/newsfirstlive-kannada/media/post_attachments/wp-content/uploads/2024/09/Yuvraj-singh-1.jpg)
ಇತ್ತೀಚೆಗೆ ಹೈದರಾಬಾದಿನ ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್​​ ಇಂಡಿಯಾ ಬರೋಬ್ಬರಿ 133 ರನ್​​ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಬಾಂಗ್ಲಾ ವಿರುದ್ಧದ ಟಿ20 ಸರಣಿ ಕ್ಲೀನ್​ ಸ್ವೀಪ್​ ಮಾಡಿದೆ.
ಅಬ್ಬರಿಸದ ಯುವರಾಜ್​​ ಶಿಷ್ಯ
ಕೊನೆ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಭಾರತ ತಂಡದ ಪರ ಇನ್ನಿಂಗ್ಸ್​ ಓಪನ್​ ಮಾಡಿದ್ರು. ಅಭಿಷೇಕ್​​ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ಆದರೆ, ಬಾಂಗ್ಲಾದೇಶ ವಿರುದ್ಧ ಅಭಿಷೇಕ್ ಶರ್ಮಾ ಆಟ ನಡೆಯಲಿಲ್ಲ. ಕೇವಲ 4 ರನ್​ಗೆ ವಿಕೆಟ್​ ಒಪ್ಪಿಸಿದ್ರು.
/newsfirstlive-kannada/media/post_attachments/wp-content/uploads/2024/07/Abhishek-Sharma_1.jpg)
ಮಂಕಾದ ಅಭಿಷೇಕ್​​
ಎರಡು ತಿಂಗಳ ಹಿಂದೆ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿತ್ತು. ಶ್ರೀಲಂಕಾ ವಿರುದ್ಧ ಟಿ20 ಸಣಿಗೆ ಅಭಿಷೇಕ್​ ಶರ್ಮಾಗೆ ಅವಕಾಶ ನೀಡಿರಲಿಲ್ಲ. ಇದಾದ ಬಳಿಕ ನಡೆದ ಬಾಂಗ್ಲಾ ವಿರುದ್ಧ ಟಿ20 ಸರಣಿಯಲ್ಲಿ ಅವರಿಗೆ ಅವಕಾಶ ಸಿಕ್ಕಿತ್ತು. ಆದರೆ ಈ ಸರಣಿಯಲ್ಲಿ ಅಭಿಷೇಕ್ ಸಂಪೂರ್ಣ ವೈಫಲ್ಯ ಅನುಭವಿಸಿದ್ರು.
ಅಭಿಷೇಕ್​​ಗೆ ಮತ್ತೆ ಸ್ಥಾನ ಸಿಗೋದು ಡೌಟ್​
ಬಾಂಗ್ಲಾ ವಿರುದ್ಧ ಟಿ20 ಸರಣಿಯಲ್ಲಿ ಅಭಿಷೇಕ್ ಶರ್ಮಾ ಉತ್ತಮ ಪ್ರದರ್ಶನ ನೀಡಲಿಲ್ಲ. ಗ್ವಾಲಿಯರ್​ ಇಂಟರ್​​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 16 ರನ್ ಗಳಿಸಿದ್ರು. ಬಳಿಕ ದೆಹಲಿಯಲ್ಲಿ ನಡೆದ 2ನೇ ಪಂದ್ಯದಲ್ಲಿ ಕೇವಲ 15 ರನ್ ಗಳಿಸಿದ್ರು. 3ನೇ ಪಂದ್ಯದಲ್ಲಿ 4 ರನ್​ ಗಳಿಸಿದ್ದು, ಈ ಕಳಪೆ ಪ್ರದರ್ಶನದಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಅಭಿಷೇಕ್​ ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us