ಹೆಂಡತಿ ಮಕ್ಕಳೊಂದಿಗೆ ಆರಾಮಾಗಿ ನಾನು ಇರಬಹುದಾಗಿತ್ತು
ಇಲ್ಲ ಸಲ್ಲದ ಸಹವಾಸ ಮಾಡಿ ಜೈಲು ಸೇರುವಂತ ಪರಿಸ್ಥಿತಿ ಬಂತು
ವೈಯಕ್ತಿಕವಾಗಿ ಆ ಕುಟುಂಬಕ್ಕೆ ಏನಾದ್ರೂ ಮಾಡುವ ಮನಸ್ಸಿದೆ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನದಲ್ಲಿರುವ ಆರೋಪಿ ದರ್ಶನ್ ಅವರು ಬೆಂಗಳೂರು ಸೆಂಟ್ರಲ್ ಜೈಲಿಂದ ಬಳ್ಳಾರಿ ಜೈಲಿಗೆ ಪ್ರಯಾಣ ಬೆಳೆಸಿದ್ದಾರೆ. ಯಾವಾಗಲೂ ಡಿಗ್ಯಾಂಗ್, ತನ್ನ ಪಟಾಲಂ ಜೊತೆ ತಿರುಗುತ್ತಿದ್ದ ದರ್ಶನ್ ಅವರು ಈಗ ಏಕಾಂಗಿಯಾಗಿದ್ದು, ಪಶ್ಚಾತಾಪದ ಮಾತನಾಡಿದ್ದಾರೆ.
ಇದನ್ನೂ ಓದಿ: ದರ್ಶನ್, ಪವಿತ್ರಾ ನಡುವೆ ಮಹಾ ಬಿರುಕು.. ಮಾತಿಲ್ಲ, ಕಥೆ ಇಲ್ಲ? ವಿಜಯಲಕ್ಷ್ಮಿ ಹಾಕಿದ ಷರತ್ತಿಗೆ ಸೈಲೆಂಟ್!
ಇದನ್ನೂ ಓದಿ: ಎಲ್ಲೆಡೆ ಡಿ ಬಾಸ್ ಬಟ್ಟೆಯದ್ದೇ ಚರ್ಚೆ; ನಟ ದರ್ಶನ್ ಧರಿಸಿದ್ದ ಟೀಶರ್ಟ್ ಬೆಲೆ ಎಷ್ಟು ಗೊತ್ತಾ?
ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಪ್ರಯಾಣಿಸುವ ವೇಳೆ ದರ್ಶನ್ ಅವರು 10 ಪಶ್ಚಾತಾಪದ ಮಾತನಾಡಿದ್ದಾರೆ ಎನ್ನಲಾಗಿದೆ. ನನ್ನ ಗ್ರಹಚಾರ, ಟೈಂ ಸರಿಯಿಲ್ಲ ಅನ್ನೋ ಮಾತಿನ ಜೊತೆಗೆ ತನ್ನ ಸಿನಿಮಾ ಜರ್ನಿ, ಪತ್ನಿ ವಿಜಯಲಕ್ಷ್ಮೀ ನೆನೆದು ಭಾವುಕರಾಗಿದ್ದಾರೆ.
