newsfirstkannada.com

ದೇವರ ಕೆಲಸ ನಿಮಿತ್ತ ಹೊರಟಿದ್ದಾಗ ಭೀಕರ ದುರಂತ.. ವಿಧಿಯಾಟಕ್ಕೆ ದಾರಿ ಮಧ್ಯೆಯೇ ಪ್ರಾಣಬಿಟ್ಟ ನಾಲ್ವರು..

Share :

30-07-2023

  ಮಂಡ್ಯದ ವಿಸಿ ನಾಲೆಯಲ್ಲಿ ಮತ್ತೊಂದು ಘೋರ ಅನಾಹುತ

  ಶ್ರೀರಂಗಪಟ್ಟಣ ತಾಲೂಕು ಗಾಮನಹಳ್ಳಿಯಲ್ಲಿ ದುರ್ಘಟನೆ

  ಬಲಿಷ್ಠ ತಡೆಗೋಡೆ ಇಲ್ಲದೇ ಸಾಲು ಸಾಲು ಅಪಘಾತ

ಮಂಡ್ಯದಲ್ಲಿ ಮತ್ತೊಂದು ಮಹಾದುರಂತ ಸಂಭವಿಸಿದೆ. ವಿಸಿ ನಾಲೆ ಮತ್ತೊಮ್ಮೆ ಜವರಾಯನ ಅಟ್ಟಹಾಸಕ್ಕೆ ಸಾಕ್ಷಿ ಆಗಿದೆ. ಗಾಮನಹಳ್ಳಿ ಬಳಿಯ ನಾಲೆಗೆ ಮತ್ತೊಂದು ಕಾರು ಉರುಳಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಂಡ್ಯದಲ್ಲಿ ನಡೀತು ಮತ್ತೊಂದು ಮಹಾ ದುರಂತ!

ಸಮಯ 8:30ರ ಆಸುಪಾಸು.. ಹೆಡ್​​ಲೈಟ್​​ ಲ್ಯಾಂಪಿನ ಮಂದ ಬೆಳಕಿನಲ್ಲಿ ಸಾಗ್ತಿದ್ದ ಕಾರು, ಹಾದಿ ತಪ್ಪಿದೆ.. ಪಕ್ಕದ ನಾಲೆ, ತನ್ನತ್ತ ತಿರುಗಿಸಿಕೊಂಡು ಮತ್ತೊಮ್ಮೆ ಹಸಿವು ನೀಗಿಸಿಕೊಂಡಿದೆ. ಅಂದ್ಹಾಗೆ ದೊಡ್ಡಮುಲಗೂಡು ಮತ್ತು ಗಾಮನಹಳ್ಳಿ ನಟ್ಟ ನಡುವೆ ಹರಿದು ಹೋದ ಕಾಲುವೆಯಲ್ಲಿ ಹೀಗೆ ಹೆಣಗಳ ರಾಶಿ ಬಿದ್ದಿದೆ. ಯಾವುದೋ ಮಹತ್ಕಾರ್ಯಕ್ಕಾಗಿ ಹೋದವರು, ಮರಳಿ ಬರಲೇ ಇಲ್ಲ..

‘ನಾಲೆ’ ನರಳಾಟ!

 • ಶ್ರೀರಂಗಪಟ್ಟಣ ತಾಲೂಕು ಗಾಮನಹಳ್ಳಿ ಗ್ರಾಮದ ಹತ್ತಿರ
 • ತುರುಗನೂರು ಬ್ರಾಂಚ್‌ನ ವಿಸಿ ನಾಲೆಗೆ ಉರುಳಿದ ಕಾರು
 • ಕಾರು ಉರುಳಿ ಬಿದ್ದು ಈ ನಾಲ್ಕು ಮಂದಿ ದಾರುಣ ಸಾವು
 • ಟಿ. ನರಸೀಪುರ ತಾ. ಗೊರವನಹಳ್ಳಿಯ ಮಹದೇವಮ್ಮ
 • ಸಂಬಂಧಿಕರಾದ 36 ವರ್ಷದ ರೇಖಾ, 17 ವರ್ಷದ ಸಂಜನಾ
 • 45 ವರ್ಷದ ಮಮತಾ ಸಾವನ್ನಪ್ಪಿರುವ ದುರ್ದೈವಿಗಳು

