newsfirstkannada.com

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ; ಎರಡು ಭಾಗವಾದ ಕಂಟೇನರ್..!

Share :

15-09-2023

    ದುರ್ಘಟನೆ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಅಸ್ತವ್ಯಸ್ತ

    ಸಿಮೆಂಟ್ ತುಂಬಿದ್ದ ಕಂಟೇನರ್ ಪಲ್ಟಿಯಾಗಿದೆ

    ಚನ್ನಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ

ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಟೈರ್ ಸ್ಫೋಟಗೊಂಡು ಸಿಮೆಂಟ್ ತುಂಬಿದ್ದ ಕಂಟೇನರ್ ಪಲ್ಟಿಯಾಗಿದೆ.

ಚನ್ನಪಟ್ಟಣ ತಾಲೂಕಿನ ಕುಂತೂರುದೊಡ್ಡಿ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ. ಹೈವೇಯಿಂದ ಸರ್ವೀಸ್ ರಸ್ತೆಗೆ ಕಂಟೇನರ್ ಉರುಳಿ ಬಿದ್ದಿದೆ. ಕಂಟೇನರ್ ಅಡಿಯಲ್ಲಿ ಡ್ರೈವರ್ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು, ಪೊಲೀಸರು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಚಾಲಕನನ್ನು ರಕ್ಷಣೆ ಮಾಡಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ಸಿಮೆಂಟ್ ತುಂಬಿಕೊಂಡು ಕಂಟೇನರ್ ಹೋಗುತ್ತಿತ್ತು. ಟೈರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಸಂಚಾರದಲ್ಲೂ ಅಸ್ತವ್ಯಸ್ತವಾಗಿದೆ. ಚನ್ನಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ; ಎರಡು ಭಾಗವಾದ ಕಂಟೇನರ್..!

https://newsfirstlive.com/wp-content/uploads/2023/09/RMG_ACCIDENT.jpg

Load More