newsfirstkannada.com

ಅಭಿಷೇಕ್-ಅವಿವಾ ಮದುವೆ ಬೀಗರ ಔತಣಕ್ಕೆ ಮುಗಿಬಿದ್ದ ಜನ.. ಪೊಲೀಸರಿಂದ ಲಾಠಿ ಚಾರ್ಜ್​​!

Share :

16-06-2023

    ನಟ ಅಭಿಷೇಕ್ ಅಂಬರೀಶ್​​ ಹಾಗೂ ಅವಿವಾ ಬೀಗರ ಔತಣದಲ್ಲಿ ಜನವೋ ಜನ!

    ಇಂದು ಮಂಡ್ಯದ ಜನರಿಗೆ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಿದ ಸಂಸದೆ ಸುಮಲತಾ

    15 ಎಕರೆ ಜಾಗದಲ್ಲಿ ಔತಣ ಕೂಟಕ್ಕೆ ಭರ್ಜರಿ ವ್ಯವಸ್ಥೆ ಮಾಡಿದ ಅಂಬಿ ಕುಟುಂಬ

ರೆಬಲ್ ಸ್ಟಾರ್ ಅಂಬರೀಶ್, ಸಂಸದೆ‌ ಸುಮಲತಾರ ಪುತ್ರ ಅಭಿಷೇಕ್ ಹಾಗೂ ಅವಿವಾ ಮದುವೆ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಜರುಗಿತ್ತು. ಇಂದು ಅಂಬಿ ಹುಟ್ಟೂರು ಮಂಡ್ಯದಲ್ಲಿ ಜಿಲ್ಲೆ ಗೆಜ್ಜಲಗೆರೆ ಬಳಿ ಜನರಿಗೆ ಬೀಗರ ಔತಣ ಕೂಟ ಭರ್ಜರಿಯಾಗಿ ನೆರವೇರಿದೆ.

ಮಂಡ್ಯ ಜನರು ಸಂಸದೆ ಸುಮಲತಾ ಸೊಸೆಯನ್ನ ನೋಡೋದಕ್ಕೆ ದಂಡುದಂಡಾಗಿ ಬಂದಿದ್ದರು. ಅಭಿಷೇಕ್ ಕೂಡ ಮಂಡ್ಯದ ಗಂಡಾಗಿ ವೈಟ್ ಌಂಡ್ ವೈಟ್​ನಲ್ಲಿ ನೋಡುಗರ ಕಣ್ಮನ ಸೆಳೆಯುವಂತಿತ್ತು. ಅತ್ತ ಅವಿವಾ ಕೂಡ ಸಕ್ಕರೆ ನಾಡಿನ ಸೊಸೆಯಾಗಿ ಮಂಡ್ಯಕ್ಕೆ ಕಾಲಿಟ್ಟಿದ್ದರು.

