ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾಗೆ ಭಾರೀ ಮೋಸ
57.8 ಕೋಟಿ ಹಣ ಹೂಡಿಕೆ ಮಾಡಿ ಮೋಸ ಹೋದ್ರು
ನ್ಯಾಯ ಒದಗಿಸುವಂತೆ ಕೋರಿ ಠಾಣೆಗೆ ಬಂದಿದ್ದಾರೆ
ಶೂ ಬ್ಯುಸಿನೆಸ್ ಮ್ಯಾನ್ ಕಮಲೇಶ್ ಪರಿಖ್ ಹಾಗೂ ಅವರ ಪುತ್ರ ಧ್ರುವ ಪರಿಖ್ ವಿರುದ್ಧ ಮಾಜಿ ಕ್ರಿಕೆಟಿಕ ಆಕಾಶ್ ಚೋಪ್ರಾ ಎಫ್ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 406 ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಸ್ಪೋರ್ಟ್ಸ್ ಶೂನಲ್ಲಿ ಹೂಡಿಕೆ ಮಾಡುವ ಭರವಸೆ ನೀಡಿ ನನಗೆ ಮೋಸ ಮಾಡಿದ್ದಾರೆ ಎಂದು ಆಕಾಶ್ ಚೋಪ್ರಾ ಆರೋಪಿಸಿದ್ದಾರೆ. ಹರಿಪರ್ವತ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಬಂಡವಾಳ ಹೂಡಿಕೆ ಸಂಬಂಧ ನಾನು ಪರಿಖ್ಗೆ 57.8 ಕೋಟಿ ಹಣವನ್ನು ನೀಡಿದ್ದೆ. ಅದನ್ನು ತೆಗೆದುಕೊಂಡು ನನಗೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಮ್ಮ ಮಾತಿನಂತೆ ಪರಿಖ್ ಕುಟುಂಬ ನನಗೆ ಬಂಡವಾಳ ಹೂಡಿದ ಮೇಲೆ 30 ದಿನಗಳೊಳಗಾಗಿ ಅದರಿಂದ ಬರುವ ಲಾಭದಲ್ಲಿ ಶೇಕಡಾ 20 ರಷ್ಟು ಹಣವನ್ನು ನೀಡಬೇಕಿತ್ತು. ನಾನು ಹಣವನ್ನು ಕೇಳಿದಾಗ ಔಟ್ ಡೇಟೆಡ್ ಚೆಕ್ಗಳನ್ನು ನೀಡಿದ್ದಾರೆ. ಜೊತೆಗೆ ಹಣವನ್ನು ವಾಪಸ್ ಕೇಳಿದ ಮೇಲೆ ಒಂದು ವರ್ಷದೊಳಗೆ ಕೇವಲ 24.5 ಲಕ್ಷ ಹಣವನ್ನು ಮಾತ್ರ ವಾಪಸ್ ನೀಡಿದ್ದಾರೆ ಎಂದು ಚೋಪ್ರಾ ಆರೋಪಿಸಿದ್ದಾರೆ. ಅವರು ನನಗೆ ಇನ್ನೂ 33.3 ಲಕ್ಷ ಹಣ ವಾಪಸ್ ನೀಡಬೇಕಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್