ವಿಧಿಯಾಟಕ್ಕೆ ದಾರಿ ಮಧ್ಯೆ ದೇವರ ಬಳಿಯೇ ತೆರಳಿದ್ರು

ದುರಂತ ಅಂದ್ರೆ ಮಹದೇವಮ್ಮ ಮನೆಯವರು ಆದಿಚುಂಚನಗಿರಿಯಲ್ಲಿ ದೇವತಾ ಕಾರ್ಯ ಇಟ್ಕೊಂಡಿದ್ರು.. ಅದೇ ಕಾರಣ ನೆಂಟರನ್ನ ಆಹ್ವಾನಿಸಲು ಗೊರವನಹಳ್ಳಿಯಿಂದ ದೊಡ್ಡಮಲಗೂಡಿಗೆ ಕಾರಿನಲ್ಲಿ ತೆರಳ್ತಿದ್ರು. ಈ ವೇಳೆ ನಾಲೆಗೆ ತಡೆಗೋಡೆ ಇಲ್ಲದ ಕಾರಣ ಕತ್ತಲಲ್ಲಿ ಚಾಲಕನ ಕಣ್ತಪ್ಪಿದೆ ಅಷ್ಟೇ. ಕಾರು ನೇರವಾಗಿ ನಾಲೆಗೆ ಉರುಳಿ ಬಿದ್ದಿದೆ.. ಕಾರು ಚಲಿಸ್ತಿದ್ದ ಮಮತಾರ ಪುತ್ರ ಮನೋಜ್ ಈಜು ಬರ್ತಿದ್ದ ಕಾರಣ ಬಚಾವ್​ ಆಗಿದ್ದಾನೆ. ಆದ್ರೆ ಇನ್ನುಳಿದವರು ದೇವರ ಪಾದ ಸೇರಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು, ಪೊಲೀಸರು ನಾಲ್ವರು ಮಹಿಳೆಯರ ಶವವನ್ನ ನಾಲೆ ನೀರಿನಿಂದ ಹೊರತೆಗೆದಿದ್ದಾರೆ‌. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.. ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಸ್ಥಳಕ್ಕೆ ಡಿಸಿಎ, ಎಸ್​​ಪಿ, ಎಎಸ್ಪಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೃತರನ್ನ ನೆನೆದು ಕುಟುಂಬಸ್ಥರ ಆಕ್ರಂದನ ಮಗಿಲು ಮುಟ್ಟಿತ್ತು.. ಮೃತ ಮಗಳನ್ನ ತೊಡೆ ಮೇಲೆ ಮಲಗಿಸಿಕೊಂಡು ಮರುಗುತ್ತಿರುವ ತಂದೆಯ ದೃಶ್ಯ ಅಲ್ಲಿದ್ದವರ ಕಣ್ಣಾಲಿಗಳನ್ನ ತೇವಗೊಳಿಸ್ತ.. ಸುದ್ದಿ ತಿಳಿದು ಸ್ಥಳಕ್ಕೆ ಬಂದು ಕುಟುಂಬಸ್ಥರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಸಾಂತ್ವನ ಹೇಳಿದ್ದಾರೆ.

ಒಟ್ಟಾರೆ, ಮೊನ್ನೆಯಷ್ಟೇ ಮಂಡ್ಯ ತಾಲೂಕು ತಿಬ್ಬನಹಳ್ಳಿ ಬಳಿ ನಾಲೆಗೆ ಕಾರು ಮಗುಚಿ ಬಿದ್ದಿತ್ತು.. ಶಿವಳ್ಳಿ ಗ್ರಾಮದ ಲೋಕೇಶ್ ಮೃತಪಟ್ಟಿದ್ದ.. ಇದಾದ ಎರಡು ದಿನಗಳಲ್ಲೇ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ.. ಬಲಿಷ್ಠ ತಡೆಗೋಡೆ ಇಲ್ಲದ ವಾಹನಗಳಿಗೆ ಈ ನಾಲೆಗಳು ಅಪಾಯಕಾರಿ ಆಗಿ ಪರಿಣಮಿಸ್ತಿವೆ.. ಸರ್ಕಾರ ಕೂಡಲೇ ವಿಸಿ ನಾಲೆ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ತಗೊಳ್ಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವರ ಕೆಲಸ ನಿಮಿತ್ತ ಹೊರಟಿದ್ದಾಗ ಭೀಕರ ದುರಂತ.. ವಿಧಿಯಾಟಕ್ಕೆ ದಾರಿ ಮಧ್ಯೆಯೇ ಪ್ರಾಣಬಿಟ್ಟ ನಾಲ್ವರು..

https://newsfirstlive.com/wp-content/uploads/2023/07/MND_ACCIDENT.jpg

Load More