newsfirstkannada.com

RCB ಅಭಿಮಾನಿಗಳಿಗೆ ಗುಡ್​​ನ್ಯೂಸ್ ಕೊಟ್ರಾ ಮಿಸ್ಟರ್ 360?; ಐಪಿಎಲ್​ಗೆ ಕಂ​​ಬ್ಯಾಕ್​ ಮಾಡುವ ಬಗ್ಗೆ ತುಟಿ ಬಿಚ್ಚಿದ ABD

Share :

05-07-2023

    ಕ್ರಿಕೆಟ್​ ಆಡೋ ಮನದಾಸೆ ಹೊರಹಾಕಿದ ಎಬಿ

    ಎಬಿ ಡಿವಿಲಿಯರ್ಸ್​​​ ಕಮ್​​ಬ್ಯಾಕ್​ ಯಾವಾಗ..?

    ಕೊಹ್ಲಿ-ಸೂರ್ಯನ ಬಗ್ಗೆ ಎಬಿಡಿ ಹೇಳಿದ್ದೇನು..?

ಮಿಸ್ಟರ್​ 360 ಎಬಿ ಡಿವಿಲಿಯರ್ಸ್​​ ಕ್ರಿಕೆಟ್​ಗೆ ಗುಡ್​ ಬೈ ಹೇಳಿ 5 ವರ್ಷಗಳೇ ಕಳೆದಿವೆ. ಐಪಿಎಲ್​ನಿಂದಲೂ ನಿವೃತ್ತಿಯಾಗಿ 3 ಸೀಸನ್​ ಆಯ್ತು. ಆದ್ರೂ ಫ್ಯಾನ್ಸ್​ ಎಬಿಡಿ ಕಮ್​ಬ್ಯಾಕ್​​ ಮಾಡ್ತಾರೆ ಅನ್ನೋ ಕನವರಿಕೆಯಲ್ಲೇ ಇದ್ದಾರೆ. ನಿವೃತ್ತಿಯಿಂದ ವಾಪಸ್ಸಾಗೋ ಬಗ್ಗೆ ಎಬಿ ಮೊದಲ ಬಾರಿ ಮಾತನಾಡಿದ್ದಾರೆ. ಡಿವಿಲಿಯರ್ಸ್​ ಹೇಳಿದ್ದೇನು? ಕಮ್​ಬ್ಯಾಕ್​ ಮಾಡ್ತಾರಾ?

ಅಬ್ರಾಹಂ ಬೆಂಜಮಿನ್​ ಡಿವಿಲಿಯರ್ಸ್. ಅಲಿಯಾಸ್ ಎಬಿ ಡಿವಿಲಿಯರ್ಸ್​. ಈ ಹೆಸರು ಕೇಳಿದ್ರೆ ಈಗಲೂ ಬೌಲರ್ಸ್​ ಬೆಚ್ಚಿ ಬೀಳ್ತಾರೆ. ಈತ ಪ್ಯಾಡ್​​ ಕಟ್ಟಿ ಮೈದಾನಕ್ಕಿಳಿದ್ರೆ ಎದುರಾಳಿಗಳ ಎದೆಯಲ್ಲಿ ಢವ ಢವ ಸ್ಟಾರ್ಟ್​. ಅಭಿಮಾನಿಗಳು ಹುಚ್ಚೆದ್ದು ಕುಣೀತಿದ್ರು. ಕ್ರಿಸ್​ ಕಚ್ಚಿ ನಿಂತ್ರೆ ಬೌಂಡರಿ, ಸಿಕ್ಸರ್​​ಗಳ ಭೋರ್ಗರೆತ, ಮೈದಾನದ ಉದ್ದಗಲಕ್ಕೂ ಚೆಂಡಿನ ದರ್ಶನ. ಲೆಕ್ಕವೇ ಇಲ್ಲದಷ್ಟು ಅಸಾಮಾನ್ಯ ಇನ್ನಿಂಗ್ಸ್​ಗಳು ಈ ಮಿಸ್ಟರ್​​​ 360 ಬ್ಯಾಟ್​ನಿಂದ ಮೂಡಿಬಂದಿವೆ.

ಎಬಿಡಿ ಕಮ್​ಬ್ಯಾಕ್​ ಕನವರಿಕೆಯಲ್ಲಿ ಫ್ಯಾನ್ಸ್..!

