newsfirstkannada.com

ಕ್ರೂಸರ್​ ಗಾಡಿ, ಟ್ಯಾಂಕರ್​​ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ 7 ಮಂದಿ ಸಾವು

Share :

30-06-2023

  ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ 7 ಮಂದಿ ಸಾವು

  ಒಂದೇ ಗ್ರಾಮದ 7 ಮಂದಿ ಸಾವು, ಐವರ ಸ್ಥಿತಿ ಗಂಭೀರ

  ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಬಳಿ ದುರ್ಘಟನೆ

ಕಲಬುರಗಿ: ಕ್ರೂಸರ್ ವಾಹನ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಸಿರಿವಳ್ವಾಡಿ ಹತ್ತಿರ ಸಂಭವಿಸಿದೆ. ಸಂಗೀತಾ ಗದನ್ ಮಾನೇ(35), ಲಲಿತಾ ಮಹಾದೇವ್ ಬುಗ್ಗೆ(50), ಛಾಯಾ ಹನುಮನವರೆ(46), ರೋಹಿಣಿ ಪೂಜಾರಿ (40) , ಸಾಯಿನಾಥ್ ಗೋವಿಂದ ಪೂಜಾರಿ(10), ಸಂದೂಶಾ ಬಾಯಿ(45) ಮೃತ ದುರ್ದೈವಿಗಳು.

ಮೃತ ದುರ್ದೈವಿಗಳು ಜಿಲ್ಲೆಯ ಆಳಂದ ತಾಲ್ಲೂಕಿನ ಅಣೂರ ಗ್ರಾಮದ ನಿವಾಸಿಗಳು. ಆಷಾಢ ಏಕಾದಶಿ ನಿಮ್ಮಿತ್ತ ನಿನ್ನೆ ಮಹಾರಾಷ್ಟ್ರದ ವಿವಿಧ ದೇವಸ್ಥಾನಗಳ ದರ್ಶನಕ್ಕೆ ತೆರಳಿದ್ದರು. ಪಂಡರಾಪುರಕ್ಕೆ ಹೋಗಿ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಕ್ರೂಸರ್ ಜೀಪ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪರಿಣಾಮ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಆಳಂದ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಭೀಕರ ಅಪಘಾತದಲ್ಲಿ ಐದು ಜನರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ರೂಸರ್​ ಗಾಡಿ, ಟ್ಯಾಂಕರ್​​ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ 7 ಮಂದಿ ಸಾವು

https://newsfirstlive.com/wp-content/uploads/2023/06/klb-death.jpg

Load More