ಬೇರೆಯವರ ಸಹಾಯಕ್ಕೆ ನಿಲ್ಲುವಲ್ಲಿ ಸದಾ ಮುಂದಿರುತ್ತಾರೆ ವಿರಾಟ್
ಕಿಂಗ್ ಕೊಹ್ಲಿ ಅಷ್ಟು ಸುಲಭವಾಗಿ ಸೋಲು ಒಪ್ಪಿಕೊಳ್ಳೋದಿಲ್ಲ
ವಿಶ್ವದ ಈ ದಿಗ್ಗಜ ಆಟಗಾರರಲ್ಲಿ ಕೊಹ್ಲಿ ಒಬ್ಬರು, ಯಾಕೆ ಗೊತ್ತಾ?
ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಸಾಮ್ರಾಟ. ದಾಖಲೆಗಳ ವೀರ. ಆನ್ಫೀಲ್ಡ್ನಲ್ಲಿ ಕೋಪಿಷ್ಟನಾಗಿ ನೋಡಿದ್ದೇ ಹೆಚ್ಚು. ಆದ್ರೆ, ನಿಮಗ್ಯಾರಿಗೂ ಗೊತ್ತಿಲ್ಲದ ವಿರಾಟ್ ಮತ್ತೊಬ್ಬ ಇದ್ದಾನೆ. ಆ ವಿರಾಟ್ನ ನೋಡಿದ್ರೆ, ನೀವೂ ಆತನ ಫ್ಯಾನ್ ಆಗೋದು ಗ್ಯಾರಂಟಿ.
ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಕ್ರಿಕೆಟರ್. ವಿರಾಟ್ ಕೊಹ್ಲಿಯಲ್ಲಿನ ಹಸಿವು, ಛಲ, ಹೋರಾಟದ ಮನೋಭಾವ ಇಂದು ಓರ್ವ ಸಕ್ಸಸ್ಫುಲ್ ಕ್ರಿಕೆಟಿಗನ್ನಾಗಿ ಮಾಡಿದೆ. 34ರ ವಯಸ್ಸಿನಲ್ಲೂ ಚಿರತೆಯಂತೆ ಮೈದಾನದಲ್ಲಿ ಕಾಣಿಸಿಕೊಳ್ಳುವ ವಿರಾಟ್ ನಿಜಕ್ಕೂ ಮಾಡ್ರನ್ ಡೇ ಕ್ರಿಕೆಟ್‌ನ ದೈತ್ಯ.
ವಿಶ್ವ ಕ್ರಿಕೆಟ್ನಲ್ಲಿ ವಿರಾಟ್, ತನ್ನದೇ ಆದ ಸಾಮ್ರಾಜ್ಯ ಕಟ್ಟಿದ್ದಾರೆ. ಆ ಸಾಮ್ರಾಜ್ಯಕ್ಕೆ ಅಧಿಪತಿಯೂ ಆಗಿದ್ದಾರೆ. ಲೆಕ್ಕವಿಲ್ಲದಷ್ಟು ರನ್ ಕಲೆ ಹಾಕಿರೋ ಕೊಹ್ಲಿ, ಅದೆಷ್ಟೋ ದಾಖಲೆಗಳನ್ನ ಬರೆದಿದ್ದಾರೆ. ಸರ್ವಶ್ರೇಷ್ಟ ಆಟಗಾರನಾಗಿ ಗುರುತಿಸಿಕೊಳ್ಳುವ ಕೊಹ್ಲಿ, ಕೋಪ-ತಾಪ ಎಲ್ಲರಿಗೂ ಗೊತ್ತು. ಆದ್ರೆ, ನೀವು ಕಾಣದ ಕೊಹ್ಲಿ ಮತ್ತೊಬ್ಬ ಇದ್ದಾನೆ.
ಕೊಹ್ಲಿಯನ್ನ ಕೊಂಡಾಡಿದ ಎಬಿ ಡಿವಿಲಿಯರ್ಸ್..!
