newsfirstkannada.com

33 ಬಾಲ್​ಗೆ ಅರ್ಧಶತಕ, 13 ಎಸೆತಕ್ಕೆ ಸೆಂಚುರಿ.. ಅಭಿಷೇಕ್ ಶರ್ಮಾ ಟೆರರ್​ ಬ್ಯಾಟಿಂಗ್ ಹಿಂದಿನ ಮಾಸ್ಟರ್​?

Share :

Published July 9, 2024 at 1:41pm

  ಶತಕದ ಗಡಿಯಲ್ಲಿ ಹ್ಯಾಟ್ರಿಕ್​ ಸಿಕ್ಸ್​​ ಬಾರಿಸಲು ಗುಂಡಿಗೆ ಬೇಕು

  ಪಂಜಾಬ್ ಪುತ್ತರ್​ ಆರ್ಭಟದಿಂದ ಜಿಂಬಾಬ್ವೆ ಫುಲ್ ಸೈಲೆಂಟ್

  ಅಭಿಷೇಕ್ ಶರ್ಮಾ ಬ್ಯಾಟಿಂಗ್​​ ಹಿಂದೆ ಇರೋ ಗುರು ಇವರು.!

ಆಡಿದ್ದು 2ನೇ ಟಿ20 ಇಂಟರ್​ನ್ಯಾಷನಲ್​ ಪಂದ್ಯ. ಆದ್ರೆ, ಆಟ ಮಾತ್ರ ಭಯಂಕರ. ಹರಾರೆ ಸ್ಟೇಡಿಯಂನ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡಿಸಿದ ಅಭಿಷೇಕ್​ ಶರ್ಮಾ ಸದ್ಯದ ಸೆನ್ಸೇಷನ್​. ಆಟ, ಆ್ಯಟಿಡ್ಯೂಡ್​ ಎರಡರಲ್ಲೂ ಗಮನ ಸೆಳೆದಿರೋ ಈತನ ಆಟ ನೋಡಿದಾಗ ಯುವರಾಜ್​ ಸಿಂಗ್​ ನೆನಪಾಗದೇ ಇರಲ್ಲ. ಥೇಟ್​ ಯುವಿಯಂತೆ, ಅದೇ ಆಟ​, ಅದೇ ಸ್ಟ್ರೈಲ್​. ಅಸಲಿಗೆ ಸಿಕ್ಸರ್​ ಕಿಂಗ್​ಗೂ​ ಈ ಅಭಿಷೇಕ್​ಗೂ ವಿಶೇಷವಾದ ನಂಟಿದೆ.

ಇದನ್ನೂ ಓದಿ: RCB ಕೋಚ್ ಆಗ್ತಾರಾ ರಾಹುಲ್ ದ್ರಾವಿಡ್..? ಚಾಂಪಿಯನ್ ಕೋಚ್​ಗೆ​ ಡಿಮ್ಯಾಂಡಪ್ಪೋ ಡಿಮ್ಯಾಂಡ್!

ಫೇಸ್​ ಮಾಡಿದ ಫಸ್ಟ್​ ಬಾಲ್​​ ಸಿಕ್ಸರ್​.. ಫಿಫ್ಟಿ ರೀಚ್​ ಆಗಿದ್ದು ಸಿಕ್ಸರ್​​. ಚೊಚ್ಚಲ ಸೆಂಚುರಿ ಸಿಡಿಸಿದ್ದು, ಹ್ಯಾಟ್ರಿಕ್​​ ಸಿಕ್ಸರ್​. ಇದು, ಡೆಬ್ಯೂ ಮಾಡಿದ ಮೊದಲ ಪಂದ್ಯದಲ್ಲಿ ಡಕೌಟ್​ ಆಗಿದ್ದ, ಅಭಿಷೇಕ್ ಶರ್ಮಾ​ 2 ಪಂದ್ಯದಲ್ಲಿ ತಾಳಿದ ರೌದ್ರಾವತಾರದ ಹೈಲೆಟ್ಸ್​.! ಎದುರಾಳಿ ಜಿಂಬಾಬ್ವೆ ತಂಡದ ಬೌಲರ್ಸ್ ಇಂತಾ ಏಟುಗಳನ್ನ ಕನಸಲ್ಲೂ ನಿರೀಕ್ಷೆ ಮಾಡಿರಲಿಲ್ಲವೇನೋ.?

ಇದನ್ನೂ ಓದಿ: ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ.. ಕಿರಾತಕ ಯಾರನ್ನ ಟಾರ್ಗೆಟ್ ಮಾಡ್ತಿದ್ದ?