ಬ್ಯಾಟ್ಸ್​​ಮನ್​ಗೂ ಸಾಧ್ಯವಾಗದ ಶಾಟ್​ಗಳನ್ನ ನೀರು ಕುಡಿದಷ್ಟು ಸುಲಭಕ್ಕೆ ಬಾರಿಸ್ತಿದ್ದ ಎಬಿಡಿ ಮೈದಾನಕ್ಕಿಳಿಯದೇ 3 ವರ್ಷಗಳೇ ಉರುಳಿವೆ. ಅಭಿಮಾನಿಗಳ ಮನದಾಳದಲ್ಲಿ ಎಬಿಡಿಯೇ ರಿಯಲ್ ಮ್ಯಾಚ್ ವಿನ್ನರ್. ಆರ್​​ಸಿಬಿ ಅಭಿಮಾನಿಗಳಿಗಂತೂ ಆಪತ್ಭಾಂದವ ಕ್ರಿಕೆಟ್​ ಆಡ್ತಿಲ್ಲ ಅನ್ನೋ ಸತ್ಯವನ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಇಂದಿಗೂ ಎಬಿಡಿ ಕಮ್​ಬ್ಯಾಕ್​ ಮಾಡಲಿ ಅನ್ನೋ ಕೂಗು ಫ್ಯಾನ್ಸ್​ ವಲಯದಲ್ಲಿದೆ. ನಿವೃತ್ತಿಯಿಂದ ವಾಪಾಸ್ಸಾಗ್ತಾರೆ ಅನ್ನೋ ನಂಬಿಕೆ ಅಭಿಮಾನಿಗಳದ್ದಾಗಿದೆ.

ಕಮ್​​ಬ್ಯಾಕ್​ ಬಗ್ಗೆ ತುಟಿ ಬಿಚ್ಚಿದ ಎಬಿ ಡಿವಿಲಿಯರ್ಸ್

2021ರಲ್ಲಿ ದಿಢೀರ್​ ಎಂದು ಎಬಿಡಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿ ಶಾಕ್​ ನೀಡಿದ್ರು. ಅಂದಿನಿಂದ ಈವರೆಗೂ ಏಕಾಂಗಿಯಾಗಿ ಪಂದ್ಯಗಳನ್ನ ಗೆಲ್ಲಿಸಿಕೊಡುತ್ತಿದ್ದ ವೀರ ಮತ್ತೆ ಕ್ರಿಕೆಟ್​ ಅಂಗಳದಲ್ಲಿ ಘರ್ಜಿಸಲಿ ಅಂತಾ ಫ್ಯಾನ್ಸ್​ ಪ್ರಾರ್ಥಿಸ್ತಿದ್ದಾರೆ. ಆಪ್ತ ಗೆಳೆಯ ವಿರಾಟ್​​ ಕೊಹ್ಲಿ ಕೂಡ ಈ ಬಗ್ಗೆ ಮಾತನಾಡಿದ್ರು. ಮಿಸ್ಟರ್​​ 360 ಮಾತ್ರ ಮೌನಕ್ಕೆ ಜಾರಿದ್ರು. ಇದೀಗ ಈ ಬಗ್ಗೆ ತುಟಿ ಬಿಚ್ಚಿದ್ದಾರೆ.

ಮತ್ತೆ ಕ್ರಿಕೆಟ್​ ಆಡೋ ಮನದಾಸೆ ಹೊರಹಾಕಿದ ಎಬಿಡಿ

ಕ್ರಿಕೆಟ್​ ದುನಿಯಾಗೆ 360 ಡಿಗ್ರಿ ಆಟವನ್ನ ಪರಿಚಯಿಸಿದ್ದೇ ಎಬಿ ಡಿವಿಲಿಯರ್ಸ್​. ಇಂದಿಗೂ ವೈಟ್​ಬಾಲ್​ ಕ್ರಿಕೆಟ್​ನ ಮೋಸ್ಟ್​ ಡೇಂಜರಸ್​ ಬ್ಯಾಟ್ಸ್​ಮನ್​ಗಳ ಸಾಲಿನಲ್ಲಿ ಎಬಿಡಿಗೆ ಅಗ್ರಸ್ಥಾನ. ಏಕದಿನದಲ್ಲಿ ಫಾಸ್ಟೆಸ್ಟ್​ ಫಿಫ್ಟಿ, ಫಾಸ್ಟೆಸ್ಟ್​​ ಹಂಡ್ರೆಡ್​​, ಫಾಸ್ಟೆಸ್ಟ್​​ ಒನ್​ ಫಿಫ್ಟಿ. ಈ ಎಲ್ಲಾ ದಾಖಲೆಗಳಿಗೆ ಈಗಲೂ ಒಡೆಯನಾಗಿರೋ ಎಬಿಡಿ ಮತ್ತೆ ಕ್ರಿಕೆಟ್​ ಅಂಗಳಕ್ಕೆ ಇಳಿಯೋ ಮನದಾಸೆ ವ್ಯಕ್ತಪಡಿಸಿದ್ದಾರೆ. ಆದ್ರೆ, ವಿರಾಟ್​​ ಕೊಹ್ಲಿ, ಸೂರ್ಯ ಕುಮಾರ್​​ ಯಾದವ್​ ಮುಂದೇ ಕಾಂಪೀಟ್​​ ಮಾಡೋದು ಚಾಲೆಂಜ್​ ಎಂದಿದ್ದಾರೆ.