ಸೌತ್ ಆಫ್ರಿಕನ್ ದಿಗ್ಗಜ ಎಬಿ ಡಿವಿಲಿಯರ್ಸ್ ಹಾಗೂ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ನಡುವಿನ ಸ್ನೇಹ ಎಂತದ್ದು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಸಾಗರಾದಾಚೆಯ ಫ್ರೆಂಡ್‌ಶಿಪ್ ಕ್ರಿಕೆಟ್ ಲೋಕದ ಬೆಸ್ಟ್ ಫ್ರೆಂಡ್ಸ್ಗಳನ್ನಾಗಿಸಿದೆ. ಸದ್ಯ ಎಬಿಡಿ ಕ್ರಿಕೆಟ್ನಿಂದ ದೂರ ಉಳಿದರೂ, ಇವರಿಬ್ಬರ ಫ್ರೆಂಡ್‌ಶಿಪ್ ಮಾತ್ರ ಹಾಗೇ ಇದೆ. ಇಂದಿಗೂ ಕೊಹ್ಲಿಯನ್ನ ಗುಣಗಾನ ಮಾಡುವ ಎಬಿಡಿ, ಪ್ರತಿ ವಿಚಾರದಲ್ಲೂ ಬೆಂಬಲಕ್ಕೆ ನಿಲ್ತಾರೆ. ಇದೀಗ ಅದೇ ರೀತಿ ಇತರೆ ಕ್ಷೇತ್ರಗಳ ದಿಗ್ಗಜರ ಜೊತೆ ಹೋಲಿಸಿದ್ದಾರೆ.
ದಿಗ್ಗಜರ ಸಮಾನ ವಿರಾಟ್ ಎಂದ ಎಬಿ ಡಿವಿಲಿಯರ್ಸ್
ಗಾಲ್ಫ್ ದಂತಕಥೆ ಟೈಗರ್ ವುಡ್ಸ್, ಫುಟ್ಬಾಲ್ ದಂತಕಥೆಗಳಾದ ಕ್ರಿಸ್ಟಿಯಾನೋ ರೊನಾಲ್ಡೊ, ಲಿಯೋನೆಲ್ ಮೆಸ್ಸಿ ಟೆನಿಸ್ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾದ ರೋಜರ್ ಫೆಡರರ್, ರಫೆಲ್ ನಡಾಲ್, ನೊವಾಕ್ ಜೊಕೊವಿಕ್ ಸರ್ವ ಶ್ರೇಷ್ಠರು. ಆಯಾ ಕ್ಷೇತ್ರಗಳಲ್ಲಿ ಇವರ ಸಾಧನೆ ನಿಜಕ್ಕೂ ಅಪಾರ. ಇದೀಗ ಇವರ ಜೊತೆ ಕೊಹ್ಲಿಯನ್ನ ಹೋಲಿಸಿರುವ ಎಬಿಡಿ, ಕ್ರಿಕೆಟ್ ದೊರೆಯನ್ನಾಗಿ ಮಾಡಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ.
ಈ ಎಲ್ಲ ದಿಗ್ಗಜರಲ್ಲಿ ಕೊಹ್ಲಿ ಒಬ್ಬ..!
ವಿಶ್ವದ ಈ ಅತ್ಯುತ್ತಮ ಆಟಗಾರರಲ್ಲಿ ಸಾಮಾನ್ಯವಾದ ಒಂದು ವಿಷಯವಿದೆ. ಟೈಗರ್ ವುಡ್ಸ್, ರೋಜರ್ ಫೆಡರರ್, ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ಪ್ರತಿ ಪದಕ ಗೆಲ್ಲುವ ಹಸಿವು ಹೊಂದಿದ್ದಾರೆ. ಇವರಲ್ಲಿ ಗೆಲ್ಲಲೇಬೇಕು ಎಂಬ ಇಚ್ಛಾಶಕ್ತಿ ಇರುತ್ತದೆ. ಕೊನೆ ಕ್ಷಣದವರೆಗೂ ಹೋರಾಡುವ ಮನೋಭಾವವಿದೆ. ರೊನಾಲ್ಡೊ, ಮೆಸ್ಸಿಯಲ್ಲೂ ನೋಡಿದ್ದೇನೆ . ವಿರಾಟ್ ಕೊಹ್ಲಿಯಲ್ಲೂ ನೋಡಿದ್ದೇನೆ. ಸೋಲನ್ನ ಕೊಹ್ಲಿ ದ್ವೇಷಿಸುತ್ತಾನೆ. ಶ್ರೇಷ್ಠ ಆಟಗಾರರಲ್ಲಿ ಇದನ್ನೇ ಕಂಡಿದ್ದೇನೆ. ಹೀಗಾಗಿ ವಿರಾಟ್, ಇವರ ಸಮಾನ ಎಂದು ಹೇಳಬಲ್ಲೆ.
ಎಬಿ ಡಿವಿಲಿಯರ್ಸ್, ಮಾಜಿ ಆಟಗಾರ
ಸಹಾಯಾಸ್ತ ಚಾಚುವಲ್ಲಿ ವಿರಾಟ್ ಸದಾ ಮುಂದೆ..!