ಸಿಕ್ಸ್​, ಫೋರ್​ ಸುರಿಮಳೆ, ಟೆರರ್​ ಬ್ಯಾಟಿಂಗ್.!

ಹರಾರೆ ಸ್ಪೋರ್ಟ್ಸ್​ ಕ್ಲಬ್​ನಲ್ಲಿ ನಡೆದ 2ನೇ T20ಯಲ್ಲಿ ಸಿಕ್ಸರ್​​ ಹೊಡೆದು ಅಕೌಂಟ್​ ಓಪನ್​ ಮಾಡಿದ ಅಭಿಷೇಕ್​ ಶರ್ಮಾ, ಬಳಿಕ ಎಚ್ಚರಿಕೆಯ ಆಟಕ್ಕೆ ಆದ್ಯತೆ ನೀಡಿದ್ರು. ಗುಡ್​ ಬಾಲ್​ಗಳ ರೆಸ್ಪೆಕ್ಟ್​ ಮಾಡ್ತಾ, ಬ್ಯಾಡ್​ ಬಾಲ್​ಗಳನ್ನ ಥಳಿಸ್ತಾ 33 ಎಸೆತಕ್ಕೆ ಹಾಫ್​ ಸೆಂಚುರಿ ಪೂರೈಸಿದ್ರು. ಆಮೇಲೆ ಅದೇನಾಯ್ತೋ ಗೊತ್ತಿಲ್ಲ. ಬೌಂಡರಿ, ಸಿಕ್ಸರ್​ಗಳಲ್ಲೇ ರನ್ ​ಡೀಲ್​ ಮಾಡಿದ್ರು. ಪಂಜಾಬ್ ಪುತ್ತರ್​ ಆರ್ಭಟಕ್ಕೆ ಜಿಂಬಾಬ್ವೆ ಬೌಲರ್ಸ್​ ಹೈರಾಣಾದ್ರು. ಜಸ್ಟ್​ 13 ಎಸೆತ.. ಹದಿಮೂರೇ ಎಸೆತಕ್ಕೆ ಸೆಂಚುರಿ ಕಂಪ್ಲೀಟ್​ ಮಾಡಿದ್ರು.

ಫಿಯರ್​ಲೆಸ್​​ ಆ್ಯಟಿಟ್ಯೂಡ್​​, ಬ್ರೇವ್​ ಕ್ಯಾರೆಕ್ಟರ್​.!

ಜಿಂಬಾಬ್ವೆ ಹರಾರೆಯಲ್ಲಿ ಅಭಿಷೇಕ್​ ಶರ್ಮಾ ಆಡಿದ ಆಟ ಸದ್ಯ ಕ್ರಿಕೆಟ್​ ಲೋಕದಲ್ಲಿ ಸೆನ್ಸೇಷನ್​ ಹುಟ್ಟುಹಾಕಿದೆ. ಅಬ್ಬರದ ಆಟಕ್ಕೆ ವಿಂಡೀಸ್​ ದಿಗ್ಗಜ ಬ್ರಿಯನ್​ ಲಾರಾ ಸೇರಿದಂತೆ ದಿಗ್ಗಜರೇ ಮಾರು ಹೋಗಿದ್ದಾರೆ. ಫಸ್ಟ್​ ಮ್ಯಾಚ್​ನಲ್ಲಿ ಡಕೌಟ್​ ಆದ್ರೂ, 2ನೇ ಪಂದ್ಯದಲ್ಲಿ ಮೊದಲ ಎಸೆತವನ್ನೇ ಸಿಕ್ಸರ್​ಗಟ್ಟೋಕೆ​ ಧಮ್​ ಬೇಕು. ಇನ್ನು, ಶತಕದ ಗಡಿಯಲ್ಲಿ ಹ್ಯಾಟ್ರಿಕ್​ ಸಿಕ್ಸರ್​ ಸಿಡಿಸೋಕೆ ಎಂಟೆದೆ ಗುಂಡಿಗೆನೇ ಬೇಕು ಬಿಡಿ. ಈ ಫಿಯರ್​​ಲೆಸ್​ ಆ್ಯಟಿಟ್ಯೂಡ್​, ಬ್ರೇವ್​ ಕ್ಯಾರೆಕ್ಟರ್​ಗೆ ಎಲ್ರೂ ಫಿದಾ ಆಗಿದ್ದಾರೆ. ಇದ್ರ ಹಿಂದೆ ಒಬ್ಬ ಗುರುವಿನ ಅಪಾರ ಶ್ರಮವಿದೆ.

ಸಿಕ್ಸ್​​ ಹಿಟ್ಟಿಂಗ್​ ಹಿಂದೆ ಸಿಕ್ಸರ್​ ಕಿಂಗ್​ ಶ್ರಮ.!

