ಅಭಿಷೇಕ್- ಅವಿವಾ ಮದುವೆ ಬಾಡೂಟ
ಬೀಗರೂಟಕ್ಕೆ ನಡೀತಿದೆ ಭರ್ಜರಿ ತಯಾರಿ
ಬೀಗರೂಟ ನಡೀತಿರೋದು ಎಲ್ಲಿ ಗೊತ್ತಾ..?
ಸ್ಯಾಂಡಲ್ವುಡ್ ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿಡಪ ಅವರ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಪ್ಯಾಲೇಜ್ ಗ್ರೌಂಡ್ನಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಸಾಂಡಲ್ವುಡ್ ಖ್ಯಾತ ನಟ ಹಾಗೂ ನಟಿಯರು ಹಾಗೂ ರಾಜಕೀಯ ನಾಯಕರು ಬಂದು ನವ ಜೋಡಿಗೆ ಶುಭ ಹಾರೈಸಿದ್ದಾರೆ. ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿಡಪ ಅವರ ಸಂಗೀತ ಕಾರ್ಯಕ್ರಮ ಶನಿವಾರ ರಾತ್ರಿ ನಡೆದಿತ್ತು. ಅನೇಕ ಸೆಲೆಬ್ರಿಟಿಗಳು ಸಹ ಭಾಗಿಯಾಗಿ ಖುಷಿ ಪಟ್ಟರು. ಇದೀಗ ಅಭಿ ಹಾಗೂ ಅವಿ ಮದುವೆ ಬೀಗರೂಟ ಕಾರ್ಯಕ್ರಮವನ್ನು ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಜೂನ್ 16ರಂದು ನಡೆಯಲಿರುವ ಬೀಗರೂಟಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಮದ್ದೂರಿನ ಗೆಜ್ಜಲಗೆರೆಯ ಬೃಹತ್ ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಯಿಂದಲೇ ಊಟದ ವಿತರಣೆ ಆರಂಭಗೊಳ್ಳಲಿದೆ. ಇದಕ್ಕೆ ಎಲ್ಲಾ ರೀತಿಯ ಸಿದ್ಧತೆಯನ್ನು ನಡೆಸಲಾಗುತ್ತಿದೆ. ಸುಮಾರು 15 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್‌ಗಳನ್ನು ಹಾಕಲಾಗುತ್ತಿದ್ದು, ಸುಮಾರು ಐವತ್ತು ಸಾವಿರ ಜನರಿಗೆ ಭೋಜನ ವ್ಯವಸ್ಥೆಯನ್ನು ಮಾಡಿಸಲಾಗುತ್ತಿದೆ. ಔತಣಕೂಟಕ್ಕೆ 7 ಟನ್ ಮಟನ್ ಹಾಗೂ 7 ಟನ್ ಚಿಕನ್ ಬಳಸಿ ಬೀಗರೂಟ ತಯಾರು ಮಾಡಲಾಗುತ್ತಿದೆ.
ಮೆನುವಿನಲ್ಲಿ ರಾಗಿ ಮುದ್ದೆ, ಬೋಟಿ ಗೊಜ್ಜು ಮೊಟ್ಟೆ ಮಟನ್, 2 ತರ ಚಿಕನ್, ಗೀ ರೈಸ್, ಅನ್ನ ತಿಳಿ ಸಾಂಬಾರ್, ಮಜ್ಜಿಗೆ, ಬಾಳೆಹಣ್ಣು, ಬೀಡಾ ನಂದಿನಿ ಐಸ್ ಕ್ರೀಂ, ವಾಟರ್ ಬಾಟಲ್‌ಗಳು ಇರಲಿವೆ. ಅಂಬಿ ಕುಟುಂಬಸ್ಥರ ಆಸೆಯಂತೆ ಅಭಿಷೇಕ್ ಬೀಗರ ಊಟ ಮಂಡ್ಯದಲ್ಲೇ ಮಾಡಲಾಗ್ತಿದೆ. ಹೀಗಾಗಿ ಸ್ಥಳೀಯ ಬಾಣಸಿಗರಿಂದಲೇ ಅಡುಗೆ ತಯಾರು ಮಾಡಿಸಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ವಧು ವರರಿಗೆ ಕೇಕ್, ಹೂವಿನ ಹಾರ, ಬೊಕ್ಕೆ ತರದೆ ಜನರು ಬಂದು ಆಶೀರ್ವಾದ ಮಾಡದರೆ ಸಾಕು ಎಂದು ನಟ ಅಭಿಷೇಕ್ ಅಂಬರೀಶ್ ಮನವಿ ಮಾಡಿದ್ದಾರೆ. ಈ ಬೀಗರೂಟಕ್ಕೆ ಚಿತ್ರರಂಗದ ಖ್ಯಾತ ಸೆಲೆಬ್ರಿಟಿಗಳು ಕೂಡ ಕುಟುಂಬ ಸದಸ್ಯರಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