newsfirstkannada.com

4 ಮೊಬೈಲ್​, 4 ಸಿಮ್​, 50 ಲಕ್ಷ ಹಣ.. ಟ್ರೈನ್​ ಏರಿ ಎಸ್ಕೇಪ್​ ಆಗಿದ್ದ ಅಭಿನವ ಹಾಲಾಶ್ರೀ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ರೋಚಕ

Share :

19-09-2023

  ಬಹುಕೋಟಿ ವಂಚನೆ ಪ್ರಕರಣ ಅಭಿನವ ಹಾಲಾಶ್ರೀ ಸ್ವಾಮೀಜಿಯ ಬಂಧನ

  11 ದಿನ ತಲೆ ಮರೆಸಿಕೊಂಡಿದ್ದ A3 ಆರೋಪಿ ಅಭಿನವ ಹಾಲಾಶ್ರೀ ಸಿಕ್ಕಿಬಿದ್ದದ್ದು ಹೇಗೆ?

  ವೇಷ ಮರೆಸಿಕೊಂಡು ಟ್ರಾವೆಲ್​ ಮಾಡುತ್ತಿದ್ದರಾ ಅಭಿನವ ಹಾಲಾಶ್ರೀ?

ಬಹುಕೋಟಿ ವಂಚನೆ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅಭಿನವ ಹಾಲಾಶ್ರೀ ಸ್ವಾಮೀಜಿಯ ಬಂಧನವಾಗಿದೆ. ಕೇಸ್ ದಾಖಲಾಗಿ 11 ದಿನ ತಲೆ ಮರೆಸಿಕೊಂಡಿದ್ದ A3 ಆರೋಪಿಯನ್ನು ಒಡಿಶಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಗೋವಿಂದ ಬಾಬು ಪೂಜಾರಿ ಕೇಸ್ ನೀಡಿದ್ದ ದೂರಿನ ಅನ್ವಯ ಚೈತ್ರಾ ಕುಂದಾಪುರಳನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ​ಅಭಿನವ ಹಾಲಾಶ್ರೀಗೂ ಬಲೆ ಬೀಸಿದ್ದರು. ಆದರೆ ಸಿಸಿಬಿ ಕಣ್ತಪ್ಪಿಸಲು ಸ್ವಾಮೀಜಿ ತಲೆ ಮರೆಸಿಕೊಂಡಿದ್ದರು. ಡ್ರೈವರ್ ನಿಂಗರಾಜು ಜೊತೆ ಎಸ್ಕೇಪ್ ಆಗಿದ್ದರು.

11ನೇ ತಾರಿಖಿನಂದು ರಾತ್ರಿ ಹಿರೇಹಡಗಲಿಯಿಂದ ಮೈಸೂರಿಗೆ ತೆರಳಿದ್ದ ಅಭಿನವ ಹಾಲಾಶ್ರಿ, 12ನೇ ತಾರೀಖು ಮೈಸೂರಿನ HAL ವೀರಸ್ವಾಮಿ ಮಠದಲ್ಲಿ ಒಂದು ದಿನ ವಾಸ ಹೂಡಿದರು. 13 ನೇ ತಾರೀಖು ಬೆಳಿಗ್ಗೆ ಮೈಸೂರಿನ ಬಸ್ ಸ್ಟಾಂಡ್ ಮುಂದಿರುವ ಅಪೂರ್ವ ಮೊಬೈಲ್ ಸ್ಟೋರ್​ಗೆ ತೆರಳಿ ಅಪೂರ್ವ ಮೊಬೈಲ್ ಶಾಪ್ ನಲ್ಲಿ ನಾಲ್ಕು ಮೊಬೈಲ್ ಹಾಗೂ ನಾಲ್ಕು ಸಿಮ್ ಖರೀದಿ ಮಾಡಿದ್ದಾರೆ. ಅದರಲ್ಲಿ ಎರಡು ಮೊಬೈಲ್ ಹಾಗೂ ಎರಡು ಸಿಮ್ ತೆಗೆದುಕೊಂಡಿದ್ದಾರೆ.

ಅದೇ ದಿನ ಮಧ್ಯಾಹ್ನ ಡ್ರೈವರ್​ ನಿಂಗರಾಜು ಜೊತೆ 50 ಲಕ್ಷ ತರಿಸಿದ್ದರು. ಬಳಿಕ ಸ್ವಾಮೀಜಿಯ ಅತ್ಯಾಪ್ತ ಪ್ರಣವ್​​ಗೆ ಹಣ ನೀಡಿದ್ದರು. ಅದೇ ಮನೆಯಲ್ಲಿ ಕಾರ್ ನಿಲ್ಲಿಸಿ ನಂಬರ್ ಪ್ಲೇಟ್ ತೆಗೆದು ಎಸ್ಕೇಪ್ ಆಗಿದ್ದಾರೆ.

ಮೈಸೂರಿನಿಂದ ಹೈದರಾಬಾದ್​​ನ ಸಿಖಂದರಾಬಾದ್ಗೆ ಸ್ವಾಮೀಜಿ ಎಸ್ಕೇಪ್​ ಆಗಿದ್ದಾರೆ. ಇತ್ತ ಡ್ರೈವರ್​ ನಿಂಗರಾಜು ಬಂಧನವಾಗ್ತಿದ್ದಂತೆ ಶ್ರೀಶೈಲಗೆ ಪರಾರಿಯಾಗಿದ್ದಾರೆ. ನಂತರ ಪೂರಿ- ಗಂಜಾಂ- ಕಟಕ್ ಟ್ರೈನ್ ನಲ್ಲಿ ಟ್ರಾವೆಲ್ ಮಾಡಿದ್ದಾರೆ. ಹೀಗೆ ಟ್ರಾವೆಲ್​ನಲ್ಲಿದ್ದ ಅಭಿನವ ಹಾಲಾಶ್ರೀ ಸ್ವಾಮಿಜಿಯನ್ನ ಬೆಂಗಳೂರು ಸಿಸಿಬಿ ಪೊಲೀಸರ ಮಾಹಿತಿ ಮೆರೆಗೆ ನಿನ್ನೆ ರಾತ್ರಿ 9:30ಕ್ಕೆ  ಕಟಕ್​ನಲ್ಲಿ ಪೊಲಿಸರು ಬಂಧಿಸಿದ್ದಾರೆ.

ಬೆಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ಕಟಕ್ ತಲುಪಿದ್ದು, ಟ್ರಾನ್ಸಿಟ್ ವಾರೆಂಟ್ ಪಡೆದು ಸಂಜೆ ವೇಳೆಗೆ ಬೆಂಗಳೂರಿಗೆ ಕರೆತರಲಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

4 ಮೊಬೈಲ್​, 4 ಸಿಮ್​, 50 ಲಕ್ಷ ಹಣ.. ಟ್ರೈನ್​ ಏರಿ ಎಸ್ಕೇಪ್​ ಆಗಿದ್ದ ಅಭಿನವ ಹಾಲಾಶ್ರೀ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ರೋಚಕ

https://newsfirstlive.com/wp-content/uploads/2023/09/Abhinava-Halasree.jpg

Load More