ಜೂನ್ 5 ರಂದು ನಡೆಯಿತು ಅವಿವಾ ಜೊತೆ ಅಭಿ ಅದ್ಧೂರಿ ಮದುವೆ
ಇಂದು ಮಂಡ್ಯದ ಜನರಿಗೆ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಿದ ಸುಮಲತಾ
15 ಎಕರೆ ಜಾಗದಲ್ಲಿ ಬೀಗರ ಊಟಕ್ಕೆ ಭರ್ಜರಿ ವ್ಯವಸ್ಥೆ ಮಾಡಿದ ಅಂಬಿ ಕುಟುಂಬ
ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್, ಸಂಸದೆ ಸುಮಲತಾರ ಪುತ್ರ ಅಭಿಷೇಕ್ ಹಾಗೂ ಅವಿವಾ ಮದುವೆ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಜರುಗಿತ್ತು. ಇಂದು ಅಂಬಿ ಹುಟ್ಟೂರು ಮಂಡ್ಯದಲ್ಲಿ ಜಿಲ್ಲೆಯ ಜನರಿಗೆ ಭರ್ಜರಿ ಬಾಡೂಟ ಹಾಕಿಸಲು ತಯಾರಿ ನಡೆದಿದೆ. ಬರೋಬ್ಬರಿ 15 ಎಕರೆ ಜಾಗದಲ್ಲಿ ಊಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಕನಸೊಂದಿತ್ತು. ಮಂಡ್ಯ ಜನರಿಗೆ ಭರ್ಜರಿ ಊಟ ಹಾಕಿಸಬೇಕು ಅಂದುಕೊಂಡಿದ್ರು. ಅವರು ಬದುಕಿರುವವರೆಗೂ ಅದು ಸಾಧ್ಯವಾಗಿರಲಿಲ್ಲ. ಈಗ ಅವರ ಪುತ್ರ ಅಭಿಷೇಕ್ ವಿವಾಹದ ಬೀಗರ ಔತಣ ಕೂಟದ ನೆಪದಲ್ಲಿ ಅಂಭಿ ಕನಸ್ಸನ್ನ ಸಾಕಾರಗೊಳಿಸಲಾಗುತ್ತಿದೆ. ಹೌದು, ಇಂದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರ ಕಾಲೂನಿ ಬಳಿ ಬೊಂಬಾಟ್ ಬಾಡೂಟವನ್ನ ಅಂಬಿ ಕುಟುಂಬ ಆಯೋಜಿಸಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮದುವೆ ಹಾಗೂ ಆರಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತ್ತು. ಇಂದು ಬೀಗರ ಔತಣ ಕೂಡ ನಡೆಯಲಿದ್ದು, 6 ಟನ್ ಮಟನ್, 7 ಟನ್ ಚಿಕನ್ ನಲ್ಲಿ ಸುಮಾರು 50 ಸಾವಿರ ಜನರಿಗೆ ಮಂಡ್ಯ ಸ್ಟೈಲ್ ನಲ್ಲೇ ಬಾಡೂಟದ ಅಡುಗೆ ಮಾಡಿಸಿ ಊಟ ಹಾಕಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಗಜ್ಜಗೆರೆ ಬಳಿಯ 15 ಎಕರೆ ಜಾಗದಲ್ಲಿ ಸಿದ್ಧತೆಯಾಗಿದೆ. ಇದೆಲ್ಲದರ ಉಸ್ತುವಾರಿಯನ್ನ ನಿರ್ಮಾಪಕ ರಾಕ್ ಲೈನ್ ವಹಿಸಿಕೊಂಡಿದ್ದು, ಯಾವುದರಲ್ಲಿ ಕೊರತೆಯಾಗದಂತೆ, ಸಮಸ್ಯೆಯಾಗದಂತೆ ನೋಡಿಕೊಂಡಿದ್ದಾರೆ.