ತನ್ನ ರಣಾರ್ಭಟ ಬ್ಯಾಟಿಂಗ್​ನಿಂದ ಗಮನ ಸೆಳೆದಿರೋ ಈ ಯಂಗ್​ ಟೈಗರ್​​ ಅಭಿಷೇಕ್​, ಬೆಳೆದಿದ್ದು ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್​ ಗರಡಿಯಲ್ಲಿ. ಟೀಮ್​ ಇಂಡಿಯಾದ ಕಂಡ ಬೆಸ್ಟ್​ ಆಲ್​​ರೌಂಡರ್​, ವೈಟ್ ​ಬಾಲ್​ ಫಾರ್ಮೆಟ್​​ನ ರಿಯಲ್​ ಮ್ಯಾಚ್​ ವಿನ್ನರ್ ಯುವರಾಜ್​ ಸಿಂಗ್​, ತಮ್ಮಂತೇ ಮೋಡಿ ಮಾಡೋ ಶಿಷ್ಯನನ್ನ ತಯಾರಿ ಮಾಡಿದ್ದಾರೆ. ಸ್ವಲ್ಪಾನೂ ಚೇಂಜ್​ ಇಲ್ಲ. ಆಟ, ಆ್ಯಟಿಟ್ಯೂಡ್​ ಎರಡೂ ಥೇಟ್​ ಯುವಿಯಂತೆ.!

ಯುವರಾಜನ ಗರಡಿಯ ಪ್ರತಿಭೆ ಅಭಿಷೇಕ್.!

ಅಭಿಷೇಕ್​​ ಕ್ರಿಕೆಟ್​ ಅಂಗಳಕ್ಕೆ ಕಾಲಿಡೋ ಮೊದಲು ಫಾಲೋ ಮಾಡಿದ್ದು, ಆ ಬಳಿಕ ಕ್ರಿಕೆಟ್​ ಕಣಕ್ಕೆ ಧುಮುಕಿದ ಮೇಲೆ ಗುರುವಾಗಿ ಸಿಕ್ಕಿದ್ದು ಎರಡೂ ಯುವರಾಜ್​ ಸಿಂಗ್​.! ಯುವರಾಜ್​ ಸಿಂಗ್​ ಗರಡಿಯಲ್ಲಿ ಪಾಠ ಕಲಿತು, ಬೆಳೆದು ಬಂದಿರುವ ಹುಡುಗ ಅಭಿಷೇಕ್​ ಶರ್ಮಾ. ಆರಂಭದಿಂದ ತಿದ್ದಿ, ತೀಡಿ, ಕ್ರಿಕೆಟ್​ ಪಟ್ಟುಗಳನ್ನ ಕಲಿಸಿ ಗುರು ಯುವರಾಜ್​ ಸಿಂಗ್, ಅಭಿಶೇಕ್​ ಶರ್ಮಾನ ಬೆಳೆಸಿದ್ದಾರೆ. ಯುವರಾಜ್​ ಕಲಿಸಿದ ಪಾಠವನ್ನ ಎಷ್ಟು ಶ್ರದ್ಧೆ, ಶಿಸ್ತಿನಿಂದ ಅಭಿಷೇಕ್​ ಕಲಿತಿದ್ದಾರೆ ಅನ್ನೋದನ್ನ ಆಡ್ತಿರೋ ಆಟವೇ ಹೇಳ್ತಿದೆ.

ಚೊಚ್ಚಲ ಶತಕದ ಬೆನ್ನಲ್ಲೇ ಗುರುವಿಗೆ ನಮನ.!

ಹರಾರೆಯಲ್ಲಿ ಸೆಂಚುರಿ ಸಿಡಿಸಿದ ಬೆನ್ನಲ್ಲೇ ಫೋನ್​ ತೆಗೆದುಕೊಂಡ ಅಭಿಷೇಕ್​ ಶರ್ಮಾ, ಯುವರಾಜ್​ ಸಿಂಗ್​ಗೆ ವಿಡಿಯೋ ಕಾಲ್​ ಮಾಡಿದ್ರು. ಇದೇ ಕಾಲ್​ನಲ್ಲಿ ಯುವರಾಜ್​​ಗೆ ಧನ್ಯವಾದ ತಿಳಿಸಿದ್ರು. ಯುವಿ ಖುಷಿಯಾಗಿದ್ದು ತಿಳಿಯುತ್ತಿದ್ದಂತೆ, ಮನದಾಳದ ಮಾತುಗಳನ್ನ ಹೇಳಿಕೊಂಡ್ರು.

