ಭಾರತದ ಬಡವರ ಪಾಲಿನ ಆಪದ್ಬಾಂಧವ ಎಬಿಡಿ
ಪ್ಯೂರ್ ಹಾರ್ಟೆಡ್ ಗೋಲ್ಡನ್ ಮ್ಯಾನ್ ಎಬಿಡಿ
ಭಾರತದ ಮೇಲೆ ಎಬಿಡಿಗೆ ಯಾಕಿಷ್ಟು ಪ್ರೀತಿ..?
ಎಬಿ ಡಿವಿಲಿಯರ್ಸ್, ಸೌತ್ ಆಫ್ರಿಕಾದ ಸೂಪರ್ ಸ್ಟಾರ್ ಬ್ಯಾಟ್ಸ್ಮನ್. ತನ್ನ ಬ್ಯಾಟಿಂಗ್ನಿಂದ ವಿಶ್ವದಾದ್ಯಂತ ಅಭಿಮಾನಿಗಳ ಮನ ಗೆದ್ದಿದ್ದ ಮಿಸ್ಟರ್ 360, ಈಗ ಭಾರತೀಯರ ಪಾಲಿನ ಆಪದ್ಬಾಂಧವ.
ಅಬ್ರಾಹಂ ಬೆನ್ಜಮಿನ್ ಡಿವಿಲಿಯರ್ಸ್.. ಅಲಿಯಾಸ್ ಎಬಿ ಡಿವಿಲಿಯರ್ಸ್. ಕ್ರಿಕೆಟ್ ಜಗತ್ತು ಕಂಡ ಅತ್ಯದ್ಭುತ ಪ್ಲೇಯರ್. ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿನ ನೆಚ್ಚಿನ 360. ಎಬಿಡಿ.. ಈ ಹೆಸರು ಕೇಳಿದ್ರೆ ಸಾಕು.. ಕ್ರಿಕೆಟ್ ಅಭಿಮಾನಿಗಳ ಮೈ ಝುಮ್ ಅನ್ನುತ್ತೆ. ಅಸಾಮಾನ್ಯ ಇನ್ನಿಂಗ್ಸ್ಗಳು ಕಣ್ಮುಂದೆ ಬರುತ್ತೆ. ಘಟಾನುಘಟಿ ಬೌಲರ್ಗಳನ್ನ ನೆದ್ದೆಯಲ್ಲೂ ಕಾಡಿದ್ದ ಎಬಿ ಡಿವಿಲಿಯರ್ಸ್, ಏಕಾಂಗಿಯಾಗಿ ಪಂದ್ಯವನ್ನ ಗೆಲ್ಲಿಸಿಕೊಡುತ್ತಿದ್ದ ಈ ರಿಯಲ್ ಮ್ಯಾಚ್ ವಿನ್ನರ್, ಸೌತ್ ಆಫ್ರಿಕಾಗೆ ಮಾತ್ರವಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿನ ಆಪದ್ಬಾಂಧವ. ಲೆಕ್ಕ ಇಲ್ಲದಷ್ಟು ಮ್ಯಾಚ್ ಗೆಲ್ಲಿಸಿಕೊಟ್ಟಿದ್ದ ಈತ, ಆರ್ಸಿಬಿಗೆ ಮಾತ್ರವೇ ಅಲ್ಲ. ಭಾರತೀಯರ ಪಾಲಿಗೂ ಆಪದ್ಬಾಂಧವ.
ಬಡವರ ಪಾಲಿನ ಆಪದ್ಬಾಂಧವ ಡಿಲಿವಿಲಿರ್ಯ್
ಆನ್ಫೀಲ್ಡ್ನಲ್ಲಿ ಬೌಲರ್ಗಳನ್ನ ಅಮಾನುಷವಾಗಿ ದಂಡಿಸುತ್ತಿದ್ದ ಡಿವಿಲಿಯರ್ಸ್, ಅದೆಷ್ಟೋ ಬೌಲರ್ಗಳ ಕರಿಯರ್ ಅನ್ನೇ ಮಟಾಶ್ ಮಾಡಿದ್ದಾರೆ. ಆದರೆ ಆಪ್ ದ ಫೀಲ್ಡ್ನಲ್ಲಿ ಈ ಸೌತ್ ಆಫ್ರಿಕನ್ ಸ್ಟಾರ್ ನಿಜಕ್ಕೂ ಪ್ಯೂರ್ ಹಾರ್ಟೆಡ್ ಗೋಲ್ಡನ್ ಮ್ಯಾನ್. ಸಂಕಷ್ಟದಲ್ಲಿ ತಂಡಕ್ಕೆ ನೆರವಾಗುವಂತೆ ಆಫ್ ದ ಫೀಲ್ಡ್ನಲ್ಲಿ ಸಂಕಷ್ಟದಲ್ಲಿರುವ ನಿರ್ಗತಿಕರಿಗೆ ಸಹಾಯಹಸ್ತ ಚಾಚುವ ಹೃದಯವಂತ. ಈ ಹೃದಯವಂತ ಎಬಿ ಡಿವಿಲಿಯರ್ಸ್, ಈಗ ಭಾರತೀಯ ಬಡವರ ನೆರವಾಗುವ ಸಲುವಾಗಿಯೇ ಭಾರತಕ್ಕೆ ಬರುತ್ತಿದ್ದಾರೆ.
ನಿರ್ಗತಿಕರಿಗೆ ಸಹಾಯ!
