ಲಾಪತಾ ಲೇಡೀಸ್ ಸಿನಿಮಾಗೆ ಬಂಡವಾಳ ಹಾಕಿದ ನಟ ಅಮೀರ್ ಖಾನ್
97ನೇ ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಕಿರಣ್ ರಾವ್ ಸಿನಿಮಾ ಆಯ್ಕೆ
2024 ಮಾರ್ಚ್ 1ರಂದು ಥಿಯೇಟರ್ಗಳಲ್ಲಿ ರಿಲೀಸ್ ಆಗಿತ್ತು ಈ ಸಿನಿಮಾ
ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’ ಸಿನಿಮಾ ವಿಶ್ವದ ಪ್ರತಿಷ್ಠಿತ ಆಸ್ಕರ್ 2025 ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. ಈ ಸಿನಿಮಾ ಆಸ್ಕರ್ 2025ಗೆ ಭಾರತದಿಂದ ಅಧಿಕೃತ ಪ್ರವೇಶ ಮಾಡಲಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಘೋಷಿಸಿದೆ.
ಇದನ್ನೂ ಓದಿ: ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ; ಈ ಬಾರಿ ಎಷ್ಟು ದಿನ ರಜೆ ಗೊತ್ತಾ?
ಈ ಲಾಪತಾ ಲೇಡೀಸ್ ಸಿನಿಮಾ ಬಾಲಿವುಡ್ ನಟ ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿದೆ. ಇದೇ ಸಿನಿಮಾ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. ಇದೇ ವರ್ಷ ಮಾರ್ಚ್ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಈ ಚಿತ್ರ ವಿಮರ್ಶಕರ ಮೆಚ್ಚುಗೆಯ ಹೊರತಾಗಿಯೂ ಭಾರತದಲ್ಲಿ 21.11 ಕೋಟಿ ರೂಪಾಯಿ ಗಳಿಸಿಕೊಂಡಿತ್ತು.
ಸಿಂಪಲ್ ಸ್ಟೋರಿಯೊಂದಿಗೆ ಬಂದ ಬಾಲಿವುಡ್‌ನ ಲಾಪತಾ ಲೇಡೀಸ್ ಸಿನಿಮಾ 2025ರ ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಮಾಡಿದೆ ಎಂದರೆ ಅದು ಹೆಮ್ಮೆಯ ವಿಚಾರವೇ ಸರಿ. ಈ ಬಗ್ಗೆ ಚೆನ್ನೈನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಅಧಿಕೃತವಾಗಿ ಘೋಷಿಸಿದೆ.
ಇದರ ಜೊತೆಗೆ ಅನಿಮಲ್, ಚಂದು ಚಾಂಪಿಯನ್, ಕಲ್ಕಿ 2898 AD, ಹನುಮಾನ್, ತಂಗಲಾನ್, ಅರ್ಟಿಕಲ್ 370, ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ಚಿತ್ರ ಆಟಂ, ಆಡುಜೀವಿತಂ, ರಾಜ್‌ಕುಮಾರ್ ರಾವ್ ಅವರ ಶ್ರೀಕಾಂತ್ ಮತ್ತು ವಿಕ್ಕಿ ಕೌಶಲ್ ಅವರ ಸ್ಯಾಮ್ ಬಹದ್ದೂರ್ ಸೇರಿದಂತೆ ಒಟ್ಟು 12 ಹಿಂದಿ ಚಿತ್ರಗಳು, 6 ತಮಿಳು ಮತ್ತು 4 ಮಲಯಾಳಂ ಚಿತ್ರಗಳನ್ನು ನೋಡಿ ಅವುಗಳ ಪೈಕಿ ಲಾಪತಾ ಲೇಡೀಸ್ ಚಿತ್ರವನ್ನು ಆಯ್ಕೆ ಮಾಡಲಾಗಿದೆ ಎಂದು ಫಿಲಂ ಫೆಡರೇಶನ್ ಆಫ್ ಇಂಡಿಯಾ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