ಗೆಳೆಯರೊಟ್ಟಿಗೆ ರಸ್ತೆ ಬದಿ ನಿಂತಿದ್ದ ಹುಡುಗನಿಗೆ ಬಸ್ ಭಯಾನಕ ಡಿಕ್ಕಿ!
ರಸ್ತೆ ಬದಿ ನಿಂತಿದ್ದ ಮಕ್ಕಳನ್ನ ನೋಡಿಯೂ ವೇಗವಾಗಿ ಬಂದ ಚಾಲಕ
ಟ್ಯೂಷನ್ ಮುಗಿಸಿ ಮೂತ್ರ ವಿಸರ್ಜನೆಗೆ ಬಂದಿದ್ದ ಬಾಲಕ ಸಾವು
ಬೆಳಗಾವಿ: ರಸ್ತೆ ಬದಿ ನಿಂತಿದ್ದವರ ಮೇಲೆ ಸರ್ಕಾರಿ ಬಸ್ ಹರಿದು ಬಾಲಕ ಸಾವನ್ನಪ್ಪಿರೋ ದಾರುಣ ಘಟನೆ ಅಥಣಿ ಪಟ್ಟಣದ ಗಲಗಲಿ ಆಸ್ಪತ್ರೆ ಬಳಿ ನಡೆದಿದೆ. 10 ವರ್ಷದ ಸುನೀಲ್ ಬಂಡರಗರ್ ಮೃತ ಬಾಲಕ. ಗಲಗಲಿ ಆಸ್ಪತ್ರೆ ಬಳಿಯ ಸಿಸಿಟಿವಿಯಲ್ಲಿ ಅಪಘಾತದ ಭೀಕರ ದೃಶ್ಯ ಸೆರೆಯಾಗಿದೆ.
ಇದನ್ನೂ ಓದಿ: ಭೀಕರ ಅಪಘಾತ.. ಮದುವೆಯಾದ 2ನೇ ದಿನಕ್ಕೆ ನವವಿವಾಹಿತೆ ದಾರುಣ ಸಾವು; ಘೋರ ದುರಂತ!
ಸುನೀಲ್ ಬಂಡರಗರ್ ಹಾಗೂ ಸಹಪಾಠಿಗಳು ಇಂದು ಟ್ಯೂಷನ್ಗಾಗಿ ಬಂದಿದ್ದರು. ಟ್ಯೂಷನ್ ಮುಗಿಸಿ ಮೂತ್ರ ವಿಸರ್ಜನೆಗೆ ಬಂದಿದ್ದ ಸುನೀಲ್ ತನ್ನ ಗೆಳೆಯರ ಜೊತೆ ರಸ್ತೆ ಬದಿ ನಿಂತಿದ್ದರು. ಗೆಳೆಯರೊಟ್ಟಿಗೆ ರಸ್ತೆ ಬದಿ ನಿಂತಿದ್ದ ಸುನೀಲ್‌ಗೆ ಸಾರಿಗೆ ಬಸ್ ಡಿಕ್ಕಿಯಾಗಿದೆ.
ರಸ್ತೆ ಬದಿ ನಿಂತಿದ್ದ ಮಕ್ಕಳನ್ನ ಗಮನಿಸಿದ್ರೂ ಕೆಎಸ್‌ಆರ್‌ಟಿಸಿ ಚಾಲಕ ಮಕ್ಕಳ ಮೇಲೆ ಬಸ್ ಹರಿಸಿದ್ದಾನೆ. ಸಾರಿಗೆ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕ ದಾರುಣವಾಗಿ ಸಾವನ್ನಪ್ಪಿದ್ದಾನೆ. ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಟ್ರಕ್ ಮತ್ತು ಬಸ್ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ 15 ಮಂದಿ ಸಾವು
ಅಥಣಿಯಿಂದ ಕಾರವಾರಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್ ಇದಾಗಿದ್ದು, ಭೀಕರ ರಸ್ತೆ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದಾರುಣ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