ಪಶ್ಚಾತಾಪದ ಮಾತು 1: ಸರ್ ನನ್ನ ಟೈಮ್ ಸರಿ ಇಲ್ಲ.. ಗ್ರಹಚಾರ ಕೆಟ್ಟು ಇದೆಲ್ಲಾ ಆಗ್ತಿದೆ
ಪಶ್ಚಾತಾಪದ ಮಾತು 2: ವಿಧಿಬರಹ ಏನಿದ್ಯೋ? ಅದೆಲ್ಲವನ್ನೂ ಅನುಭವಿಸಲೇಬೇಕಿದೆ
ಪಶ್ಚಾತಾಪದ ಮಾತು 3: ಡೆವಿಲ್ ಅನ್ನೋ ಒಳ್ಳೆ ಪ್ರಾಜೆಕ್ಟ್ ಇತ್ತು.. ಅದು ನಿಂತೋಗಿದೆ
ಪಶ್ಚಾತಾಪದ ಮಾತು 4: ಈ ಪರಿಸ್ಥಿತಿಯಿಂದ ಪ್ಯಾನ್ ಇಂಡಿಯಾ ಪ್ಲಾನ್ಗಳೆಲ್ಲಾ ಬಲಿಯಾದವು
ಪಶ್ಚಾತಾಪದ ಮಾತು 5: ಹೆಂಡತಿ ಮಕ್ಕಳೊಂದಿಗೆ ಆರಾಮಾಗಿ ನಾನು ಇರಬಹುದಾಗಿತ್ತು
ಪಶ್ಚಾತಾಪದ ಮಾತು 6: ಇಲ್ಲ ಸಲ್ಲದ ಸಹವಾಸ ಮಾಡಿ ಜೈಲು ಸೇರುವಂತ ಪರಿಸ್ಥಿತಿ ಬಂತು
ಪಶ್ಚಾತ್ತಾಪದ ಮಾತು 7: ಆ ಸಾವು ಆಗಬಾರದಿತ್ತು ಆಗಿ ಹೋಗಿದೆ. ಈಗ ಏನು ಹೇಳಲಿ
ಪಶ್ಚಾತಾಪದ ಮಾತು 8: ಈ ಸಂದರ್ಭದಲ್ಲಿ ಆ ಸಾವಿನ ಬಗ್ಗೆ ಏನಂದ್ರೂ ಸಬೂಬು ಅನಿಸುತ್ತೆ
ಪಶ್ಚಾತಾಪದ ಮಾತು 9: ವೈಯಕ್ತಿಕವಾಗಿ ಆ ಕುಟುಂಬಕ್ಕೆ ಏನಾದ್ರೂ ಮಾಡುವ ಮನಸ್ಸಿದೆ
ಪಶ್ಚಾತಾಪದ ಮಾತು 10: ತಪ್ಪು ಆಗಿದ್ಯೋ? ಬಿಟ್ಟಿದ್ಯೋ? ಒಂದಷ್ಟು ಹೊಣೆ ನನ್ನ ಮೇಲಿದೆ
ಇದನ್ನೂ ಓದಿ: ದರ್ಶನ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ‘ಸ್ಪೆಷಲ್ ಫೋಟೋ’ ಶೇರ್ ಮಾಡಿ ಹೊಸ ಭರವಸೆ ಮೂಡಿಸಿದ ವಿಜಯಲಕ್ಷ್ಮಿ
ಇವಿಷ್ಟು 6 ಗಂಟೆಗಳ ಕಾಲ ಬೆಂಗಳೂರು ಸೆಂಟ್ರಲ್ ಜೈಲಿನಿಂದ ಬಳ್ಳಾರಿಗೆ ಪ್ರಯಾಣಿಸುವ ವೇಳೆ ದರ್ಶನ್ ಅವರು ಹೇಳಿರೋ ಪಶ್ಚಾತಾಪದ ಮಾತುಗಳು ಎನ್ನಲಾಗಿದೆ. ಸದಾ ಗ್ಯಾಂಗ್ ಜೊತೆ ಸುತ್ತಾಡುತ್ತಿದ್ದ ದರ್ಶನ್ ಅವರಿಗೆ ಈಗ ಒಂಟಿತನದಿಂದಲೇ ಪಶ್ಚಾತಾಪದ ಭಾವ ಹೊರಬಂದಿರೋ ಸಾಧ್ಯತೆ ಇದೆ.
ದರ್ಶನ್ ಪಶ್ಚಾತಾಪಕ್ಕೆ ಕಾರಣವೇನು?
ಪಟ್ಟಣಗೆರೆ ಶೆಡ್ನಲ್ಲಿ ಒಂದಾಗಿದ್ದ ಡಿಗ್ಯಾಂಗ್ ಜೈಲಿಗೆ ಬಂದ್ಮೇಲೆ ಅಸಲಿ ಮುಖ ಗೊತ್ತಾಗಿದೆ. A1 ಪವಿತ್ರಾ ಗೌಡ ಅವರು ಕೋರ್ಟ್ ಅಲ್ಲಿ ಬೇರೆಯವರತ್ತ ಬೊಟ್ಟು ಮಾಡಿ ಸೇಫ್ ಗೇಮ್ ಆಡಿದ್ದಾರೆ. ವಿನಯ್, ನಾಗರಾಜ್ ಸೇರಿದಂತೆ ಗ್ಯಾಂಗ್‌ನ ಸದಸ್ಯರು ದಿಕ್ಕಾಪಾಲಾಗಿದ್ದಾರೆ.