ಇನ್ನು, ಈ ಫೋಟೋದಲ್ಲಿ ನೋಡಿದ್ರಲ್ಲಾ ಎಲ್ಲಿ ನೋಡಿದರೂ ಜನವೋ ಜನ. ಮಾಹಿತಿ ಪ್ರಕಾರ ಸುಮಾರು ಬೀಗರ  ಊಟಕ್ಕೆ 40 ಸಾವಿರ ಮಂದಿ  ಅಭಿಷೇಕ್-ಅವಿವಾ ಬೀಗರ ಔತಣಕೂಟ ಕೂಟದಲ್ಲಿ ಭಾಗಿಯಾಗಿದ್ದರು. ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದಿಂದ ಅಡುಗೆ ತಯಾರಿಸಲಾಗಿತ್ತು. ಬೀಗರ ಊಟದಲ್ಲಿ ರಾಗಿ ಮುದ್ದೆ, ಬೋಟಿ ಗೊಜ್ಜು, ಮಟನ್ ಬಿರಿಯಾನಿ, ಮೊಟ್ಟೆ, ನಾಟಿಕೋಳಿ ಸಾರು, ಸಬ್ಬಕ್ಕಿ ಪಾಯಸ, ಚಿಕನ್ ಕಬಾಬ್, ಬಾಳೆ ಹಣ್ಣು, ಬೀಡ, ಮೊಟ್ಟೆ, ಐಸ್ ಕ್ರೀಮ್ ಹೀಗೆ ಬಾಡೂಟದ ಲಿಸ್ಟ್​​ ಶುರುವಾಗಿತ್ತು. ಜರ್ಮನ್ ಟೆಂಟ್ ಹಾಕಿ ಟೇಬಲ್ ಹಾಗೂ ಆಸನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಸಾವಿರಾರು ಪ್ರಮಾಣದಲ್ಲಿ ಜನರು ಒಟ್ಟಿಗೆ ಮುಗಿಬಿದಿದ್ದರು. ಜನರನ್ನು ಪೊಲೀಸರು ನಿಯಂತ್ರಿಸೋದೇ ಹರಸಾಹಸವಾಗಿತ್ತು. ಹೀಗಾಗಿ ಪೊಲೀಸ್​ ಅಧಿಕಾರಿಗಳು ಲಘು ಲಾಠಿ ಚಾರ್ಜ್ ಮಾಡಲಾಯಿತು. ಸಾವಿರಾರು ಪ್ರಮಾಣದಲ್ಲಿ ಜನರು ಸೇರಿಕೊಂಡಿದ್ದರು. ಊಟ ಬಡಿಸಲೂ ಜಾಗ ಬಿಡದೆ ಅಡುಗೆ ಮಾಡುತ್ತಿದ್ದ ಸ್ಥಳಕ್ಕೆ ನುಗ್ಗಿದ್ದಾರೆ. ಹೀಗಾಗಿ ಜನರು ಪೊಲೀಸರ ನಿಯಂತ್ರಣಕ್ಕೆ ಬಾರದೆ ಬ್ಯಾರಿಕೇಡ್ ತಳ್ಳಿ ಊಟಕ್ಕೆ ನುಗ್ಗಿರೋ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿವೆ.

ಇನ್ನು, ಬೀಗರ ಊಟಕ್ಕೆ ಸಾಕಷ್ಟು ಜನರು ಭಾಗಿಯಾಗಿದ್ದರು. ಅಭಿ ಹಾಗೂ ಅವಿವಾರಿಗೆ ಬಂದ ಜನರು ಶುಭಾಶಯ ಕೋರಲು ವ್ಯವಸ್ಥೆ ಸಹ ಮಾಡಿಕೊಳ್ಳಲಾಗಿತ್ತು. ಬೀಗರ ಊಟದ ಸಮಯದಲ್ಲಿ ಅಭಿಷೇಕ್ ಹಾಗೂ ಅವಿವಾ ಕೂಡ ಹಾಜರಿದ್ದರು. ಔತಣಕೂಟಕ್ಕೆ ಬಂದ ಎಲ್ಲರನ್ನು ನಟ ಅಭಿಷೇಕ್ ಅಂಬರೀಶ್ ಪ್ರೀತಿಯಿಂದ ಮಾತಾಡಿಸಿ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ ಸ್ವತಃ ಅಭಿಷೇಕ ಅಂಬರೀಶ್​​​ ಜನರಿಗೆ ಊಟವನ್ನು ಒಡಿಸಿದ್ದಾರೆ. ಅಭಿ ಹಾಗೂ ಅವಿವಾರನ್ನು ನೋಡಿದ ಜನರು ಫುಲ್​ ಖುಷ್​​ ಆಗಿದ್ದಾರೆ. ಜೊತೆಗೆ ಇಡೀ ಅಂಬಿ ಕುಟುಂಬ ಸದಸ್ಯರು ಔತಣಕೂಟ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಅಭಿಷೇಕ್-ಅವಿವಾ ಮದುವೆ ಬೀಗರ ಔತಣಕ್ಕೆ ಮುಗಿಬಿದ್ದ ಜನ.. ಪೊಲೀಸರಿಂದ ಲಾಠಿ ಚಾರ್ಜ್​​!

https://newsfirstlive.com/wp-content/uploads/2023/06/abhi-11.jpg

Load More