ಜರ್ಮನ್ ಟೆಂಟ್ ಹಾಕಿ ಟೇಬಲ್ ಹಾಗೂ ಆಸನ ವ್ಯವಸ್ಥೇ ಮಾಡಲಾಗಿದೆ. ಒಂದೆ ಬಾರಿ ನಾಲ್ಕೂವರೆ ಸಾವಿರ ಜನರು ಕೂತು ಊಟ ಮಾಡುವಂತೆ ಸಿದ್ಧತೆ ಮಾಡಿಕೊಂಡಿದ್ದು, ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದಿಂದ ಅಡುಗೆ ತಯಾರಾಗಲಿದೆ. ರಾಗಿ ಮುದ್ದೆ, ಬೋಟಿ ಗೊಜ್ಜು, ಮಟನ್ ಬಿರಿಯಾನಿ, ಎರಡು ತರದ ಚಿಕನ್ ಖಾದ್ಯ, ಮೊಟ್ಟೆ, ಅನ್ನ, ನಾಟಿಕೋಳಿ ಸಾರು, ರಸಂ, ಬೀಡ, ಐಕ್ರೀಂ, ಬಾಳೆ ಹಣ್ಣು ಸೇರಿದಂತೆ ಬಗೆ ಬಗೆಯ ಅಡುಗೆ ಮಾಡಲಿದ್ದಾರೆ. ಸಿನಿಮಾ, ನಟ ನಟಿಯರು, ರಾಜಕೀಯ ವ್ಯಕ್ತಿಗಳೂ ಬೀಗರ ಔತಣಕ್ಕೆ ಬರಲಿದ್ದು, ವಿವಿಐಪಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಇನ್ನು ಬೀಗರ ಊಟದ ಸಮಯದಲ್ಲಿ ಅಭಿಷೇಕ್ ಹಾಗೂ ಅವಿವಾ ಕೂಡ ಹಾಜರಿರಲಿದ್ದು, ಅವರಿಗೆ ಬಂದ ಜನರು ಶುಭಾಷಯ ಹೇಳಿ ಆಶೀರ್ವಾದ ಮಾಡಲು ಕೂಡ ವ್ಯವಸ್ಥ ಕಲ್ಪಿಸಲಾಗಿದೆ. ಅಲ್ಲದೇ ಖುದ್ದು ಬೀಗರ ಔತಣ ಕೂಟಕ್ಕೆ ಅಭಿ-ಅವಿವಾ ನವದಂಪತಿ ವಿಡಿಯೋ ಮೂಲಕ ಜಿಲ್ಲೆ ಜನರನ್ನ ಕೈ ಮುಗಿದು ಆಹ್ವಾನಿಸಿದ್ದಾರೆ. ಎಲ್ಲ ಅಂಬರೀಶ್ ಅಭಿಮಾನಿಗಳು, ಜಿಲ್ಲೆಯ ಜನರು, ಹಿತೈಷಿಗಳು ಔತಣ ಕೂಟದಲ್ಲಿ ಭಾಗವಹಿಸುವಂತೆ ಅಭಿ ಆಹ್ವಾನ ನೀಡಿದ್ರೆ, ಎಲ್ಲರೂ ಬಂದು ಆಶೀರ್ವಾದಿಸಿ ಎಂದ ಅವಿವಾ ಮನವಿ ಮಾಡಿದ್ದಾರೆ. ಇನ್ನು ಸಂಸದೆ ಸುಮಲತಾ ಕೂಡ ಬೀಗರ ಊಟಕ್ಕೆ ಆಹ್ವಾನ ನೀಡಿದ್ದು, ಕುಟುಂಬ ಸಮೇತ ಬೀಗರ ಔತಣ ಕೂಟಕ್ಕೆ ಬನ್ನಿ. ನವ ವಧುವರರನ್ನ ಆಶೀರ್ವಾದಿಸಿ ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆ ಅಭಿಮಾನಿಗಳ ಆರಾಧ್ಯ ದೈವ ದಿವಗಂತ ಅಂಬರೀಶ್ರವರ ಮಂಡ್ಯ ಜನರಿಗೆ ಬಾಡೂಟ ಹಾಕಿಸಬೇಕೆಂಬ ಮಹಾದಾಸೆ ಅವರ ಪುತ್ರನ ಬೀಗರ ಊಟದ ಮೂಲಕ ನೆರವೇರುತ್ತಿದೆ. ಅಲ್ಲದೇ ಇದೇ ವೇಳೆ ಅಭಿಷೇಕ್, ಅವಿವಾರಿಗೆ ಬಂದ ಜನರು ಶುಭಾಶಯ ಕೋರಲು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಇಡೀ ಅಂಬಿ ಕುಟುಂಬ ಸದಸ್ಯರಯ ಕಾರ್ಯಕ್ರಮ ಮುಗಿಯುವವರೆಗೂ ಇರಲಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