/newsfirstlive-kannada/media/post_attachments/wp-content/uploads/2023/08/ABD.jpg)
ವಿಶ್ವಕಪ್​ನ ಫೈನಲ್​ ಭಾರತ ತಂಡವನ್ನು ಮಣಿಸುವ ಮೂಲಕ ಆಸ್ಟ್ರೇಲಿಯಾ 6ನೇ ಬಾರಿಗೆ ವಿಶ್ವಕಪ್​ ಟ್ರೋಫಿಗೆ ಮುತ್ತಿಟ್ಟಿದೆ. ಸತತವಾಗಿ 10 ಪಂದ್ಯಗಳನ್ನು ಗೆದ್ದು ಫೈನಲ್​ಗೆ ಎಂಟ್ರಿ ನೀಡಿದ್ದ ಭಾರತ, ಕೊನೆಯಲ್ಲಿ ಸೋಲುವ ಮೂಲಕ ಭಾರೀ ನಿರಾಸೆ ಮೂಡಿಸಿದೆ.
ಈ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಎಬಿ ಡಿವಿಲಿಯರ್ಸ್, ವಿಶ್ವಕಪ್​ನಲ್ಲಿ ನೀಡಿದ ಪ್ರದರ್ಶನ ಆಧಾರದ ಮೇಲೆ ತಂಡವನ್ನು ಪ್ರಕಟಿಸಿದ್ದಾರೆ. ವಿಶೇಷ ಅಂದರೆ ಎಬಿಡಿ ಪ್ರಕಟಿಸಿರುವ ತಂಡದಲ್ಲಿ ಭಾರತದ ಐವರು ಆಟಗಾರರು ಇದ್ದಾರೆ. ಬುಮ್ರಾಗೆ ಸ್ಥಾನ ನೀಡಿಲ್ಲ.
ಎಬಿಡಿ ತಂಡದಲ್ಲಿ ಯಾಱರು..?
ಟ್ರಾವೀಸ್ ಹೆಡ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಾಚಿನ್ ರವೀಂದ್ರ, ಶ್ರೇಯಸ್ ಅಯ್ಯರ್, ಗ್ಲೇನ್ ಮ್ಯಾಕ್ಸ್​ವೆಲ್, ರವೀಂದ್ರ ಜಡೇಜಾ, ಆ್ಯಡಂ ಜಂಪಾ, ದಿಲ್​ಶನ್ ಮಡುಶಂಕ, ಜೆರಾಲ್ಡ್ ಕೋಟ್ಜಿ, ಮೊಹ್ಮದ್ ಶಮಿ ಎಂದು ತಿಳಿಸಿದ್ದಾರೆ. ಹೆಡ್ ಮತ್ತು ರೋಹಿತ್ ಶರ್ಮಾ ಆರಂಭಿಕ ಆಟಗಾರರಾಗಿ ಬರಬೇಕು ಎಂದು ಎಬಿಡಿ ಹೇಳಿದ್ದಾರೆ. ಇನ್ನೊಂದು ವಿಚಾರ ಅಂದರೆ ವಿಕೆಟ್ ಕೀಪರ್ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us