newsfirstkannada.com

ಕ್ರಿಕೆಟ್ ಬದುಕಿನ ಆತಂಕದ ದಿನಗಳನ್ನು ಬಿಚ್ಚಿಟ್ಟ ಮಿಸ್ಟರ್ 360; ABD ಅಭಿಮಾನಿಗಳಿಗೆ ಇದು ಶಾಕಿಂಗ್ ವಿಚಾರ..!

Share :

21-07-2023

    ವಿಶ್ವವನ್ನೇ ರಂಜಿಸಿದ ಸೂಪರ್ ಆಟಗಾರ ಎಬಿಡಿ ವಿಲಿಯರ್ಸ್

    ಮರುದಿನ ವೆಸ್ಟ್​ ಇಂಡೀಸ್ ವಿರುದ್ಧ ಸ್ಫೋಟಕ 162 ರನ್..!

    ಅಗತ್ಯ ಇಲ್ಲದಾಗ ಮಾತ್ರೆ ತೆಗೆದುಕೊಳ್ಳುವಂತೆ ಪ್ರೇರೆಪಿಸುತ್ತೆ

ಇದು ವಿಶ್ವವನ್ನೇ ರಂಜಿಸಿದ ಸೂಪರ್ ಆಟಗಾರನೊಬ್ಬನ ಮಾನಸಿಕ ತೊಳಲಾಟದ ಕಥೆ. ಅನ್ಆರ್ಥಡಕ್ಸ್ ಶಾಟ್​ನಿಂದ ಜಗತ್ತನ್ನೇ ಮಂತ್ರ ಮುಗ್ದವನ್ನಾಗಿಸಿದ. ಆದರೆ ಆಡಿದಷ್ಟು ದಿನ ವೀರನಾಗಿ ಮೆರೆದಾಡಿದ ಈ ವಾರಿಯರ್ಗೆ ಕೊನೆಗೆ ಆ ಒಂದನ್ನ ಗೆಲ್ಲಲು ಸಾಧ್ಯವಾಗಿಲ್ಲ. ಅಷ್ಟಕ್ಕೂ ಯಾರೀತ? ಈ ಸೂಪರ್ ಸ್ಟಾರ್ ಗೆದ್ದು, ಸೋತ್ತಿದ್ದಾದ್ರು ಯಾಕಾಗಿ ?

ABD ಪೂರ್ಣ ಹೆಸರು ಅಬ್ರಹಾಂ ಬೆಂಜಮಿನ್ ಡಿ ವಿಲಿಯರ್ಸ್. ಕ್ರಿಕೆಟ್ ಜಗತ್ತು ಮೋಸ್ಟ್ ಡೇಂಜರಸ್ ಕ್ರಿಕೆಟರ್​. ಅನ್ಆರ್ಥಡಕ್ಸ್ ಶಾಟ್ಸ್ ಬಾರಿಸೋದರಲ್ಲಿ ನಿಸ್ಸೀಮ. ಆನ್ ಫೀಲ್ಡ್​ನಲ್ಲಿ ಈತನ ಬ್ಯಾಟ್​ನಿಂದ ಸಿಡಿಯುವ ಒಂದೊಂದು ಶಾಟ್ಸ್ ಅದ್ಭುತ. ಇದಕ್ಕೆಂದೆ ಎಬಿಡಿಗೆ ಹ್ಯೂಜ್ ಫ್ಯಾನ್ ಸಮೂಹವೇ ಹುಟ್ಟಿಕೊಂಡಿತ್ತು. ಮಿಸ್ಟಿರ್ 360 ಮ್ಯಾನ್ ಕ್ರೀಸ್​ನಿಂದ ಎದುರಾಳಿ ಪಡೆ ಬೆಚ್ಚಿ ಬೀಳ್ತಿತ್ತು. ಬಹುಶಃ ಚೆಂಡುದಾಂಡಿನಾಟದಲ್ಲಿ ಎಬಿಡಿಯಂತ ಮತ್ತೊಬ್ಬ ನಟೋರಿಯಸ್ ಬ್ಯಾಟರ್​ ಹುಟ್ಟೋದು ಕಷ್ಟ.

