ತುಮಕೂರಿನ ಹೊರವಲಯದಲ್ಲಿ ಭೀಕರ ಅಪಘಾತ
ಮೂವರು ಎಂಟತ್ತು ಅಡಿ ಮೇಲಕ್ಕೆ ಹಾರಿ ಬಿದ್ದಿದ್ದಾರೆ
ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ದ್ವಿಚಕ್ರ ವಾಹನವೊಂದು ರೋಡ್ ಕ್ರಾಸ್ ಮಾಡುವ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ಬೈಕ್ನಲ್ಲಿದ್ದ ಮೂವರು ಎಂಟತ್ತು ಅಡಿ ಮೇಲಕ್ಕೆ ಹಾರಿ ಬಿದ್ದಿರುವ ಘಟನೆ ತುಮಕೂರಿನ ಹೊರವಲಯದಲ್ಲಿರುವ ರಿಂಗ್ ರಸ್ತೆಯಲ್ಲಿ ನಡೆದಿದೆ.
ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ. ಎಸ್ಎಲ್ಎನ್ ನಗರದ ನಿವಾಸಿಗಳಾದ ಸಂತೋಷ್, ನಾಗೇಶ್ ಮತ್ತು ವಿಜಯ್ ಕುಮಾರ್ ಒಂದೇ ಬೈಕ್ನಲ್ಲಿ ರೋಡ್ ಕ್ರಾಸ್ ಮಾಡುತ್ತಿದ್ದರು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಇನ್ನೋವಾ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮೂವರು ಎಂಟತ್ತು ಅಡಿ ಮೇಲಕ್ಕೆ ಹಾರಿ ಕೆಳಗೆ ಬಿದ್ದಿದ್ದು, ಮೂವರಿಗೂ ಗಂಭೀರ ಗಾಯಗಳಾಗಿವೆ.
ರಸ್ತೆ ಕ್ರಾಸ್ ಮಾಡುತ್ತಿದ್ದ ಬೈಕ್ಗೆ ಇನ್ನೋವಾ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದು ಹಾಗೇ ಹೋಗಿದೆ. ಡಿಕ್ಕಿ ರಭಸಕ್ಕೆ ಬೈಕ್ನಲ್ಲಿದ್ದ ಮೂವರು 10 ಅಡಿಗೂ ಹೆಚ್ಚು ಮೇಲಕ್ಕೆ ಹಾರಿ ಬಿದ್ದಿದ್ದಾರೆ. ಸದ್ಯ ಈ ಘಟನೆು ತುಮಕೂರಿನ ರಿಂಗ್ರಸ್ತೆಯಲ್ಲಿ ನಡೆದಿದೆ. #bikeaccident #Tumkur #ringroad #caraccident pic.twitter.com/kzqzyevipY
— Bhima (@Bhima895143) August 31, 2023
ಹೀಗಾಗಿ ಗಾಯಾಳುಗಳನ್ನು ಬೆಂಗಳೂರಿನ ನಿಮಾನ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಕ್ಕಿ ಹೊಡೆದ ಕಾರು ದಾಬಸ್ ಪೇಟೆ ಮೂಲದ್ದು ಎಂದು ತಿಳಿದು ಬಂದಿದ್ದು, ಇದೇ ರಿಂಗ್ ರಸ್ತೆಯಲ್ಲಿರುವ ಟೊಯೋಟಾ ಶೋ ರೂಮ್ಗೆ ಗಾಡಿಯನ್ನು ಸರ್ವೀಸ್ಗೆ ಬಿಡಲು ಹೊರಟಾಗ ಅಪಘಾತವಾಗಿದೆ. ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ಕ್ಯಾತಸಂದ್ರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