newsfirstkannada.com

ಡ್ರೈವರ್​ಗಳಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸಚಿವ ನಿತಿನ್ ಗಡ್ಕರಿ; ಇನ್ಮುಂದೆ ಟ್ರಕ್​ಗಳಲ್ಲಿ ಇದು ಇರಲೇಬೇಕು

Share :

20-06-2023

    11-12 ಗಂಟೆವರೆಗೆ ಕೆಲಸ ಮಾಡುವ ಡ್ರೈವರ್​ಗಳಿಗೆ ಇದು ಅನುಕೂಲ

    2025 ರಿಂದ ದೇಶದ ಎಲ್ಲ ಟ್ರಕ್​ಗಳಲ್ಲಿ AC ಕ್ಯಾಬಿನ್ ಇರುವುದು ಪಕ್ಕಾ

    ವೋಲ್ವೋ, ಸ್ಕ್ಯಾನಿಯಾ ಕಂಪನಿಯ ಟ್ರಕ್​ಗಳಲ್ಲಿ ಈಗಾಗಲೇ AC ಇದೆ

ನವದೆಹಲಿ: ಟ್ರಕ್ ಡ್ರೈವರ್​ಗಳಿಗೆ ಕೇಂದ್ರ ಸರ್ಕಾರವು ಗುಡ್ ನ್ಯೂಸ್ ನೀಡಿದೆ. 2025 ರಿಂದ ದೇಶದ ಟ್ರಕ್​ಗಳಲ್ಲಿ ಏರ್ ಕಂಡೀಷನ್ (AC) ಕ್ಯಾಬಿನ್ ಕಡ್ಡಾಯವಾಗಿರಬೇಕು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ನಿತಿನ್​ ಗಡ್ಕರಿ, ಬಿಸಿಲು ಮತ್ತು ಅನಾನುಕೂಲ ಕ್ಯಾಬಿನ್‌ಗಳಲ್ಲಿ ಸುಮಾರು 11-12 ಗಂಟೆವರೆಗೆ ಡ್ರೈವರ್​ಗಳು ರಸ್ತೆಗಳಲ್ಲಿ ದೀರ್ಘವಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ಕೆಲವೊಮ್ಮೆ ಅಪಘಾತಗಳು ಆಗುವ ಸಂಭವವಿರುತ್ತದೆ. ಟ್ರಕ್​​ಗಳಲ್ಲಿ ACಯನ್ನು ಕಡ್ಡಾಯ ಮಾಡುವುದರಿಂದ ಚಾಲಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಈಗಾಗಲೇ ವೋಲ್ವೋ, ಸ್ಕ್ಯಾನಿಯಾ ಕಂಪನಿಯ ಟ್ರಕ್​ಗಳಲ್ಲಿ AC ಅಳವಡಿಕೆ ಆಗಿರುತ್ತದೆ. ಭಾರತದ ಟಾಟಾ, ಆಶೋಕ್ ಲೈಲ್ಯಾಂಡ್ ಕಂಪನಿಯ ಟ್ರಕ್​ಗಳಲ್ಲಿ ಎಸಿ ಆಳವಡಿಕೆ ಬಾಕಿಯಿದೆ. ಭಾರತದಲ್ಲಿ 43 ರಿಂದ 47 ಡಿಗ್ರಿವರೆಗೂ ಉಷ್ಣಾಂಶ ಇರುತ್ತೆ. ಇದರಿಂದ ಮುಂದಿನ 18 ತಿಂಗಳಲ್ಲಿ ದೇಶದ ಟ್ರಕ್​ಗಳನ್ನು ಅಪ್​ಗ್ರೇಡ್ ಮಾಡುವುದರಿಂದ ಚಾಲಕರಿಗೆ ಅನುಕೂಲವಾಗಲಿದೆ. ಎಸಿ ಕ್ಯಾಬಿನ್ ಆಳವಡಿಕೆಗೆ 10 ರಿಂದ 20 ಸಾವಿರ ರೂ. ಖರ್ಚು ಆಗಲಿದೆ ಎನ್ನಲಾಗಿದೆ. ಈಗಾಗಲೇ ಕಡತಕ್ಕೆ ಸಹಿ ಮಾಡಿದ್ದೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ರೈವರ್​ಗಳಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸಚಿವ ನಿತಿನ್ ಗಡ್ಕರಿ; ಇನ್ಮುಂದೆ ಟ್ರಕ್​ಗಳಲ್ಲಿ ಇದು ಇರಲೇಬೇಕು

https://newsfirstlive.com/wp-content/uploads/2023/06/NITIN_GADKARI_TRUCK.jpg

Load More