newsfirstkannada.com

6, 6, 6 ಬಾರಿಸಿ ಸೆಂಚುರಿ ಸಿಡಿಸಿದ ಅಭಿಷೇಕ್ ಶರ್ಮಾ.. ಯಂಗ್​ ಬ್ಯಾಟರ್​ನ ಹ್ಯಾಟ್ರಿಕ್ ಸಿಕ್ಸ್​ ಶಾಟ್ಸ್​ ಹೇಗಿದ್ವು? ವಿಡಿಯೋ

Share :

Published July 8, 2024 at 8:47am

    ಬೌಂಡರಿ, ಸಿಕ್ಸರ್​ಗಳ ಅಭಿಷೇಕ ಮಾಡಿದ ಅಭಿಷೇಕ್ ಶರ್ಮಾ

    ಜಿಂಬಾಬ್ವೆ ವಿರುದ್ಧ 2ನೇ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಗಿಲ್

    ಅಭಿಷೇಕ್, ಗಾಯಕ್ವಾಡ್ ಬ್ಯಾಟಿಂಗ್​ಗೆ ಒದ್ದಾಡಿದ ಜಿಂಬಾಬ್ವೆ

ಜಿಂಬಾಬ್ವೆ ವಿರುದ್ಧ ಮೊದಲ ಪಂದ್ಯದಲ್ಲಿ ಸೋತು ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್​​ಬ್ಯಾಕ್ ಮಾಡಿದೆ. ಅಭಿಷೇಕ್ ಶರ್ಮಾ ಹಾಗೂ ಋತುರಾಜ್ ಗಾಯಕ್ವಾಡ್​ ಅವರ ಸಿಡಿಲಬ್ಬರದ ಬ್ಯಾಟಿಂಗ್​ಗೆ ಜಿಂಬಾಬ್ವೆ ಬೌಲರ್ಸ್​ ಆಟ ನಡೆಯಲಿಲ್ಲ. ಯಂಗ್ ಪ್ಲೇಯರ್​ ಅಭೀಷೇಕ್​ ಶರ್ಮಾ ಹ್ಯಾಟ್ರಿಕ್​ ಸಿಕ್ಸ್ ಬಾರಿಸೋ ಮೂಲಕ ಸೆಂಚುರಿ ಸಿಡಿಸಿರುವುದು ದಾಖಲೆಯಾಗಿದೆ.

ಇದನ್ನೂ ಓದಿ: ದೃಶ್ಯಂ ಮೂವಿಯಂತೆ ಪ್ಲಾನ್, ಮಹಿಳೆಯ ಭಯಾನಕ ಕೊಲೆ.. ಖತರ್ನಾಕ್​ ಕಿಲಾಡಿ ತಗ್ಲಾಕಿಕೊಂಡಿದ್ದೇ ರೋಚಕ..!

ಹರಾರೆಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಓಪನರ್ ಶುಭ್​ಮನ್ ಗಿಲ್​ ಬೇಗ ಔಟ್​ ಆದರು. ಇನ್ನೊಂದೆಡೆ ಕ್ರೀಸ್​ ಕಾಯ್ದುಕೊಂಡಿದ್ದ ಅಭೀಷೇಕ್ ಶರ್ಮಾ ಎದೆಗುಂದಲಿಲ್ಲ. ಐಪಿಎಲ್​ನಲ್ಲಿ ಆಡಿದಂತೆ ತನ್ನ ಬಿರುಸಿನ ಬ್ಯಾಟಿಂಗ್​ಗೆ ಮುನ್ನೂಡಿ ಬರೆದರು. ಸ್ಟೇಡಿಯಂನ ದಿಕ್ಕು ದಿಕ್ಕುಗಳಲ್ಲೂ ಅಭೀಷೇಕ್ ಶರ್ಮಾ ಸಿಕ್ಸರ್​, ಬೌಂಡರಿಗಳ ಅಭಿಷೇಕ ಮಾಡಿದರು. ಯಂಗ್ ಬ್ಯಾಟ್ಸ್​ಮನ್​ನ ಬಲಿಷ್ಠ ಬ್ಯಾಟಿಂಗ್​ಗೆ ಜಿಂಬಾಬ್ವೆ ಬೌಲರ್ಸ್ ಒಂದೊಂದು​ ಬಾಲ್​ ಹಾಕಬೇಕೆಂದರು ತಲೆ ಕೆಡಿಸಿಕೊಂಡಿದ್ದರು. ಆ ಮಟ್ಟಿಗೆ ನಿನ್ನೆ ಅಭೀಷೇಕ್ ಘರ್ಜನೆ ಇತ್ತು.

