newsfirstkannada.com

ಅದ್ಧೂರಿಯಾಗಿ ನಡೆಯಿತು ಅಭಿ-ಅವಿವಾ ಆರತಕ್ಷತೆ; ಜಮ್ಮು ಕಾಶ್ಮೀರ ಸಿಎಂ, ಜಾಕಿ ಶ್ರಾಫ್ ಸೇರಿದಂತೆ ಹಲವು ಗಣ್ಯರ ಆಗಮನ

Share :

Published June 8, 2023 at 2:06am

Update June 8, 2023 at 2:15am

    ಅಭಿಷೇಕ್​ ಅಂಬರೀಶ್​-ಅವಿವಾ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ

    ಗೋಲ್ಡನ್ ಥೀಮ್ ಕಾಸ್ಟ್ಯೂಮ್ ಡ್ರೆಸ್​ನಲ್ಲಿ ಅಭಿ-ಅವಿವಾ ಮಿಂಚಿಂಗ್​

    ಖ್ಯಾತ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಆರತಕ್ಷತೆಯಲ್ಲಿ ಭಾಗಿ

ಸ್ಯಾಂಡಲ್​ವುಡ್​ ನಟ ಅಭಿಷೇಕ್​ ಅಂಬರೀಶ್​​ ಮತ್ತು ಅವಿವಾ ಬಿಡಪ ಅವರ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ನಿನ್ನೆ ಪ್ಯಾಲೇಜ್​ ಗ್ರೌಂಡ್​ನಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಸೆಲೆಬ್ರಿಟಿ, ರಾಜಕೀಯ ನಾಯಕರು ಸೇರಿದಂತೆ ಗಣ್ಯರು ಆಗಮಿಸಿದ್ದರು.

ನವ ಜೋಡಿಗಳಾದ ಅಭಿಷೇಕ್​ ಮತ್ತು ಅವಿವಾ ಗೋಲ್ಡನ್ ಥೀಮ್ ಕಾಸ್ಟ್ಯೂಮ್ ಧರಿಸಿಕೊಂಡು ರಾಯಲ್ ಲುಕ್ ನಲ್ಲಿ ಮಿಂಚಿದ್ದಾರೆ. ಆರತಕ್ಷತೆಗೆ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಎಸ್.ಎಮ್.ಕೃಷ್ಣ , kj ಜಾರ್ಜ್, ಬಿ.ಎನ್.ಬಚ್ಚೇಗೌಡ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಮೈಸೂರು ಮಹಾರಾಜ ಯದುವೀರ ಒಡೆಯರ್ ಆಗಮಿಸಿ ನವ ವಧು-ವರನಿಗೆ ಆಶೀರ್ವದಿಸಿದರು.

ಸಿನಿಮಾ ತಾರೆಯರಾದ ಶಿವಾಜಿ ಪ್ರಭು ಗಣೇಶನ್,  ರಾಘವೇಂದ್ರ ರಾಜ್ ಕುಮಾರ್, ದೊಡ್ಡಣ್ಣ, ನಾಗಶೇಖರ್, ಉದಯ್ ಗರುಡಚಾರ್, ಗಿರೀಜಾ ಲೋಕೇಶ್, ಮೆಗಾಸ್ಟಾರ್ ಚಿರಂಜೀವಿ, ರವಿಚಂದ್ರನ್, ಆಶಿಕಾ ರಂಗನಾಥ್​, ರಮ್ಯಾ, ಲವ್ಲಿ ಸ್ಟಾರ್​ ಪ್ರೇಮ್​,  ಧನ್ವೀರ್​, ಮಾಲಾಶ್ರೀ, ಸಿಂಹಪ್ರಿಯಾ, ಪ್ರಜ್ವಲ್​ ದೇವರಾಜ್​ ದಂಪತಿ, ರಿಷಬ್​ ಶೆಟ್ಟಿ, ರಮೇಶ್​ ಅರವಿಂದ್​ ಅವರು ಅಭಿ-ಅವಿವಾ ಆರತಕ್ಷತೆಯಲ್ಲಿ ಕಾಣಿಸಿಕೊಂಡರು.

ಇನ್ನು ಜಮ್ಮು ಕಾಶ್ಮೀರದ ಸಿಎಂ ಫಾರೂಖ್​​ ಅಬ್ದುಲ್ಲಾ,  ಬಾಲಿವುಡ್​ ನಟ ಜಾಕಿಶ್ರಾಫ್​ ಕೂಡ  ದೂರದ ಊರಿಂದ ಆಗಮಿಸಿ ನವ ಜೋಡಿಗೆ ಶುಭಾಶಯ ತಿಳಿಸುವ ಮೂಲಕ ಆರ್ಶಿರ್ವಾದ ನೀಡಿದರು.

ಆರತಕ್ಷತೆಗೆ ಆಗಮಿಸಿದ ಗಣ್ಯರಿಗೆ ಭೂರಿ ಭೋಜನ ವ್ಯವಸ್ಥೆ  ಮಾಡಲಾಗಿತ್ತು.  ಎಲ್ಲರಿಗೂ ಸಸ್ಯಹಾರಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲೇಬಿ, ಮೈಸೂರು ಪಾಕ್, ಬಾದುಷಾ, ಜಾಮೂನ್, ಬಾದಮ್ ಹಲ್ವಾ, ಚಂದ್ರಹಾರ್ ಸೇರಿದಂತೆ ಏಳು ಬಗೆಯ ಸಿಹಿ ತಿಂಡಿ ಸೇರಿದಂತೆ 34 ಬಗೆ ಆಹಾರವನ್ನು ಗಣ್ಯರಿಗೆ ಅಂಬಿ ಫ್ಯಾಮಿಲಿ ಉಣ ಬಡಿಸಿದ್ದಾರೆ.

ಬೀಗರ ಊಟ ಕೂಡ ಇದೆ

ಜೂನ್ 16ಕ್ಕೆ ಮಂಡ್ಯದ ಮದ್ದೂರಿನ ಗೆಜ್ಜಲಗೆರೆ ಗ್ರಾಮದಲ್ಲಿ ಬೀಗರ ಔತಣ ಕೂಟವನ್ನು ಅಭಿ ಏರ್ಪಡಿಸಿದ್ದಾರೆ. ಕುಟುಂಬಸ್ಥರು, ಅತ್ಯಾಪ್ತರು ಹಾಗೂ ಫ್ಯಾನ್ಸ್​ಗೆ ನಾನ್​ವೆಜ್ ಊಟ ಹಾಕಿಸಲಿದ್ದಾರೆ. ಇಲ್ಲಿ ಸುಮಾರು ಒಂದು ಲಕ್ಷ ಮಂದಿಗೆ ಊಟ ಹಾಕುವ ಪ್ಲಾನ್​ನಲ್ಲಿ ಅಂಬಿ ಕುಟುಂಬ ಇದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಅದ್ಧೂರಿಯಾಗಿ ನಡೆಯಿತು ಅಭಿ-ಅವಿವಾ ಆರತಕ್ಷತೆ; ಜಮ್ಮು ಕಾಶ್ಮೀರ ಸಿಎಂ, ಜಾಕಿ ಶ್ರಾಫ್ ಸೇರಿದಂತೆ ಹಲವು ಗಣ್ಯರ ಆಗಮನ

https://newsfirstlive.com/wp-content/uploads/2023/06/Abhi-aviva-1.jpg

Load More