ಇಂತಹ ವಿಧ್ವಂಸಕ ಬ್ಯಾಟ್ಸ್​​ಮನ್ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿ 2 ವರ್ಷ ಕಳೆದಿದೆ. ಸ್ಫೋಟಕ ಆಟದಿಂದ ಭರಪೂರ ಮನರಂಜನೆ ಉಣಬಡಿಸ್ತಿದ್ದ ಎಬಿಡಿ ಸದ್ಯ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಮಿಸ್ಟರ್ 360 ಡಿಗ್ರಿಯ ಶಾಕಿಂಗ್ ಸ್ಟೇಟ್​ಮೆಂಟ್ ಕ್ರಿಕೆಟ್ ಲೋಕವನ್ನೇ ಅಚ್ಚರಿ ತಳ್ಳಿದ್ದಾರೆ.

ನಿದ್ದೆ, ಒತ್ತಡ ನಿವಾರಿಸಲು ಇಂಜೆಕ್ಷನ್, ಮಾತ್ರೆ ಸೇವನೆ..!

ಹೌದು, ಒಂದೂವರೆ ದಶಕಗಳ ಕಾಲ ಸೆನ್ಷೆಷನ್ ಸೃಷ್ಟಿಸಿದ್ದ ಎಬಿಡಿ ಕ್ರಿಕೆಟ್ ಬದುಕು ನೋಡುಗರಿಗೆ ವರ್ಣರಂಜಿತ. ಇವರೊಬ್ಬ ಸ್ಪೂರ್ತಿದಾಯಕ ಕ್ರಿಕೆಟರ್ ಅನ್ನೋದು ನಿಜ. ಆದ್ರೆ ನಿಮ್ಮನ್ನ ಇಷ್ಟೆಲ್ಲ ರಂಜಿಸಿದ ಈ ಡೆಡ್ಲಿ ಬ್ಯಾಟರ್ ಮಾನಸಿಕ ಖಿನ್ನತೆಯಿಂದ ಬಳಲಿದ್ರು ಅನ್ನೋ ಸತ್ಯ ನಿಮಗೇನಾದ್ರು ಗೊತ್ತಾ..?

‘ನಿದ್ದೆ ಬರಲು ನಿದ್ದೆ ಮಾತ್ರೆ ನುಂಗಿದ್ದೆ’

ಒತ್ತಡ ನಿವಾರಣೆ ಮತ್ತು ರಾತ್ರಿ ವೇಳೆ ನಿದ್ದೆಗೆ ಜಾರಲು ನಿದ್ದೆ ಮಾತ್ರೆಗಳನ್ನ ಸೇವಿಸುತ್ತಿದ್ದೆ. ಏಕೆಂದರೆ ಮಾತ್ರೆಗಳು ನಿದ್ರೆ ಮಾತ್ರವಲ್ಲದೆ ದೇಹಕ್ಕೂ ವಿಶ್ರಾಂತಿ ನೀಡುತ್ತದೆ. ಸ್ವಲ್ಪ ಆತಂಕವನ್ನು ದೂರ ಮಾಡುತ್ತದೆ. ಇದು ವ್ಯಸನಕಾರಿ ಆಗಿರಬಹುದು. ಕೆಲವೊಮ್ಮೆ ಅಗತ್ಯವಿಲ್ಲದಿದ್ದಾಗ ತೆಗೆದುಕೊಳ್ಳುವಂತೆ ಪ್ರೇರೆಪಿಸುತ್ತದೆ. ಆದರೆ ಎಲ್ಲ ಸಮಯದಲ್ಲಿ ಮಾತ್ರೆ ತೆಗೆದುಕೊಳ್ಳಲು ಆಗುವುದಿಲ್ಲ.

