newsfirstkannada.com

PHOTO; ಅಭಿ- ಅವಿವಾ ಅದ್ಧೂರಿ ಕಲ್ಯಾಣೋತ್ಸವ.. ಮೆಹಂದಿ ಶಾಸ್ತ್ರಕ್ಕೆ ಸ್ಯಾಂಡಲ್‌ವುಡ್ ತಾರೆಯರ ಸಾಥ್

Share :

03-06-2023

    ಅಭಿ- ಅವಿವಾ ಅದ್ಧೂರಿ ಮದುವೆ ಸಂಭ್ರಮ ಬಲು ಜೋರು..

    ಮೆಹಂದಿ ಶಾಸ್ತ್ರಕ್ಕೆ ಸ್ಯಾಂಡಲ್‌ವುಡ್ ತಾರೆಯರ ಆಗಮನ

    ಅಭಿ- ಅವಿವಾ ಮೆಹಂದಿ ಕಾರ್ಯಕ್ರಮ ಫೋಟೋಸ್​ ಇಲ್ಲಿವೆ

ಬೆಂಗಳೂರು: ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಮದುವೆ ಸಂಭ್ರಮ ಜೋರಾಗಿದೆ. ಅಂಬಿ ಮನೆಯಲ್ಲಿ ಅರಿಶಿನ ಶಾಸ್ತ್ರ ಮುಗಿಯುತ್ತಿದ್ದಂತೆ ಮೆಹಂದಿ ಕಾರ್ಯಕ್ರಮ ಕಳೆಕಟ್ಟಿದೆ.

ಮೆಹಂದಿ ಕಾರ್ಯಕ್ರಮದಲ್ಲಿ ಅಭಿ ಹಾಗೂ ಅವಿವಾ ಮಿಂಚುತ್ತಾ ಇದ್ದಾರೆ. ಅಂಬಿ ಮನೆಯ ಸಂಭ್ರಮಕ್ಕೆ ಸ್ಯಾಂಡಲ್‌ವುಡ್ ತಾರೆಯರು ಸಾಥ್ ನೀಡಿದ್ದಾರೆ.

ನಟ ಪ್ರಜ್ವಲ್ ದೇವರಾಜ್, ರಾಗಿಣಿ ಪ್ರಜ್ವಲ್ ದೇವರಾಜ್, ನಟಿಯರಾದ ಪ್ರಿಯಾಂಕಾ, ಮೇಘನಾ ರಾಜ್ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಭಿಷೇಕ್ ಹಾಗೂ ಅವಿವಾ ಜೋಡಿಗೆ ಶುಭಾಶಯ ಕೋರಿದ್ದಾರೆ. ಅಭಿಷೇಕ್ ಮದುಮಗನಾಗಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೇ ಜುಲ್ 5ರಂದು ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ವಿವಾಹ ಅದ್ದೂರಿಯಾಗಿ ಅರಮನೆ ಮೈದಾನದ ತ್ರಿಪುರವಾಸಿನಿ ನಡೆಯಲಿದೆ.

ಜೂನ್ 7ರಂದು ಅದ್ಧೂರಿ ಆರತಕ್ಷತೆ, ಜೂನ್ 10ರಂದು ಸಂಗೀತ ಕೂಟವನ್ನ ಅಂಬಿ ಕುಟುಂಬ ಸದಸ್ಯರು ಆಯೋಜಿಸಿದ್ದಾರೆ. ಜೂನ್ 16ರಂದು ತನ್ನ ಅಭಿಮಾನಿ ಮತ್ತು ಬಂಧು ಮಿತ್ರರಿಗಾಗಿ ಮಂಡ್ಯದಲ್ಲಿ ಬೀಗರ ಊಟವನ್ನ ಆಯೋಜನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTO; ಅಭಿ- ಅವಿವಾ ಅದ್ಧೂರಿ ಕಲ್ಯಾಣೋತ್ಸವ.. ಮೆಹಂದಿ ಶಾಸ್ತ್ರಕ್ಕೆ ಸ್ಯಾಂಡಲ್‌ವುಡ್ ತಾರೆಯರ ಸಾಥ್

https://newsfirstlive.com/wp-content/uploads/2023/06/Abhishek-Ambareesh-1.jpg

Load More