newsfirstkannada.com

6,6,6,6,6,4,4,4,4; ಕೊನೆ 13 ಬಾಲ್​ನಲ್ಲಿ 50 ರನ್​ ಚಚ್ಚಿದ ಟೀಮ್​ ಇಂಡಿಯಾದ ಅಭಿಷೇಕ್​ ಯಾರು?

Share :

Published July 7, 2024 at 6:16pm

  ಟೀಮ್​ ಇಂಡಿಯಾಗೆ ಡೆಬ್ಯೂಟ್​ ಮಾಡಿದ 2ನೇ ಪಂದ್ಯದಲ್ಲೇ ಅಬ್ಬರದ ಬ್ಯಾಟಿಂಗ್​​

  ಶತಕ ಸಿಡಿಸಿ ದಾಖಲೆ ಬರೆದ ಟೀಮ್​ ಇಂಡಿಯಾದ ಯುವ ಕ್ರಿಕೆಟರ್​​ ಅಭಿಶೇಕ್​ ಶರ್ಮಾ

  ಕೊನೆ 13 ಬಾಲ್​ನಲ್ಲಿ ಬರೋಬ್ಬರಿ 50 ರನ್​ ಚಚ್ಚಿದ ಅಭಿಷೇಕ್​ ಬ್ಯಾಟಿಂಗ್​ ಹೇಗಿತ್ತು?

ಇಂದು ಹರಾರೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2ನೇ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾದ ಯುವ ಕ್ರಿಕೆಟರ್​​ ಅಭಿಶೇಕ್​ ಶರ್ಮಾ ಶತಕ ಬಾರಿಸಿದ್ದಾರೆ. ಟೀಮ್​ ಇಂಡಿಯಾಗೆ ಡೆಬ್ಯೂಟ್​ ಮಾಡಿದ 2ನೇ ಪಂದ್ಯದಲ್ಲೇ ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ಇನ್ನಿಂಗ್ಸ್​ ಉದ್ಧಕ್ಕೂ ಜಿಂಬಾಬ್ವೆ ಕ್ರಿಕೆಟ್ ತಂಡದ ಬೌಲರ್​ಗಳ ಬೆಂಡೆತ್ತಿದ ಅಭಿಷೇಕ್​ ಶರ್ಮಾ ಸ್ಫೋಟಕ ಬ್ಯಾಟಿಂಗ್​ ಮಾಡಿದ್ರು. ತಾನು ಎದುರಿಸಿದ ಕೇವಲ 47 ಬಾಲ್​ನಲ್ಲಿ ಬರೋಬ್ಬರಿ 8 ಸಿಕ್ಸರ್​​, 7 ಫೋರ್​ ಜತೆಗೆ 100 ರನ್​ ಚಚ್ಚಿದ್ರು.

ಕೊನೆ 13 ಬಾಲ್​ನಲ್ಲಿ 50 ರನ್​​ ಚಚ್ಚಿದ ಅಭಿಷೇಕ್​​​!

ಇನ್ನು, ಮೊದಲ 33 ಬಾಲ್​​ನಲ್ಲಿ ಅರ್ಧಶತಕ ಸಿಡಿಸಿದ್ದ ಅಭಿಷೇಕ್​​​ ಬಳಿಕ ಅಬ್ಬರಿಸಿದ್ರು. ನಂತರ ಕೇವಲ 13 ಬಾಲ್​​ನಲ್ಲಿ 50 ರನ್​ ಸಿಡಿಸಿ 100 ರನ್​ ಗಳಿಸಿದ್ರು. ಕೊನೆ 13 ಬಾಲ್​​ನಲ್ಲಿ 5 ಸಿಕ್ಸರ್​​, 4 ಫೋರ್​​ ಸಿಡಿಸಿದ್ರು. ಇವರು ಕ್ರೀಸ್​ನಲ್ಲಿದ್ದಾಗ ಬೌಂಡರಿಗಳ ಸುರಿಮಳೆ ಇತ್ತು.

ಅಭಿಶೇಕ್​ ಶರ್ಮಾ ಮೂಲತಃ ಪಂಜಾಬ್​​. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು ಪ್ರತಿನಿಧಿಸುತ್ತಾರೆ. ಸನ್​ರೈಸರ್ಸ್​ ಹೈದರಾಬಾದ್​ ತಂಡದ ಪರ ಓಪನರ್​ ಆಗಿ ಬರುತ್ತಿದ್ದ ಅಭಿಶೇಕ್​​ ಅಬ್ಬರದ ಬ್ಯಾಟಿಂಗ್​ ಮಾಡುತ್ತಿದ್ರು. ಇವರನ್ನು ಜಿಂಬಾಬ್ವೆ ವಿರುದ್ಧದ 5 ಟಿ20 ಪಂದ್ಯಗಳ ಟೂರ್ನಿಗೆ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: 6,6,6,6,6,6,6,6; ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆ ಬರೆದ ಟೀಮ್​ ಇಂಡಿಯಾ ಯುವ ಬ್ಯಾಟರ್​​!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

6,6,6,6,6,4,4,4,4; ಕೊನೆ 13 ಬಾಲ್​ನಲ್ಲಿ 50 ರನ್​ ಚಚ್ಚಿದ ಟೀಮ್​ ಇಂಡಿಯಾದ ಅಭಿಷೇಕ್​ ಯಾರು?

https://newsfirstlive.com/wp-content/uploads/2024/07/Abhishek-Sharma_1.jpg

Load More