಗಿ ಅಂಜುಮ್ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ವೇಗವಾಗಿ ಓವರ್ ಟೇಕ್ ಮಾಡಲು ಹೋದ ನಗರಸಭೆ ಆಯುಕ್ತ ನಾಗೇಶ್ ಅವರ ಕಾರು ಅಂಜುಮ್ ಹಾಗೂ ಆತನ ಸಂಬಂಧಿ ಕೂತಿದ್ದ ಬೈಕ್‌ಗೆ ಗುದ್ದಿದೆ. ಇದರಿಂದ ಅಂಜುಮ್ ತಲೆಗೆ ಬಲವಾದ ಪೆಟ್ಟಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ ಎನ್ನಲಾಗಿದೆ.
ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಡುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಆಯಾ ಜಿಲ್ಲೆಯ ಹೆಡ್ ಕ್ವಾರ್ಟರ್ಸ್‌ಗಳಲ್ಲೇ ಇರಬೇಕು. ಹೀಗಂತಾ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಂಸದ ಡಿ.ಕೆ ಸುರೇಶ್ ಅವರು ಇತ್ತೀಚೆಗೆ ಸೂಚನೆ ಕೊಟ್ಟಿದ್ದರು. ಆದರೆ ನಗರಸಭೆ ಆಯುಕ್ತ ನಾಗೇಶ್ ಈ ಸೂಚನೆ ಮೀರಿ ಬೆಂಗಳೂರು ನಗರದಲ್ಲೇ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.
ನಗರಸಭೆ ಆಯುಕ್ತ ನಾಗೇಶ್ ಅವರು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರ ಭೇಟಿ ಆಗೋದಕ್ಕೆ ಬೆಂಗಳೂರಿನಿಂದ ರಾಮನಗರದ ಕಡೆ ವೇಗವಾಗಿ ಕಾರು ಓಡಿಸಿಕೊಂಡು ಬಂದಿದ್ದಾರೆ. ಈ ವೇಳೆ, ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರನ್ನು ಓವರ್ ಟೇಕ್ ಮಾಡಲು ಹೋದಾಗ ಕಾರಿನ ಹಿಂಭಾಗ ತಾಗಿದೆ ಎನ್ನಲಾಗಿದೆ. ಇದ್ರಿಂದಾಗಿ ಬ್ಯಾಲೆನ್ಸ್ ಮಾಡಿಕೊಳ್ಳಲಾಗದ ಬೈಕ್ ಸವಾರ ರಸ್ತೆಯ ಪಕ್ಕಕ್ಕೆ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಅಂಜುಮ್ ಕಿವಿಯಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ರಸ್ತೆ ಅಪಘಾತವಾದ ನಂತರ ರಾಮನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ನಗರಸಭೆ ಆಯುಕ್ತ ನಾಗೇಶ್ ಅವರ ಕಾರು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅಪಘಾತ ಮಾಡಿದ ಆಯುಕ್ತರನ್ನು ಬಂಧಿಸಿಲ್ಲ ಎಂದು ಅಂಜುಮ್ ಪೋಷಕರು ಆರೋಪ ಮಾಡಿದ್ದಾರೆ. FIR ನಲ್ಲಿ ಅಪಘಾತ ಮಾಡಿದವರ ಹೆಸರನ್ನು ಅನೌನ್ ಎಂದು ಬರೆಯುವ ಮೂಲಕ ಆಯುಕ್ತ ನಾಗೇಶ್‌ರನ್ನು ಉಳಿಸುವ ಕೆಲಸಕ್ಕೆ ಮುಂದಾಗಿದ್ರು ಅನ್ನೋ ಆರೋಪವೂ ಕೇಳಿ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