newsfirstkannada.com

Breaking News: ಚೈತ್ರಾ ಕುಂದಾಪುರ ಕೇಸ್​.. A3 ಆರೋಪಿ ಅಭಿನವ ಹಾಲಾಶ್ರೀ ಬಂಧನ

Share :

19-09-2023

    5 ಕೋಟಿ ವಂಚನೆ ಪ್ರಕರಣದಲ್ಲಿ ಅಭಿನವ ಹಾಲಾಶ್ರೀ ಹೆಸರು

    ಚೈತ್ರಾ ಕುಂದಾಪುರ ಬಿಚ್ಚಿಟ್ಟಿದ್ದರು ಅಭಿನವ ಹಾಲಾಶ್ರೀ ಹೆಸರು

    ಹೊರ ರಾಜ್ಯದಲ್ಲಿ ಅರೆಸ್ಟ್​ ಆದ ಬಹುಕೋಟಿ ವಂಚನೆಯ A3 ಆರೋಪಿ

ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ A3 ಆರೋಪಿಯಾಗಿದ್ದ ಅಭಿನವ ಹಾಲಾಶ್ರೀ ಬಂಧನವಾಗಿದೆ. ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅರೆಸ್ಟ್​ ಬೆನ್ನಲ್ಲೇ ಅಭಿನವ ಹಾಲಾಶ್ರೀ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿತ್ತು. ಸಿಸಿಬಿ ಪೊಲೀಸರು ಅಭಿನವ ಹಾಲಾಶ್ರೀಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೀಗ ಒಡಿಶಾದಲ್ಲಿ A3 ಆರೋಪಿಯ ಬಂಧನವಾಗಿದೆ ಎಂಬ ಮಾಹಿತಿ ನ್ಯೂಸ್​​ ಫಸ್ಟ್​ಗೆ ಲಭ್ಯವಾಗಿದೆ.

ಬಿಜೆಪಿ ಟಿಕೆಟ್​ ವಿಚಾರವಾಗಿ 5 ಕೋಟಿ ವಂಚನೆ ಮಾಡಿರುವ ಬಗ್ಗೆ ಉದ್ಯೋಗಿ ಗೋವಿಂದ ಬಾಬು ಪೂಜಾರಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಚೈತ್ರಾ ಕುಂದಾಪುರಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದರು. ಗೋವಿಂದ ಬಾಬು ಪೂಜಾರಿ ನೀಡಿದ್ದ ದೂರಿನಲ್ಲಿ A1 ಆರೋಪಿ ಚೈತ್ರಾ, A2 ಆರೋಪಿ ಗಗನ್​ ಕಡೂರ್​ ಮಾತ್ರವಲ್ಲದೆ, A3 ಆರೋಪಿಯಾಗಿ ಅಭಿನವ ಹಾಲಾಶ್ರೀಗಳ ಹೆಸರು ಕೂಡ ಉಲ್ಲೇಖವಾಗಿತ್ತು. ಅದರಂತೆಯೇ A3 ಆರೋಪಿಗಾಗಿ ಹುಡುಕಾಡುತ್ತಿದ್ದ ಪೊಲೀಸರು ಒಡಿಶಾದಲ್ಲಿ ತಲೆಮರೆಸಿಕೊಂಡಿದ್ದ ಅಭಿನವ ಹಾಲಾಶ್ರೀ ಸ್ವಾಮೀಜಿಯನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಚೈತ್ರಾ ಕುಂದಾಪುರ ಕೇಸ್​.. A3 ಆರೋಪಿ ಅಭಿನವ ಹಾಲಾಶ್ರೀ ಬಂಧನ

https://newsfirstlive.com/wp-content/uploads/2023/09/Abhinava-Sree.jpg

Load More