ವಿರಾಟ್ ಕೊಹ್ಲಿಯ ಹೋರಾಟದ ಗುಣವನ್ನ ಬಹಿರಂಗ ಪಡಿಸಿರುವ ಎಬಿ ಡಿವಿಲಿಯರ್ಸ್, ಇದೇ ವೇಳೆ ಮತ್ತಷ್ಟು ಆಸಕ್ತಿಕರ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಅದರಲ್ಲೂ ವಿರಾಟ್ ಹೃದಯವಂತಿಕೆಯನ್ನ ತೆರೆದಿಟ್ಟಿದ್ದಾರೆ.
ಸಹಾಯ ಹಸ್ತ ಚಾಚಲು ಮುಂದಿರ್ತಾರೆ..!
ಕೊಹ್ಲಿ ಒಬ್ಬ ಹೀರೋ. ಕೋಟ್ಯಾಂತರ ಜನರಿಗೆ ವಿರಾಟ್ ಕೊಹ್ಲಿ ಸ್ಪೂರ್ತಿಯಾಗಿದ್ದಾರೆ. ವಿರಾಟ್ ಆಟವನ್ನು ನೋಡುವುದು ನನಗೆ ತುಂಬಾ ಇಷ್ಟ. ಕೊಹ್ಲಿಯನ್ನು ಗೆಳೆಯನನ್ನಾಗಿ ಪಡೆದಿರುವುದು ನನ್ನ ಅದೃಷ್ಟ. ವಿರಾಟ್ ಕೊಹ್ಲಿ ಮೈದಾನದಲ್ಲಿ ಸದಾ ಹೋರಾಟಗಾರ. ವಿರಾಟ್ ಯಾವಾಗಲೂ ಸಹಾಯ ಹಸ್ತ ಚಾಚಿದ್ದಾರೆ. ಯಾರಿಗಾದರೂ ಕಷ್ಟ ಬಂದಾಗ ಮುಂದೆ ನಿಲ್ಲುತ್ತಾರೆ. ಯುಎಇಯಲ್ಲಿ ನಡೆದ 2020ರ ಐಪಿಎಲ್ನಲ್ಲಿ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ಹೈದರಾಬಾದ್ನ 7 ಯುವ ಆಟಗಾರರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದರು. ಮೈದಾನದಲ್ಲಿ 20 ಓವರ್ಗಳು ಫೀಲ್ಡಿಂಗ್, ಬ್ಯಾಟಿಂಗ್ ನಡೆಸಿದ ಬಳಿಕವೂ ತಾಳ್ಮೆಯಿಂದ ಮಾತನಾಡುವುದು ಅಚ್ಚರಿ ಮೂಡಿಸಿತ್ತು.
ಎಬಿ ಡಿವಿಲಿಯರ್ಸ್, ಮಾಜಿ ಆಟಗಾರ
ವಿರಾಟ್ ಹೃದಯವಂತಿಕೆ, ಐಪಿಎಲ್ ಟೂರ್ನಿ ವೇಳೆ ಮಾತ್ರವೇ ಅಲ್ಲ. ಸದ್ಯ ನಡೆಯುತ್ತಿರುವ ವಿಂಡೀಸ್ ಪ್ರವಾಸದಲ್ಲೂ ನೋಡಬಹುದಾಗಿದೆ. ಸಹ ಆಟಗಾರರಿಗೆ ಮಾತ್ರವಲ್ಲದೆ, ಎದುರಾಳಿ ತಂಡದ ಆಟಗಾರರಿಗೂ ಟಿಪ್ಸ್ ನೀಡಿದ್ದಿದೆ. ಹೀಗಾಗಿ ಕೋಟ್ಯಂತರ ಜನರಿಗೆ ವಿರಾಟ್ ಕೊಹ್ಲಿಯ ವ್ಯಕ್ತಿತ್ವವನ್ನ ಸ್ಪೂರ್ತಿ ಎಂದು ಕೊಂಡಾಡಿದ್ದಾರೆ.
ಕ್ರಿಕೆಟ್ಗೆ ವಿರಾಟ್ ದೊರೆಯೋ ಅಲ್ವೋ, ಆದ್ರೆ, ಸೋಲನ್ನು ಒಪ್ಪಿಕೊಳ್ಳದ ಆತನ ಮನಸ್ಥಿತಿ ಇತರರಿಗೆ ಸಹಾಯಸ್ತಾ ಚಾಚಬೇಕೆಂಬ ಉದಾರತೆ ನಿಜಕ್ಕೂ ಮೆಚ್ಚುವಂಥದ್ದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