newsfirstkannada.com

VIDEO: ಅಕೌಂಟ್‌ನಲ್ಲಿ ಬ್ಯಾಲೆನ್ಸ್ ಇಲ್ಲದಿದ್ರೂ ಹಣ ಡ್ರಾ ಮಾಡೋ ಅವಕಾಶ; ATMಗೆ ಮುಗಿಬಿದ್ದ ಗ್ರಾಹಕರು

Share :

16-08-2023

    ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ 1000 ಯೂರೋ ಡ್ರಾ

    ಸಿಕ್ಕಿದ್ದೇ ಚಾನ್ಸ್ ಅಂತಾ ಎಟಿಎಂ ಮುಂದೆ ಜನ ಉದ್ದುದ್ದ ಕ್ಯೂ

    ಝಣ, ಝಣ ಕಾಂಚಾಣ ಎಣಿಸಿಕೊಂಡವರಿಗೆ ಬ್ಯಾಂಕ್ ಶಾಕ್‌!

ಡಬ್ಲಿನ್: ಬ್ಯಾಂಕ್‌ ಖಾತೆಯಲ್ಲಿ ದುಡ್ಡಿದ್ರೂ ಕೆಲವೊಮ್ಮೆ ಎಟಿಎಂನಲ್ಲಿ ಹಣ ಡ್ರಾ ಮಾಡೋದು ಕಷ್ಟ. ಇಂತಹ ಅನುಭವ ಬಹಳಷ್ಟು ಬಾರಿ ಅನೇಕರಿಗೆ ಆಗಿರುತ್ತೆ. ಅದೇ ಅಕೌಂಟ್‌ನಲ್ಲಿ ಬ್ಯಾಲೆನ್ಸ್ ಇಲ್ಲದಿದ್ರೂ ಹಣ ಡ್ರಾ ಮಾಡೋ ಅವಕಾಶ ಸಿಕ್ರೆ ಹೇಗಿರುತ್ತೆ. ಸುಮ್ನೆ ಯೋಚ್ನೆ ಮಾಡಿದ್ರೂ ಖುಷಿ ಆಗುತ್ತೆ. ಯಾರಿಗುಂಟು ಯಾರಿಗಿಲ್ಲ ಈ ಚಾನ್ಸ್‌ ಅಂತಾ ಝಣ, ಝಣ ಕಾಂಚಾಣ ಎಣಿಸಿಕೊಳ್ಳೋಕೆ ಎಲ್ಲರೂ ಮುಗಿ ಬೀಳ್ತಾರೆ.

ಐರ್ಲೆಂಡ್‌ನ ರಾಜಧಾನಿ ಡಬ್ಲಿನ್‌ನ ಹಲವು ಎಟಿಎಂಗಳಲ್ಲಿ ಈ ಬಂಪರ್ ಆಫರ್ ಸಿಕ್ಕಿದೆ. ಸಿಕ್ಕಿದ್ದೇ ಚಾನ್ಸ್ ಅಂತಾ ಎಟಿಎಂ ಮುಂದೆ ಜನ ಉದ್ದುದ್ದ ಕ್ಯೂ ನಿಂತಿದ್ದಾರೆ. ತಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ 1000 ಯೂರೋ ಡ್ರಾ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ವಿಷಯ ಗಾಳಿ ಸುದ್ದಿಯಾಗಿದ್ದು, ಎಷ್ಟೋ ಮಂದಿ 1 ಸಾವಿರ ಯೂರೋ ಡ್ರಾ ಮಾಡಲು ಎಟಿಎಂ ಮುಂದೆ ಕ್ಯೂ ನಿಂತಿದ್ದಾರೆ. ಡಬ್ಲಿನ್‌ನ ಹಲವು ಎಟಿಎಂಗಳಲ್ಲಿ ಗ್ರಾಹಕರು ಬಿಟ್ಟಿ ಹಣ ಡ್ರಾ ಮಾಡಲು ಕ್ಯೂ ನಿಂತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಂದಹಾಗೆ ಬ್ಯಾಂಕ್ ಆಫ್ ಐರ್ಲೆಂಡ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿರೋದ್ರಿಂದ ಈ ಯಡವಟ್ಟು ಆಗಿದೆ. ಸಿಕ್ಕಿದ್ದೆ ಚಾನ್ಸ್ ಅಂತಾ ಜನರು ಎಟಿಎಂ ಮುಂದೆ ಕ್ಯೂ ನಿಂತು ಅಕೌಂಟ್‌ನಲ್ಲಿ ಹಣ ಇಲ್ಲದಿದ್ದರೂ 1 ಸಾವಿರ ಯೂರೋ ಡ್ರಾ ಮಾಡಿದ್ದಾರೆ. 1 ಸಾವಿರ ಯೂರೋ ಅಂದ್ರೆ 90 ಸಾವಿರ ರೂಪಾಯಿ ಆಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಜನ ಎಟಿಎಂ ಕೇಂದ್ರದ ಮುಂದೆ ಜಮಾಯಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ತಾಂತ್ರಿಕ ದೋಷದಿಂದ ಈ ಸಮಸ್ಯೆ ಎದುರಾಗಿದ್ದು ಬ್ಯಾಂಕ್‌ಗಳು ಎಚ್ಚೆತ್ತುಕೊಂಡಿವೆ. ಯಾರ್ ಯಾರು ಹಣ ಡ್ರಾ ಮಾಡಿದ್ದಾರೋ ಅವರು ವಾಪಸ್ ಪಾವತಿ ಮಾಡಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಅಕೌಂಟ್‌ನಲ್ಲಿ ಬ್ಯಾಲೆನ್ಸ್ ಇಲ್ಲದಿದ್ರೂ ಹಣ ಡ್ರಾ ಮಾಡೋ ಅವಕಾಶ; ATMಗೆ ಮುಗಿಬಿದ್ದ ಗ್ರಾಹಕರು

https://newsfirstlive.com/wp-content/uploads/2023/08/Ireland-ATM-Money.jpg

Load More