ಇದನ್ನೂ ಓದಿ: ಜೀವಂತ ಹಾವನ್ನೇ ತಿಂದ ಡಕಾಯಿತ.. ಸುಲಿಗೆ, ಲೂಟಿ ಮಾಡ್ತಿದ್ದವನಿಂದ ಭಯಾನಕ ಕೃತ್ಯ

ಯುವರಾಜ್​ ಸಿಂಗ್​ ಜೊತೆಗೆ ನಾನು ನಿನ್ನೆ ಮಾತನಾಡಿದ್ದೇ. ಅವ್ರು ಖುಷಿಯಾಗಿದ್ರು. ಯಾಕೆ ಅಂತ ಗೊತ್ತಿಲ್ಲ. ನಾನು ಸೊನ್ನೆಗೆ ಔಟಾಗಿದ್ದೆ. ಅದು ಆರಂಭವಾಗಿತ್ತು. ಅವ್ರು ಇವತ್ತು ಹೆಮ್ಮೆ ಪಟ್ಟಿರ್ತಾರೆ. ನಮ್ಮ ಕುಟುಂಬದಂತೆ. ನಾನು ಅಷ್ಟೇ. ಇದೆಲ್ಲವೂ ಅವರಿಂದಲೇ. ಅವರು ನನ್ನನ್ನ ಬೆಳೆಸಲು ಕಠಿಣ ಪರಿಶ್ರಮ ಪಟ್ಟಿದ್ದಾರೆ. ಕ್ರಿಕೆಟ್​ ಮಾತ್ರವಲ್ಲ. ಆಫ್​ ದ ಫೀಲ್ಡ್​ನಲ್ಲೂ ಕೂಡ ಅವರ ಶ್ರಮವಿದೆ. ಇದೊಂದು ದೊಡ್ಡ ಘಳಿಗೆ.

ಅಭಿಷೇಕ್​ ಶರ್ಮಾ, ಕ್ರಿಕೆಟಿಗ

ಇದನ್ನೂ ಓದಿ: ದರ್ಶನ್ ಜೈಲು ಸೇರಿದಕ್ಕೆ ನೋವಲ್ಲಿರೋ ಡೈನಾಮಿಕ್ ಫ್ಯಾಮಿಲಿ.. ದಾಸನ ಪರ ಬ್ಯಾಟ್​ ಬೀಸ್ತಿರೋ ಸ್ಯಾಂಡಲ್​ವುಡ್

ಐಪಿಎಲ್​ ಟೂರ್ನಿಯಲ್ಲಿ ಅಭಿಷೇಕ್​ ಶರ್ಮಾ ಆರ್ಭಟಿಸಿದಾಗ ಎಲ್ಲರೂ ಅಚ್ಚರಿ ಪಟ್ಟಿದ್ರು. ಮೆಚ್ಚಿ ಕೊಂಡಾಡಿದ್ರು ಕೂಡ. ಆದ್ರೂ, ಟೀಮ್​ ಇಂಡಿಯಾಗೆ ಸೆಲೆಕ್ಟ್​ ಆದಾಗ ಇದೇ ಆಟವಾಡ್ತಾರಾ ಅನ್ನೋ ಅನುಮಾನ ಇದ್ದಿದ್ದು ನಿಜ. ಆ ಅನುಮಾನಕ್ಕೂ ಇದೀಗ ಅಭಿಷೇಕ್​ ತನ್ನ ಬ್ಯಾಟಿಂಗ್​ನಿಂದಲೇ ತೆರೆ ಎಳೆದಿದ್ದಾರೆ. ಗುರುವಿನ ಹೆಸರು ಉಳಿಸಿದ್ದಲ್ಲದೇ, ಭವಿಷ್ಯದ ಭರವಸೆಯನ್ನ ಹುಟ್ಟು ಹಾಕಿದ್ದಾರೆ. ಮುಂದೆಯು ಇದೇ ಆಟವನ್ನ ಅಭಿಷೇಕ್ ಮುಂದುವರೆಸಲಿ ಅನ್ನೋದು ಎಲ್ಲರ ಅಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

33 ಬಾಲ್​ಗೆ ಅರ್ಧಶತಕ, 13 ಎಸೆತಕ್ಕೆ ಸೆಂಚುರಿ.. ಅಭಿಷೇಕ್ ಶರ್ಮಾ ಟೆರರ್​ ಬ್ಯಾಟಿಂಗ್ ಹಿಂದಿನ ಮಾಸ್ಟರ್​?

https://newsfirstlive.com/wp-content/uploads/2024/07/ABHISHEK_SHARMA-2.jpg

Load More