newsfirstkannada.com

‘ಗ್ಯಾರಂಟಿ’ ಯೋಜನೆಗಾಗಿ ಮುಗಿಬಿದ್ದ ಜನ; ಹೊಸ BPL ಕಾರ್ಡ್ ಅರ್ಜಿ ಸ್ವೀಕಾರ ತಾತ್ಕಾಲಿಕ ಸ್ಥಗಿತ..!

Share :

Published May 26, 2023 at 2:26pm

    ಕಾಂಗ್ರೆಸ್‌ ಸರ್ಕಾರದ ‘ಉಚಿತ ಗ್ಯಾರಂಟಿ ಯೋಜನೆ’ಗಳ ಎಫೆಕ್ಟ್​

    BPL ಕಾರ್ಡ್​​ಗಾಗಿ 3 ತಿಂಗಳಿನಿಂದ‌ 2.5 ಲಕ್ಷ ಅರ್ಜಿಗಳು ಸಲ್ಲಿಕೆ

    ಗ್ಯಾರಂಟಿ ಯೋಜನೆಗಳು ಕೇವಲ ಬಡವರಿಗೆ ಮಾತ್ರನಾ.?

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಿಪಿಎಲ್​ ಕಾರ್ಡ್​​ಗಾಗಿ ಅರ್ಜಿ ಸಲ್ಲಿಸಲು ಮುಂದಾಗಿರುವವರ ಸಂಖ್ಯೆ ಭಾರೀ ಹೆಚ್ಚಾಗಿದ್ಯಂತೆ. ಅದಕ್ಕೆ ಕಾರಣ ಕಾಂಗ್ರೆಸ್‌ ಸರ್ಕಾರದ ‘ಉಚಿತ ಗ್ಯಾರಂಟಿ ಯೋಜನೆ’ಗಳು ಎನ್ನಲಾಗುತ್ತಿದೆ. ಅರ್ಜಿಗಳನ್ನು ಸಲ್ಲಿಸುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅರ್ಜಿ ಸ್ವೀಕಾರವನ್ನು ಸ್ಥಗಿತಗೊಳಿಸಲಾಗಿದೆ.

ಆಹಾರ ಇಲಾಖೆ ವೆಬ್‌ಸೈಟ್‌ ಮಾಹಿತಿ ಪ್ರಕಾರ ಬಿಪಿಎಲ್ ಕಾರ್ಡ್​ ಅರ್ಜಿ ಸ್ವೀಕೃತಿಯನ್ನು ಮೇ 20 ರಿಂದ ಸ್ಥಗಿತಗೊಳಿಸಲಾಗಿದೆ. ಮೇ 13 ರಿಂದ 20ವರೆಗೆ ಬೆಂಗಳೂರಿನಲ್ಲಿಯೇ 20 ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಒಟ್ಟು 78 ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ‌ ಮೂರು ತಿಂಗಳಿನಿಂದ‌ 2.5 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿದ್ದು, ಅವೆಲ್ಲ ಬಾಕಿಯಿವೆ ಎನ್ನಲಾಗಿದೆ.

ಗ್ಯಾರಂಟಿ ಯೋಜನೆಗಳು ಕೇವಲ ಬಡವರಿಗೆ ಮಾತ್ರ..?

ಅರ್ಜಿ ಸಲ್ಲಿಕೆ‌ ಹೆಚ್ಚಳವಾದ ಕಾರಣ ಹೊಸ ಕಾರ್ಡ್​ ಅರ್ಜಿ ಸ್ವೀಕಾರವನ್ನೇ ಸ್ಥಗಿತಗೊಳಿಸಲಾಗಿದೆ. ಹೀಗಿದ್ದೂ ಹಲವು‌ ಜನರಿಂದ ಅರ್ಜಿ ಸಲ್ಲಿಕೆ ಕುರಿತು ವಿಚಾರಣೆ ನಡೆಸ್ತಿದ್ದಾರೆ. ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆ ಕೇವಲ ಬಡ ವರ್ಗದ ಜನರಿಗೆ ಸೀಮಿತ ಎನ್ನಲಾಗುತ್ತಿದೆ. ಸರ್ಕಾರದ ಉಚಿತ ಕೊಡುಗೆಯ ಲಾಭ ಪಡೆಯಲು ಜನರು ಹೊಸ ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಮೇ 20 ರಿಂದ ಹೊಸ ಕಾರ್ಡ್​ಗಳ ಅರ್ಜಿ ಸ್ವೀಕಾರವನ್ನು ಆರೋಗ್ಯ ಇಲಾಖೆ ಸ್ಥಗಿತಗೊಳಿಸಿದೆ. ಅನಾರೋಗ್ಯದಂಥ ತುರ್ತು ಇದ್ದರೆ ಮಾತ್ರ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಮುಂದಿನ ತಿಂಗಳು ಎರಡನೇ ತಾರೀಖಿನವರೆಗೂ ಕಾರ್ಡ್ ನೀಡದಿರಲು ನಿರ್ಧಾರ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಗ್ಯಾರಂಟಿ’ ಯೋಜನೆಗಾಗಿ ಮುಗಿಬಿದ್ದ ಜನ; ಹೊಸ BPL ಕಾರ್ಡ್ ಅರ್ಜಿ ಸ್ವೀಕಾರ ತಾತ್ಕಾಲಿಕ ಸ್ಥಗಿತ..!

https://newsfirstlive.com/wp-content/uploads/2023/05/BPL_CARD26052023.jpg

Load More