newsfirstkannada.com

ದಮ್ಮಯ್ಯ ಅಂದ್ರು ಬಿಡದೇ ಎಳೆದೊಯ್ದ ರಾಕ್ಷಸರು.. ಉತ್ತರಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ

Share :

13-11-2023

    ದೀಪಾವಳಿ ಹಬ್ಬದ ದಿನವೇ ಉತ್ತರಪ್ರದೇಶದಲ್ಲಿ ಘೋರ ಘಟನೆ

    ಯುವತಿಯನ್ನ ಧರಧರನೇ ಎಳೆದೊಯ್ದ ಐವರು ಯುವಕರ ಗುಂಪು

    ಅತ್ಯಾಚಾರ ಮಾಡಿರೋ ಯುವಕರಲ್ಲಿ ಒಬ್ಬನು ಆಕೆಯ ಗೆಳೆಯನಂತೆ

ದೀಪಾವಳಿ ಹಬ್ಬದ ದಿನವೇ ಉತ್ತರಪ್ರದೇಶದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಆಗ್ರಾದಲ್ಲಿ ಐದು ಮಂದಿ ಯುವಕರು ಹೋಂ ಸ್ಟೇನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನ ಧರಧರನೇ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಕಳೆದ ಒಂದು ವರ್ಷದಿಂದ ಈ ಯುವತಿ ಆಗ್ರಾದ ಹೋಂ ಸ್ಟೇನಲ್ಲಿ ಕೆಲಸ ಮಾಡುತ್ತಿದ್ದಳು. ಪಿಜಿಯಲ್ಲಿ ವಾಸವಿದ್ದ ಈಕೆಗೆ ಯುವಕರು ಒತ್ತಾಯ ಪೂರ್ವಕವಾಗಿ ಕುಡಿಯಲು ಒತ್ತಾಯಿಸಿದ್ದಾರೆ. ಯುವಕರ ಒತ್ತಾಯಕ್ಕೆ ಮಣಿಯದಿದ್ದಾಗ ಯುವತಿಯನ್ನ ರೂಂಗೆ ಬಲವಂತವಾಗಿ ಎಳೆದೊಯ್ದು ಲಾಕ್ ಮಾಡಿಕೊಂಡಿದ್ದಾರೆ.

ಹೋಂ ಸ್ಟೇನಲ್ಲಿದ್ದ ಯುವತಿಯನ್ನು ಯುವಕರ ಗುಂಪು ಬಲವಂತವಾಗಿ ಎಳೆದೊಯ್ದಿರೋ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಯುವತಿ ಕಾಪಾಡಿ, ದಮ್ಮಯ್ಯ, ಬಿಟ್ಟು ಬಿಡಿ ಅಂತ ಎಷ್ಟೇ ಗೊಗೆರೆದು ಬೇಡಿಕೊಂಡ್ರು ಬಿಟ್ಟಿಲ್ಲ.

ಸಾಮೂಹಿಕ ಅತ್ಯಾಚಾರ ಮಾಡಿರೋ ಯುವಕರಲ್ಲಿ ಒಬ್ಬ ಯುವಕ ಆಕೆಯ ಗೆಳೆಯನೂ ಆಗಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ಯುವತಿ ಹೇಳಿಕೆ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು ಐವರು ರಾಕ್ಷಸರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶ ಆಗ್ರಾದಲ್ಲಿ ನಡೆದಿರೋ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ತೀವ್ರ ಘಟನೆ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಮ್ಮಯ್ಯ ಅಂದ್ರು ಬಿಡದೇ ಎಳೆದೊಯ್ದ ರಾಕ್ಷಸರು.. ಉತ್ತರಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ

https://newsfirstlive.com/wp-content/uploads/2023/11/Uttarpradesh-Agra-Gang-Rape.jpg

Load More