ಇದನ್ನೂ ಓದಿ: ಕೊರಿಯೋಗ್ರಾಫರ್ ನವ್ಯಾ ಸಾವಿನ ಕೇಸ್.. ಪೊಲೀಸ್ ಮುಂದೆ ಇಂಚಿಂಚೂ ಸತ್ಯ ಬಾಯ್ಬಿಟ್ಟ ಗಂಡ; ಏನದು?
ಅತ್ತ ಗೆಳೆಯರು ಇಲ್ಲ, ಇತ್ತ ಗ್ಯಾಂಗೂ ಇಲ್ಲದೆ ಕೈದಿ ಬಳಗವೂ ಈಗ ದರ್ಶನ್ ಅವರಿಂದ ದೂರವಾಗಿದೆ. ಬಳ್ಳಾರಿಗೆ ಶಿಫ್ಟ್ ಆಗ್ತಿದ್ದಂತೆ ಸಿಗರೇಟ್, ಐಶಾರಾಮಿ ವ್ಯವಸ್ಥೆಯೂ ಮಿಸ್ ಆಗಿದೆ. ರಾಜಾತಿಥ್ಯದ ಕೇಸಲ್ಲೂ ಸಿಕ್ಕಾಕ್ಕೊಂಡು ವಿಚಾರಣೆ ಎದುರಿಸೋ ಸ್ಥಿತಿ ಎದುರಾಗಿದೆ. ಯಾರದ್ದೋ ವಿಡಿಯೋ ಕಾಲ್ನಲ್ಲಿ ಹಾಯ್ ಎಂದಿದ್ದಕ್ಕೂ ಸಮಸ್ಯೆ ಆಗಿದೆ. ಏನೇ ಮಾಡಿದ್ರೂ ಯಡವಟ್ಟಾಗ್ತಿರೋದ್ರಿಂದ ದರ್ಶನ್ಗೆ ತಲೆನೋವು ಹೆಚ್ಚಾಗಿದ್ದು, ಸಂತಸಕ್ಕೆ ಹಲವರು, ಸಂಕಷ್ಟಗಳ ಸರಮಾಲೆ ಎದುರಿಸಲು ಒಬ್ಬನೇ ಅನ್ನೋ ಪರಿಸ್ಥಿತಿ ದರ್ಶನ್ ಅವರಿಗಿದೆ.
ಪಶ್ಚಾತಾಪವೋ? ಅಸಹಾಯಕತೆಯೋ?
ಆರೋಪಿ ದರ್ಶನ್ದು ನಿಜಕ್ಕೂ ಪಶ್ಚಾತಾಪವೋ? ಅಸಹಾಯಕತೆಯೋ ಗೊತ್ತಿಲ್ಲ. ಪರಪ್ಪನ ಅಗ್ರಹಾರ ಜೈಲಲ್ಲಿ ರೌಡಿಶೀಟರ್ಗಳೇ ದರ್ಶನ್ಗೆ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಜೈಲಲ್ಲಿ ಬೇಕಾದಾಗ ಸಿಗರೇಟ್, ಬಿರಿಯಾನಿಯನ್ನು ತರಿಸಿಕೊಳ್ಳೋ ಅವಕಾಶ ಇತ್ತು. ಎಲ್ಲವೂ ಕೈ ತುದಿಗೆ ಸಿಗ್ತಿದ್ದ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಅವರು ಈಗ ಶಿಫ್ಟ್ ಆಗಿದ್ದಾರೆ. ಕಟ್ಟಿಕೊಂಡ ಪತ್ನಿಯೇ ಕೊನೆಗಾಗುವವಳು ಅನ್ನೋದು ಅರಿವಾದ್ಮೇಲೆ ದರ್ಶನ್ ಅವರಿಂದ ಇಂತಹ ಪಶ್ಚಾತಾಪದ ಮಾತು ಕೇಳಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