newsfirstkannada.com

ಬೈಕ್​ ಮತ್ತು ಕ್ಯಾಂಟರ್​ ನಡುವೆ ಅಪಘಾತ; ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ

Share :

13-11-2023

    ತುಮಕೂರಿನಿಂದ ಮಧುಗಿರಿ ಪಟ್ಟಣಕ್ಕೆ ಹೋಗ್ತಿದ್ದ ಕ್ಯಾಂಟರ್

    ಮಧುಗಿರಿ ಕಡೆಯಿಂದ ಕೊರಟಗೆರೆ ಕಡೆ ಬರುತ್ತಿದ್ದ ಬೈಕ್ ಸವಾರ

    ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿಯಾಗಿದೆ

ತುಮಕೂರು: ಬೈಕ್ ಹಾಗೂ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬಣವೇನಹಳ್ಳಿ ಬಳಿ ನಡೆದಿದೆ. ದೊಡ್ಡಬಳ್ಳಾಪುರ ಮೂಲದ ಹಾಲಪ್ಪನಹಳ್ಳಿ ನಿವಾಸಿ ಮುನಿರಾಜು (26) ಮೃತ ದುರ್ದೈವಿ.

ತುಮಕೂರು ಕಡೆಯಿಂದ ಮಧುಗಿರಿ ಪಟ್ಟಣಕ್ಕೆ ಹೋಗ್ತಿದ್ದ ಕ್ಯಾಂಟರ್. ಮಧುಗಿರಿ ಕಡೆಯಿಂದ ಕೊರಟಗೆರೆ ಕಡೆ ಬರುತ್ತಿದ್ದ ಬೈಕ್.‌ ಈ ವೇಳೆ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿಯಾಗಿ ಅಪಘಾತ ನಡೆದಿದೆ.

ಹಿಂಬದಿ ಬೈಕ್ ಸವಾರನಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್​ ಮತ್ತು ಕ್ಯಾಂಟರ್​ ನಡುವೆ ಅಪಘಾತ; ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ

https://newsfirstlive.com/wp-content/uploads/2023/11/Tumkur.jpg

Load More