ಐಪಿಎಲ್​ನಲ್ಲಿ ಹೊಸದಾಗಿ ಇಂಟ್ರಡ್ಯೂಸ್​ ಮಾಡಿರೋ ಇಂಪ್ಯಾಕ್ಟ್​ ಪ್ಲೇಯರ್​ ರೂಲ್​ ಎಬಿಡಿಯ ಕಮ್​ಬ್ಯಾಕ್​ ಕನಸನ್ನ ತೆರೆದಿಟ್ಟಿದೆ. ವರ್ಷದಲ್ಲಿ 3 ತಿಂಗಳ ಕಾಲ ಬ್ಯಾಟಿಂಗ್​ ಮಾತ್ರ ಮಾಡೋದು ಎಬಿಡಿಗೆ ಕಷ್ಟವೇನಾಗಲ್ಲ. ಹಾಗಿದ್ರೂ ಒಂದು ಹಿಂಜರಿಕೆ ಎಬಿಡಿಯನ್ನು ಕಾಡ್ತಿದೆ. ಇತ್ತೀಚಿನ ಇಂಟರ್​ವ್ಯೂ ಒಂದರಲ್ಲಿ ಕಮ್​ಬ್ಯಾಕ್​ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿರೋ ಎಬಿಡಿ, ಹಿಂದೆ ಕ್ರಿಕೆಟ್​ ಆಡೋವಾಗ ನನ್ನಲ್ಲಿದ್ದ ಫೈರ್​ ಈಗ ಕಮ್ಮಿಯಾಗಿದೆ ಅಂದಿದ್ದಾರೆ. ಈ ಕಾರಣಕ್ಕೆ ಕಮ್​​ಬ್ಯಾಕ್​ ನಿರ್ಧಾರವನ್ನ ಪ್ರಕಟಿಸಲು ಡಿವಿಲಿಯರ್ಸ್​ ಹಿಂದೇಟು ಹಾಕ್ತಿದ್ದಾರೆ. ಅದ್ರ ಜೊತೆಗೆ ಒಂದು ವರ್ಷದ ಹಿಂದೆ ಎಬಿಡಿ ಕಣ್ಣಿನ ಸರ್ಜರಿಗೆ ಒಳಗಾಗಿದ್ರು. ಅದೂ ಕೂಡ ಕಮ್​​ಬ್ಯಾಕ್​ ಕನಸಿಗೆ ಅಡ್ಡಿಯಾಗಿ ನಿಂತಿದೆ.

ಒಟ್ಟಿನಲ್ಲಿ ಗಟ್ಟಿ ಮನಸ್ಸು ಮಾಡಿ ನಿವೃತ್ತಿಯ ನಿರ್ಧಾರವನ್ನ ಡಿವಿಲಿಯರ್ಸ್​ ಹಿಂತೆಗೆದುಕೊಳ್ಳಲಿ ಅನ್ನೋದು ಫ್ಯಾನ್ಸ್​ ಪ್ರಾರ್ಥನೆಯಾಗಿದೆ. ಎಬಿಡಿಯ 360 ಡಿಗ್ರಿ ಆಟವನ್ನ ಆರ್​​ಸಿಬಿ ಅಭಿಮಾನಿಗಳು ಅಷ್ಟರಮಟ್ಟಿಗೆ ಮಿಸ್​​ ಮಾಡಿಕೊಳ್ತಿದ್ದಾರೆ. ಇಷ್ಟು ದಿನ ಮನದಲ್ಲಿದ್ದ ಮತ್ತೆ ಕ್ರಿಕೆಟ್​ ಆಡೋ ಆಸೆಯನ್ನ ಇದೀಗ ಎಬಿಡಿಯೇನೋ ಬಹಿರಂಗಗಳಿಸಿದ್ದಾರೆ. ನಿವೃತ್ತಿ ವಾಪಾಸ್​ ಪಡೀತಾರಾ.? ಅನ್ನೋ ಮಿಲಿಯನ್​ ಡಾಲರ್​ ಪ್ರಶ್ನೆ ಮಾತ್ರ ಉತ್ತರ ಸಿಗದೇ ಉಳಿದಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB ಅಭಿಮಾನಿಗಳಿಗೆ ಗುಡ್​​ನ್ಯೂಸ್ ಕೊಟ್ರಾ ಮಿಸ್ಟರ್ 360?; ಐಪಿಎಲ್​ಗೆ ಕಂ​​ಬ್ಯಾಕ್​ ಮಾಡುವ ಬಗ್ಗೆ ತುಟಿ ಬಿಚ್ಚಿದ ABD

https://newsfirstlive.com/wp-content/uploads/2023/07/ABD-1.jpg

Load More