newsfirstkannada.com

ನನ್ನ ನಾಯಿ ತರ ಡೌಟ್‌ ಪಡುತ್ತಿದ್ದ.. ಮೋಸಗಾರನ ಬಲೆಗೆ ಬಿದ್ದು ಪ್ರಾಣ ಬಿಟ್ಟ ಯುವತಿ; ಅಸಲಿಗೆ ಆಗಿದ್ದೇನು?

Share :

27-07-2023

  ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಜಾರೂ..

  ಎಲ್ಲಾ ಹುಡುಗಿಯರಲ್ಲೂ ವಿನಂತಿ ಯಾರನ್ನು ಪ್ರೀತಿ ಮಾಡಬೇಡಿ

  ಅಮ್ಮ ಪ್ಲೀಸ್ ಕ್ಷಮಿಸಿಬಿಡಿ.. ಗುಡ್ ಬೈ ಟು ದಿಸ್ ವರ್ಲ್ಡ್

ಬೆಂಗಳೂರು: ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಜಾರೂ. ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟಂಗೆ ಕತ್ತೀಗೆ. ಈ ಯುವತಿಯ ಬಾಳಲ್ಲೂ ಈ ಸಾಲು ಸತ್ಯವಾಗಿದೆ. ಪ್ರಿಯಕರನ ಹೆಸರು ಬರೆದಿಟ್ಟು ಯುವತಿ ಪ್ರಾಣ ಬಿಟ್ಟಿರೋ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಕೆಂಪಾಪುರದಲ್ಲಿ ನಡೆದಿದೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ವಿದ್ಯಾಶ್ರೀ ಹಾಗೂ ಆರೋಪಿ ಅಕ್ಷಯ್ ಪ್ರೀತಿಸುತ್ತಿದ್ದರು. ಇವರಿಬ್ಬರ್‌ ಲವ್‌ನಲ್ಲಿ ಕಿರಿಕ್‌ ಆಗಿದ್ದು, ವಿದ್ಯಾಶ್ರೀ ಮನೆಯಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಜೂನ್ 22ರಂದು ಈ ಘಟನೆ ನಡೆದಿದ್ದು, ಮನೆಯಲ್ಲಿ ವಿದ್ಯಾಶ್ರೀ ಬರೆದಿದ್ದ ಲೆಟರ್‌ವೊಂದು ಸೋಲದೇವನಹಳ್ಳಿ ಪೊಲೀಸರಿಗೆ ಸಿಕ್ಕಿದೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಅಕ್ಷಯ್‌ನನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ.

ಯುವತಿ ವಿದ್ಯಾಶ್ರೀ ಬರೆದಿರುವ ಲೆಟರ್‌ನಲ್ಲಿ ನನ್ನ ಸಾವಿಗೆ ಅಕ್ಷಯ್ ಕಾರಣ. ಅವನು ನನ್ನ ನಾಯಿ ತರ ಡೌಟ್ ಪಡುತ್ತಲೇ ಇದ್ದಾನೆ. ನನಗೆ ಕೊಡಬೇಕಾದ 1 ಲಕ್ಷ 76 ಸಾವಿರ ಕೇಳಿದಾಗ ನನಗೆ, ನನ್ನ ಫ್ಯಾಮಿಲಿಗೆ ಕೆಟ್ಟ, ಕೆಟ್ಟ ಮಾತಿನಲ್ಲಿ ಬೈದು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಅಕ್ಷಯ್‌ ನನ್ನನ್ನ ಡಿಪ್ರೆಷನ್‌ಗೆ ಹಾಕಿದ್ದಾನೆ. ನನಗೆ ಬದುಕಲು ಆಗ್ತಿಲ್ಲ. ಡೇ ಬೈ ಡೇ ನನಗೆ ತುಂಬಾ ಕಷ್ಟವಾಗ್ತಿದೆ. ಅಮ್ಮ, ಗುರು, ಮಾವ I am ಸ್ವಾರಿ. ಪ್ಲೀಸ್ ಕ್ಷಮಿಸಿಬಿಡಿ. ಎಲ್ಲಾ ಹುಡುಗಿಯರಲ್ಲೂ ವಿನಂತಿ ಯಾರನ್ನು ಪ್ರೀತಿ ಮಾಡಬೇಡಿ. ಗುಡ್ ಬೈ ಟು ದಿಸ್ ವರ್ಲ್ಡ್ ಎಂದು ಬರೆಯಲಾಗಿದೆ.

ಪ್ರೀತಿಯಿಂದ ಜೀವ ಬಿಟ್ಟ ವಿದ್ಯಾಶ್ರೀ ಮಾಡೆಲ್‌ ಕೂಡ ಆಗಿದ್ದು, ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ರೀಲ್ಸ್‌ಗಳನ್ನು ಮಾಡಿದ್ದಾರೆ. ರೀಲ್ಸ್‌ಗಳಲ್ಲಿ ಹಾಡು, ಡ್ಯಾನ್ಸ್‌ ಮಾಡ್ತಿದ್ದ ವಿದ್ಯಾ, ಆ್ಯಕ್ಟಿಂಗ್ ಹೇಳಿಕೊಡೋ ಕೆಲಸಕ್ಕೂ ಕೈ ಹಾಕಿದ್ದರು ಎನ್ನಲಾಗಿದೆ. ಆದ್ರೀಗ, ಲವ್ವರ್ ಜೊತೆ ಆದ ಜಗಳದಲ್ಲಿ ಪ್ರಾಣವನ್ನೇ ಬಿಟ್ಟಿದ್ದಾರೆ. ಎಲ್ಲಾ ಹುಡುಗಿಯರಲ್ಲೂ ವಿನಂತಿ ಯಾರನ್ನು ಪ್ರೀತಿ ಮಾಡಬೇಡಿ ಅನ್ನೋ ಕೊನೇ ಸಂದೇಶ ಕೊಟ್ಟು ಹೋಗಿದ್ದಾರೆ. ವಿದ್ಯಾಶ್ರೀಯ ಪೋಷಕರು ಶೋಕ ಸಾಗರದಲ್ಲಿದ್ದು, ಆರೋಪಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ನನ್ನ ನಾಯಿ ತರ ಡೌಟ್‌ ಪಡುತ್ತಿದ್ದ.. ಮೋಸಗಾರನ ಬಲೆಗೆ ಬಿದ್ದು ಪ್ರಾಣ ಬಿಟ್ಟ ಯುವತಿ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2023/07/BNG_Girl_die.jpg

Load More