ನಾನು ಅಕ್ಟೋಬರ್-ನವೆಂಬರ್‌ನಲ್ಲಿ ಭಾರತಕ್ಕೆ ಬರುತ್ತಿದ್ದೇನೆ. ಹಿಂದುಳಿದ ಮಕ್ಕಳಿಗೆ ಸಹಾಯ ಮಾಡುತ್ತೇನೆ. ಮಕ್ಕಳು ಹಾಗೂ ನಿರ್ಗತಿಕರಿಗೆ ಸಹಾಯ ಮಾಡಲು ನಾನು ತುಂಬಾ ಹೆಮ್ಮೆಪಡುತ್ತೇನೆ. ಭವಿಷ್ಯದಲ್ಲಿ ನಿರ್ಗತಿಕ ಕುಟುಂಬಗಳಿಗೆ ಭಾರತದಲ್ಲಿ ಮನೆಗಳನ್ನು ನಿರ್ಮಿಸುತ್ತೇವೆ –ಎಬಿ ಡಿವಿಲಿಯರ್ಸ್, ಮಾಜಿ ಆಟಗಾರ
ಭಾರತದಲ್ಲಿರುವ ಹದಿಹರೆಯದ ಮಕ್ಕಳಿಗೆ ನೆರವಾಗಲು ಬಯಸಿರುವ ಸೌತ್ ಆಫ್ರಿಕನ್ ಸ್ಟಾರ್, ನಿರ್ಗತಿಕ ಕುಟುಂಬಗಳಿಗೆ ಮನೆ ಕಟ್ಟಿಕೊಡಲು ಬಯಸಿದ್ದಾರೆ. ಹೀಗಾಗಿಯೇ ಏಕದಿನ ವಿಶ್ವಕಪ್ ವೇಳೆ ಭಾರತಕ್ಕೆ ಬರಲಿರುವ ಎಬಿ ಡಿವಿಲಿಯರ್ಸ್, ಒಂದೊಳ್ಳೆ ಕಾರ್ಯಕ್ಕೆ ಮುಂದಾಗಲಿದ್ದಾರೆ.
ಎನ್ಜಿಒ ಮೂಲಕ ಡಿವಿಲಿಯರ್ಸ್ ಸತ್ಕಾರ್ಯ..!
ಸದಾ ಒಂದೊಲ್ಲೊಂದು ಸತ್ಕಾರ್ಯಕ್ಕೆ ಮಾಡುವ ಎಬಿ ಡಿವಿಲಿಯರ್ಸ್, ಭಾರತದಲ್ಲಿ ಸಮಾಜಮುಖಿ ಕಾರ್ಯಗಳ ಮೂಲಕ ಹಲವರಿಗೆ ನೆರವಾಗಿದ್ದಾರೆ. ಮೇಕ್ ಎ ಡಿಫರೆನ್ಸ್ ಎಂಬ ಎನ್ಜಿಒ ಸಂಸ್ಥೆ ಜೊತೆಗೆ ಕೈ ಜೋಡಿಸಿದ್ದಾರೆ. 10ರಿಂದ 28 ವರ್ಷದೊಳಗಿನ ಬಡ ಯುವಕರ ಕರಿಯರ್ ಡೆವ್ಲೆಪ್ಮೆಂಟ್ಗಾಗಿ ಈ ಎನ್ಜಿಒ ಕಾರ್ಯ ನಿರ್ವಹಿಸಲಿದ್ದು, ಶಿಕ್ಷಣ, ಭವಿಷ್ಯ ರೂಪಿಸಿಕೊಳ್ಳಲು ಆರ್ಥಿಕ ಸಹಾಯವನ್ನು ಮಾಡ್ತಿದೆ. ಈ ಸಂಸ್ಥೆಯ ಭಾಗವಾಗಿ ಎಬಿ ಡಿವಿಲಿಯರ್ಸ್, ಈ ಹಿಂದೆ ಲಕ್ನೋ ಮೂಲದ 19 ವರ್ಷದ ಯುವಕ ಹಾಗೂ ಬೆಂಗಳೂರು ಮೂಲದ 21 ವರ್ಷದ ಯುವತಿಯನ್ನು ದತ್ತು ಪಡೆದುಕೊಂಡಿದ್ದರು ಅನ್ನೋದನ್ನ ಮರೆಯುವಂತಿಲ್ಲ.
ಭಾರತದ ಮೇಲೆ ಎಬಿಡಿಗೆ ಯಾಕಿಷ್ಟು ಪ್ರೀತಿ?
ಎಬಿಡಿಗೆ ಭಾರತದ ಮೇಲಿನ ಪ್ರೀತಿ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಭಾರತದಲ್ಲಿನ ಬಡವರ ನೆರವಿಗೆ ಕೈಜೋಡಿಸಿದ್ದರು. ಎಬಿಡಿಗೆ ಭಾರತ ಮೇಲೆ ಯಾಕಿಷ್ಟು ಪ್ರೀತಿ ಅಂದ್ರೆ. ಸೌತ್ ಆಫ್ರಿಕಾ ಬಳಿಕ ನೇಮು, ಫೇಮು. ಎಲ್ಲಕ್ಕಿಂತ ಮಿಗಿಲಾಗಿ ಬೆಲೆಕಟ್ಟಲಾಗದ ಪ್ರೀತಿ ಸಿಕ್ಕಿದ್ದೇ ಭಾರತದಲ್ಲಿ ಅನ್ನೋದು ಬಿಡಿಸಿ ಹೇಳಬೇಕಿಲ್ಲ. ಹಲವು ಬಾರಿ ಭಾರತೀಯರ ಪ್ರೀತಿ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿರುವ ಎಬಿಡಿ, ಭಾರತವನ್ನು 2ನೇ ತವರಾಗಿಸಿಕೊಂಡಿದ್ದಾರೆ. ಹೀಗಾಗಿಯೇ ಎಲ್ಲವನ್ನು ಕೊಟ್ಟಿರುವ ಭಾರತಕ್ಕೆ ಪ್ರತಿಫಲವಾಗಿ ಜನರಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್