ಎಬಿಡಿ, ಆರ್​ಸಿಬಿ ಮಾಜಿ ಕ್ರಿಕೆಟಿಗ

ಬರೀ 3 ಗಂಟೆ ನಿದ್ದೆ, ಹೊಟ್ಟೆ ನೋವಿಗಾಗಿ ಇಂಜೆಕ್ಷನ್

ಎಬಿಡಿಯ ಈ ಟಾಪ್ ಕ್ಲಾಸ್ ಇನ್ನಿಂಗ್ಸ್ ಅನ್ನ ಯಾರೊಬ್ಬರು ತಾನೇ ಮರೆಯೋಕೆ ಸಾಧ್ಯಹೇಳಿ. ಅದು 2015ರ ಒನ್​ ಡೇ ವಿಶ್ವಕಪ್. ವಿಂಡೀಸ್ ವಿರುದ್ಧ ಪಂದ್ಯದಲ್ಲಿ ರೌದ್ರಾವತಾರ ತಾಳಿದ್ದ ಎಬಿಡಿ 66 ಎಸೆತಗಳಲ್ಲಿ ಸ್ಫೋಟಕ 162 ರನ್ ಸಿಡಿಸಿ ನ್ಯೂಸ್ ಪೇಪರ್​ಗಳಲ್ಲಿ ಹೆಡ್ಲೈನ್ ಆಗಿದ್ದರು. ಆದರೆ ಈ ಎಪಿಕ್ ಇನ್ನಿಂಗ್ಸ್ ಮೂಡಿ ಬಂದ ಹಿಂದಿನ ರಾತ್ರಿ ಎಬಿಡಿ ತೀರ ಹೊಟ್ಟೆನೋವಿನಿಂದ ಬಳಲಿದ್ರು. ಬರೀ ಗಂಟೆ 3 ಗಂಟೆ ನಿದ್ದೆ ಮಾಡಿದ್ರೂ, ಸ್ಫೋಟಕ ಆಟವಾಡಿ ಅಭಿಮಾನಿಗಳನ್ನ ಇನ್ನಿಲ್ಲದಂತೆ ರಂಜಿಸಿದ್ರು.

ಇದನ್ನು ಓದಿ: ಆಹ್ಹಾ.. ಚಗಳಿ ಗೊಜ್ಜು..! ಮಾವಿನ ಮರವೇರಿ.. ಕೆಂಪಿರುವೆ ತಂದು.. ಚೆಟ್ನಿ ಮಾಡಿ ರೊಟ್ಟಿ ಜೊತೆ ಸವಿದ ಡ್ಯಾನ್ಸರ್ ಕಿಶನ್..! ವಿಡಿಯೋ

‘ಹೊಟೆನೋವಿನಿಂದ ಇಂಜೆಕ್ಷನ್ ತೆಗೆದುಕೊಂಡಿದ್ದೆ’

2015ರ ವಿಶ್ವಕಪ್‌ ಪಂದ್ಯ ನನಗೆ ಸ್ಪಷ್ಟವಾಗಿ ನೆನಪಿದೆ. ಅದು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಹಿಂದಿನ ರಾತ್ರಿ. ಆ ಪಂದ್ಯದಲ್ಲಿ ನಾನು ಅಷ್ಟು ರನ್‌ ಗಳಿಸಿರುವುದು ನನಗೆ ತುಂಬಾ ಆಶ್ಚರ್ಯಕರವಾಗಿತ್ತು. ಯಾಕಂದ್ರೆ ಹಿಂದಿನ ರಾತ್ರಿ ಕೇವಲ 2ರಿಂದ 3 ಗಂಟೆಗಳ ಕಾಲ ಮಾತ್ರ ಮಲಗಿದ್ದೆ. ನನಗೆ ಹೊಟ್ಟೆಯಲ್ಲಿ ಸೆಳೆತವಿತ್ತು. ಮಧ್ಯಾಹ್ನ 3 ಗಂಟೆಗೆ ನಾನು ವೈದ್ಯರನ್ನು ಭೇಟಿಯಾಗಿದ್ದೆ. ಇಂಜೆಕ್ಷನ್ ತೆಗೆದುಕೊಂಡರೂ ನನಗೆ ನಿದ್ರೆ ಬರಲಿಲ್ಲ.

ಎಬಿಡಿ, ಮಾಜಿ ಕ್ರಿಕೆಟಿಗ

ಎಬಿಡಿಯಂತ ದಿಗ್ಗಜ ಆಟಗಾರ ಕೂಡ ಮಾನಸಿಕ ಯಾತನೆ ಅನುಭವಿಸಿದ್ದಾರೆ. ಮೈದಾನಕ್ಕಿಳಿದು ಆಡಲು ದೇಹ ಮಾತ್ರ ಫಿಟ್ ಇದ್ದರೆ ಸಾಲದು ಮಾನಸಿಕ ಆರೋಗ್ಯ ಕೂಡ ಮುಖ್ಯ ಅನ್ನೋದನ್ನ ಕ್ರಿಕೆಟಿಗರು ತಿಳಿಯಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕ್ರಿಕೆಟ್ ಬದುಕಿನ ಆತಂಕದ ದಿನಗಳನ್ನು ಬಿಚ್ಚಿಟ್ಟ ಮಿಸ್ಟರ್ 360; ABD ಅಭಿಮಾನಿಗಳಿಗೆ ಇದು ಶಾಕಿಂಗ್ ವಿಚಾರ..!

https://newsfirstlive.com/wp-content/uploads/2023/07/ABD_RCB.jpg

Load More