newsfirstkannada.com

VIDEO: ಬೀಗರ ಊಟ ಮಾಡಲು ಮುಗಿಬಿದ್ದ ಜನರು; ಪೊಲೀಸರಿಂದ ಲಾಠಿ ಚಾರ್ಜ್‌, ಬ್ಯಾರಿಕೇಡ್ ಚೆಲ್ಲಾಪಿಲ್ಲಿ

Share :

16-06-2023

    ರಾಗಿ ಮುದ್ದೆ, ಬೋಟಿ ಗೊಜ್ಜು, ಮಟನ್ ಬಿರಿಯಾನಿ, ನಾಟಿಕೋಳಿ ಸಾರು

    ಬೀಗರ ಊಟ ಮಾಡಲು ಮುಗಿಬಿದ್ದ ಸಾವಿರಾರು ಅಂಬಿ ಅಭಿಮಾನಿಗಳು

    ಮಂಡ್ಯದಲ್ಲಿ ಜನರನ್ನ ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ

ಮಂಡ್ಯ: ಅಭಿಷೇಕ್ ಅಂಬರೀಷ್, ಅವಿವಾ ಮದುವೆಯ ಹಿನ್ನೆಲೆಯಲ್ಲಿ ಗೆಜ್ಜಲಗೆರೆ ಬಳಿ ಭರ್ಜರಿ ಬೀಗರ ಊಟ ಆಯೋಜಿಸಲಾಗಿದೆ. ಅಂಬರೀಶ್ ಅಭಿಮಾನಿಗಳಿಗಾಗಿ ರಾಗಿ ಮುದ್ದೆ, ಬೋಟಿ ಗೊಜ್ಜು, ಮಟನ್ ಬಿರಿಯಾನಿ, ನಾಟಿಕೋಳಿ ಸಾರು, ಮೊಟ್ಟೆ, ಅನ್ನ, ರಸಂ, ಬೀಡ, ಐಸ್‌ಕ್ರೀಂ, ಬಾಳೆ ಹಣ್ಣು ಸೇರಿದಂತೆ ಬಗೆ ಬಗೆಯ ಊಟ ಬಡಿಸಲಾಗುತ್ತಿದೆ.

ಬೀಗರ ಊಟದಲ್ಲಿ ಬಾಡೂಟಕ್ಕಾಗಿ ಜನರು ಮುಗಿಬಿದ್ದಿದ್ದಾರೆ. ನೂಕುನುಗ್ಗಲಿನಲ್ಲಿ ಜನರು ಊಟಕ್ಕೆ ಮುಂದಾಗಿದ್ದು, ಪೊಲೀಸರು ಜನರನ್ನ ತಡೆದು ನಿಲ್ಲಿಸಲು ಹರಸಾಹಸ ಪಡುತ್ತಿದ್ದಾರೆ. ನೂಕು ನುಗ್ಗಲಿನಲ್ಲಿ ಕೆಲ ವಯಸ್ಕರು ನೆಲಕ್ಕೆ ಕುಸಿದು ಬಿದ್ದಿದ್ದಾರೆ. ನೂಕುನುಗ್ಗಲು ಉಂಟು ಮಾಡುತ್ತಿದ್ದವರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

ಬೀಗರ ಊಟಕ್ಕೆ ಆಗಮಿಸುತ್ತಿರುವ ಸಾವಿರಾರು ಜನರು ಊಟದ ಹಾಲ್‌ಗೆ ನುಗ್ಗಿದ್ದಾರೆ. ಹಾಕಿದ್ದ ಬ್ಯಾರಿಕೇಡ್‌ಗಳನ್ನು ದಾಟಿರುವ ಜನರು, ಪೆಂಡಾಲ್ ಅಡಿಯಲ್ಲಿ ನುಗ್ಗಿ ಬಂದಿದ್ದಾರೆ. ಸ್ಥಳದಲ್ಲೇ ಇದ್ದ ರಾಕ್‌ಲೈನ್ ವೆಂಕಟೇಶ್, ಜನರಿಗೆ ಕೈ ಮುಗಿದು ತಾಳ್ಮೆಯಿಂದ ಇರಿ ಎಂದು ಪ್ರಾರ್ಥನೆ ಮಾಡಿದ್ದಾರೆ.

ಬೀಗರ ಊಟ ಮಾಡಲು ಸಾವಿರಾರು ಜನ ಕ್ಯೂನಲ್ಲಿ ನಿಂತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸಾಲಲ್ಲಿ ನಿಂತ ಪುರುಷರು, ಮಹಿಳೆಯರು, ಮಕ್ಕಳು ಬೀಗರ ಊಟ ಮಾಡುತ್ತಿದ್ದಾರೆ. ನೂಕು ನುಗ್ಗಲಿನಲ್ಲಿ ಆಗಮಿಸುತ್ತಿರುವ ಜನರನ್ನು ಕಂಟ್ರೋಲ್ ಮಾಡಲು ಪೊಲೀಸರ ಹರಸಾಹಸ ಮಾಡುತ್ತಿದ್ದಾರೆ.

ಬೀಗರ ಊಟದ ಹಿನ್ನೆಲೆ ಅಭಿಷೇಕ್ ಅಂಬರೀಶ್, ಅವಿವಾ ಜೋಡಿ ಗೆಜ್ಜಲಗೆರೆಗೆ ಬಂದಿದ್ದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಅಭಿಮಾನಿಗಳು ಅಭಿಷೇಕ್‌ಗೆ ಜೈಕಾರ ಕೂಗಿದ್ರೆ, ಫಸ್ಟ್ ಮಂಡ್ಯಕ್ಕೆ ಬಂದಿರುವ ಅವಿವಾ ಅಭಿಮಾನಿಗಳಿಗೆ ನಮಸ್ಕಾರ ಮಾಡಿದ್ದಾರೆ. ಅಭಿಷೇಕ್ ಅಂಬರೀಷ್ ಅಭಿಮಾನಿಗಳಿಗೆ ಊಟ ಕೂಡ ಬಡಿಸಿ, ಊಟ ಹೇಂಗೆದೆ ಎಂದು ಕೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

VIDEO: ಬೀಗರ ಊಟ ಮಾಡಲು ಮುಗಿಬಿದ್ದ ಜನರು; ಪೊಲೀಸರಿಂದ ಲಾಠಿ ಚಾರ್ಜ್‌, ಬ್ಯಾರಿಕೇಡ್ ಚೆಲ್ಲಾಪಿಲ್ಲಿ

https://newsfirstlive.com/wp-content/uploads/2023/06/Mandya-2.jpg

Load More