newsfirstkannada.com

ಅಂಬಿ ಫ್ಯಾನ್ಸ್​​ಗೆ ಮಂಡ್ಯದಲ್ಲಿ ನಾಳೆ ಭರ್ಜರಿ ಬೀಗರ ಊಟ.. 7 ಟನ್ ಮಟನ್, 7 ಟನ್ ಚಿಕನ್..!

Share :

15-06-2023

    ಜೂನ್ 5 ರಂದು ಅವಿವಾ ಜೊತೆ ಅಭಿ ಅದ್ದೂರಿ ಮದುವೆ

    ಮದುವೆ ಖುಷಿಗೆ ಮಂಡ್ಯ ಜನತೆಗೆ ಅಭಿಯಿಂದ ಬೀಗರ ಊಟ

    ಎಷ್ಟು ಸಾವಿರ ಅಭಿಮಾನಿಗಳಿಗೆ ಊಟ ಹಾಕಲು ಪ್ಲಾನ್ ಗೊತ್ತಾ?

ಜೂನ್ 5 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಭಿಷೇಕ್-ಅವಿವಾ ಬೀಗರ ಔತಣಕೂಟ ನಾಳೆ ಸಕ್ಕರೆನಾಡು ಮಂಡ್ಯದ ಗೆಜ್ಜಲಗೆರೆ ಕಾಲೋನಿ ಬಳಿ ನಡೆಯಲಿದೆ.

ಅಂಬರೀಶ್‌ಗೆ ಪ್ರಿಯವಾದ ಮಂಡ್ಯ ಶೈಲಿಯ ಬಾಡೂಟವನ್ನು ಅತಿಥಿಗಳಿಗೆ ಬಡಿಸಲಾಗುವುದು. ಎಷ್ಟೇ ಸಾವಿರ ಜನರು ಬಂದರೂ ಊಟದ ವ್ಯವಸ್ಥೆ ಮಾಡಲು ಸಕಲ ಸಿದ್ಧತೆ ಮಾಡಲಾಗ್ತಿದೆ. ಸಿದ್ಧತೆ ಪರಿಶೀಲನೆ ಬಳಿಕ ಮಾಹಿತಿ ನೀಡಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಬೆಳಗ್ಗೆ 11 ಗಂಟೆಯಿಂದಲೇ ಬೀಗರ ಊಟ ಆರಂಭವಾಗಲಿದ್ದು, ಸಿನೆಮಾ ಹಾಗೂ ರಾಜಕೀಯದಲ್ಲಿ ಅಂಬಿ ಕುಟುಂಬ ಪರ ನಿಂತ ಎಲ್ಲರಿಗೂ ಊಟ ಹಾಕಿಸಲಾಗುತ್ತಿದೆ.

ಸ್ಥಳೀಯ ಮೂವರು ಬಾಣಸಿಗರ ನೇತೃತ್ವದಲ್ಲಿ, 50 ಸಾವಿರಕ್ಕೂ ಅಧಿಕ ಮಂದಿಗೆ ಊಟ ಹಾಕಿಸಲು ತಯಾರಿ ನಡೆಸಲಾಗುತ್ತಿದೆ. 7 ಟನ್ ಮಟನ್, 7 ಟನ್ ಚಿಕನ್​ನಲ್ಲಿ ಅದ್ದೂರಿ ಬಾಡೂಟ ಖಾದ್ಯ ತಯಾರಿಸಲಾಗುತ್ತಿದೆ. ನಾಟಿ ಸ್ಟೈಲ್​ನಲ್ಲಿಯೆ ಬೀಗರ ಔತಣಕೂಟ ಆಯೋಜಿಸಲು ಅಂಬಿ ಕುಟುಂಬ ಪ್ಲಾನ್ ಮಾಡಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಬಿ ಫ್ಯಾನ್ಸ್​​ಗೆ ಮಂಡ್ಯದಲ್ಲಿ ನಾಳೆ ಭರ್ಜರಿ ಬೀಗರ ಊಟ.. 7 ಟನ್ ಮಟನ್, 7 ಟನ್ ಚಿಕನ್..!

https://newsfirstlive.com/wp-content/uploads/2023/06/Abhishek-Aviva.jpg

Load More