newsfirstkannada.com

ಇಂದಿನಿಂದ BPL, APL​ಗೆ ಅರ್ಜಿ ಸ್ವೀಕಾರ ಶುರು! ಶೀಘ್ರದಲ್ಲೇ ಸಿಗಲಿದೆ 10 ಕೆಜಿ ಅಕ್ಕಿ! ಯಾರಿಗಿಲ್ಲ ಈ ಯೋಜನೆಯ ಫಲ?

Share :

05-08-2023

    ಕಲಬುರಗಿ ನೂತನ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ!

    ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡಲು ಪ್ಲಾನ್

    ಆಹಾರ ಇಲಾಖೆಯ ಪೋರ್ಟಲ್​​ನಲ್ಲಿ ಅರ್ಜಿ ಸಲ್ಲಿಕೆ

ಕಲ್ಯಾಣ ಕರ್ನಾಟಕ ಭಾಗದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಇವತ್ತು ಕಾಂಗ್ರೆಸ್ ಕಹಳೆ ಮೊಳಗಲಿದೆ. ಪ್ರತಿಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲು ಸರ್ಕಾರ ಸಜ್ಜಾಗಿದೆ. ಮಲ್ಲಿಕಾರ್ಜುನ ಖರ್ಗೆ ತವರಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ.

‘ಗೃಹಜ್ಯೋತಿ’ ಕಾಂಗ್ರೆಸ್​ನ ಪಂಚ ಗ್ಯಾರಂಟಿಗಳಲ್ಲಿ ಒಂದು. ಉಚಿತ ಬೆಳಕು. ಸುಸ್ಥಿರ ಬದುಕು. ಇದು ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಕೊಡುವ ಯೋಜನೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಹುತೇಕ ಮುಗಿದಿದ್ದು ಇದೇ ತಿಂಗಳು ಹಲವು ಫಲಾನುಭವಿಗಳು ಶೂನ್ಯ ವಿದ್ಯುತ್ ಬಿಲ್ ಫಲ ಪಡೆದಿದ್ದಾರೆ. ಇದರ ಭಾಗವಾಗಿ ಸರ್ಕಾರ ಇವತ್ತು ಅಧಿಕೃತವಾಗಿ ಯೋಜನೆ ಚಾಲನೆ ನೀಡಲು ಸಜ್ಜಾಗಿದೆ.

ಖರ್ಗೆ ತವರಲ್ಲಿ ಸರ್ಕಾರದ ಬೃಹತ್ ಕಾರ್ಯಕ್ರಮ!

ಅತ್ಯಾಕರ್ಷಕ ಬೃಹತ್ ವೇದಿಕೆ. ಕಾಂಗ್ರೆಸ್ ನಾಯಕರ ದೊಡ್ಡ ದೊಡ್ಡ ಕಟೌಟ್​ಗಳು. ಮಳೆ ಬಂದರೂ ಅಡ್ಡಿಯಾಗದಂತೆ ವಾಟರ್ಫ್ರೂಪ್ ಪೆಂಡಾಲ್, 8 ಸಾವಿರಕ್ಕೂ ಹೆಚ್ಚು ಮಂದಿ ಕೂರುವುದಕ್ಕೆ ಆಸನ ವ್ಯವಸ್ಥೆ. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್.. ಈ ದೃಶ್ಯಗಳೆಲ್ಲಾ ಕಂಡುಬಂದಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಕಲಬುರಗಿಯಲ್ಲಿ. ‘ಸರ್ವರನ್ನು ಒಳಗೊಂಡ ಆರ್ಥಿಕ ಮತ್ತು ಸಾಮಾಜಿಕ, ಪ್ರಗತಿಪರ ಅಭಿವೃದ್ಧಿ’ ಧ್ಯೇಯದೊಂದಿಗೆ ಹೆಜ್ಜೆ ಇಟ್ಟಿರುವ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಇಂದು ಸರ್ಕಾರ ಅಧಿಕೃತವಾಗಿ ಚಾಲನೆ ನೀಡಲಿದೆ.

ಯೋಜನೆಗೆ ಚಾಲನೆ ನೀಡಲಿರುವ ಖರ್ಗೆ, ಸಿಎಂ ಸಿದ್ದರಾಮಯ್ಯ!

ಇನ್ನು ಕಲಬುರಗಿ ನಗರದ ನೂತನ ವಿದ್ಯಾಲಯ ಕಾಲೇಜು ಗ್ರೌಂಡ್ನಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಖರ್ಗೆ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲಿದ್ದು ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಸೇರುವ ನಿರೀಕ್ಷೆ ಇದೆ. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಸುಮಾರು 10 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಉಚಿತ ವಿದ್ಯುತ್ ಬಿಲ್ ನೀಡಲಾಗುತ್ತೆ. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ ಖರ್ಗೆ, ಇಂಧನ ಸಚಿವ ಕೆಜೆ ಜಾರ್ಜ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಇಂದಿನ ಕಾರ್ಯಕ್ರಮ ನಡೆಸುವ ಹೊಣೆಯನ್ನು ಜೆಸ್ಕಾಂ, ಎಸ್ಕಾಂ ಅಧಿಕಾರಿಗಳು ಹೊತ್ತಿದ್ದಾರೆ. ಕಳೆದ ಐದಾರು ದಿನಗಳಿಂದ ಸರಣಿ ಸಭೆಗಳನ್ನು ನಡೆಸಿ ಸಿದ್ಧತೆ ನಡೆಸಲಾಗಿದೆ. ಇಂದು ನಡೆಯಲಿರುವ ಕಾರ್ಯಕ್ರಮದ ಸಿದ್ಧತೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಪರಿಶೀಲನೆ ನಡೆಸಿದ್ರು. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ್ರು.

ಒಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಇವತ್ತು ಗೃಹಜ್ಯೋತಿಗೆ ಅಧಿಕೃತ ಚಾಲನೆ ಸಿಗಲಿದೆ. ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಿರುವ ಸಿದ್ದರಾಮಯ್ಯ ಉತ್ಸಾಹದಲ್ಲಿ ಬೀಗುತ್ತಿದೆ. ನುಡಿದಂತೆ ನಡೆದಿದ್ದೇವೆ ಅನ್ನೋ ಕಾಂಗ್ರೆಸ್ ನಾಯಕರ ಮಾತಿಗೆ ಬಲ ಬರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನಿಂದ BPL, APL​ಗೆ ಅರ್ಜಿ ಸ್ವೀಕಾರ ಶುರು! ಶೀಘ್ರದಲ್ಲೇ ಸಿಗಲಿದೆ 10 ಕೆಜಿ ಅಕ್ಕಿ! ಯಾರಿಗಿಲ್ಲ ಈ ಯೋಜನೆಯ ಫಲ?

https://newsfirstlive.com/wp-content/uploads/2023/08/Gruhajyothi.jpg

Load More