ಇದನ್ನೂ ಓದಿ: ಪ್ರಧಾನಿ ಮೋದಿ 2 ದಿನ ರಷ್ಯಾ ಭೇಟಿ.. ಗರಿಗೆದರಿದ ನಿರೀಕ್ಷೆಗಳು; ಈ ಪ್ರವಾಸದ ಮಹತ್ವವೇನು?

ಈ ಪಂದ್ಯದಲ್ಲಿ ವಿಶೇಷತೆ ಎಂದರೆ ಅಭಿಷೇಕ್ ಶರ್ಮಾ ಸೆಂಚುರಿ ಹೊಸ್ತಿಲಲ್ಲಿ ಇದ್ದು 82 ರನ್​ ಗಳಿಸಿದ್ದರು. ಈ ವೇಳೆ ಜಿಂಬಾಬ್ವೆ ಪರ ಬೌಲಿಂಗ್ ಮಾಡಲು ಬಂದ ಮಸಕಡ್ಜಾ ಅವರ 2ನೇ ಬಾಲ್ ಅನ್ನು ಬಿಗ್​ ಸಿಕ್ಸರ್​ ಬಾರಿಸಿದರು, 3ನೇ ಬಾಲ್ ಅನ್ನು ಲೆಗ್​ಸೈಡ್​ ಲಾಂಗ್​ ಆಫ್​ನಲ್ಲಿ ಸಿಕ್ಸ್ ಹೊಡೆದರು. ಇದಾದ ಬಳಿಕ 4ನೇ ಬಾಲ್ ಅನ್ನು ಲೆಗ್​ಸೈಡ್​ ಸ್ಲಿಪ್ ಮೇಲೆ ಬಾರಿಸಿದ ಎಸೆತ ನೇರ ಬೌಂಡರಿ ಗೆರೆ ದಾಟಿ ಬಿದ್ದಿತು. ತಕ್ಷಣವೇ ಎರಡು ಕೈಗಳನ್ನ ಮೇಲೆತ್ತಿ ಅಭಿಷೇಕ್ ತಮ್ಮ ಮೊದಲ ಶತಕವನ್ನು ಸಂಭ್ರಮಿಸಿ, ಘರ್ಜಿಸಿದರು. ಹ್ಯಾಟ್ರಿಕ್ ಸಿಕ್ಸ್​ಗಳ ಮೂಲಕ ಅಭಿಷೇಕ್ ತಮ್ಮ ಮೊದಲ ಟಿ20 ಪಂದ್ಯದ ಸೆಂಚುರಿ ಗಳಿಸಿ ದಾಖಲೆ ಬರೆದರು. 47 ಬಾಲ್​ಗಳನ್ನ ಎದುರಿಸಿದ್ದ ಅಭಿಷೇಕ್ 7 ಬೌಂಡರಿ, 8 ಬಲಿಷ್ಠ ಸಿಕ್ಸರ್​ಗಳ ಸಮೇತ 100 ರನ್ ಗಳಿಸಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

6, 6, 6 ಬಾರಿಸಿ ಸೆಂಚುರಿ ಸಿಡಿಸಿದ ಅಭಿಷೇಕ್ ಶರ್ಮಾ.. ಯಂಗ್​ ಬ್ಯಾಟರ್​ನ ಹ್ಯಾಟ್ರಿಕ್ ಸಿಕ್ಸ್​ ಶಾಟ್ಸ್​ ಹೇಗಿದ್ವು? ವಿಡಿಯೋ

https://newsfirstlive.com/wp-content/uploads/2024/07/ABHISHEK_SHARMA-1.jpg

Load More