newsfirstkannada.com

ಬೈಕ್ ವ್ಹೀಲಿಂಗ್ ಮಾಡುವಾಗ ಪಟಾಕಿ ಜೊತೆ ಸರಸ.. ವಿಡಿಯೋ ನೋಡಿ ಪೊಲೀಸರು ಮಾಡಿದ್ದೇನು ಗೊತ್ತಾ?

Share :

14-11-2023

    ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಹೆದ್ದಾರಿಯ ’ಡೆವಿಲ್ ರೈಡರ್‌’

    ವೀಲ್ಹಿಂಗ್ ಜೊತೆಗೆ ಬೈಕ್‌ಗೆ ಪಟಾಕಿ ಕಟ್ಟಿಕೊಂಡ ಯುವಕನ ಸಾಹಸ

    ಪಟಾಕಿ ಸಿಡಿಯುವಾಗಲೇ ಅಪಾಯದಿಂದ ಪಾರಾದ ಮೇಲೆ ಆಗಿದ್ದೇನು?

ಚೆನ್ನೈ: ಬೈಕ್ ಸ್ಟಂಟ್ ಮಾಡುವಾಗ ಅದೆಷ್ಟೋ ಯುವಕರು ತಮ್ಮ ಜೀವಕ್ಕೆ ಕುತ್ತು ತಂದುಕೊಂಡಿದ್ದಾರೆ. ಬೈಕ್‌ನಿಂದ ಬಿದ್ದು ಬೆನ್ನು ಮೂಳೆ ಮುರಿದುಕೊಂಡ ಅನೇಕರು ಯಾಕಪ್ಪಾ ಇಂತಹ ದುಸ್ಸಾಹಕ್ಕೆ ಕೈ ಹಾಕಿದ್ವಿ ಅಂತಾ ಪರಿತಪಿಸುತ್ತಿದ್ದಾರೆ. ಇಂತಹ ದುರ್ಘಟನೆಗಳು ನಮ್ಮ ಕಣ್ಣ ಮುಂದೆ ಇದ್ದರೂ ನಮ್ಮ ಪಡ್ಡೆ ಹುಡುಗರು ಯಾರ ಮಾತು ಕೇಳೋದಿಲ್ಲ.

ತಮಿಳುನಾಡಿನ ತಿರುಚ್ಚಿ ಯುವಕನೊಬ್ಬ ಬೈಕ್ ಸ್ಟಂಟ್ ಜೊತೆ ಪಟಾಕಿ ಸಿಡಿಸೋಕೆ ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಹೈವೇಯಲ್ಲಿ ವೀಲ್ಹಿಂಗ್ ಮಾಡುವುದರ ಜೊತೆಗೆ ಬೈಕ್‌ಗೆ ಪಟಾಕಿ ಕಟ್ಟಿಕೊಂಡು ಸಿಡಿಸಿದ್ದಾನೆ. ಈ ಬೈಕ್ ಸಾಹಸದ ವಿಡಿಯೋವನ್ನು ಆತನ ಸ್ನೇಹಿತರು ಸೆರೆ ಹಿಡಿದಿದ್ದಾರೆ.

ಪಟಾಕಿ ಸಿಡಿಯುವಾಗಲೇ ಅಪಾಯದಿಂದ ಪಾರಾದ ಈ ಯುವಕ ಅಷ್ಟಕ್ಕೆ ಸುಮ್ಮನಾಗಿಲ್ಲ. ಈ ಬೈಕ್ ಸ್ಟಂಟ್ ಸಾಹಸದ ವಿಡಿಯೋವನ್ನು ಡೆವಿಲ್ ರೈಡರ್‌ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬೈಕ್ ಸ್ಟಂಟ್‌ನ ಈ ವಿಡಿಯೋ ನೋಡಿದವರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವಂತೆ ಮಾಡಿದ್ದಾರೆ.

ಕೊನೆಗೆ ನಡುರಸ್ತೆಯಲ್ಲಿ ಮಾಡಿರೋ ಈ ಬೈಕ್ ಸ್ಟಂಟ್ ವಿಡಿಯೋ ನೋಡಿದ ಪೊಲೀಸರು ಯುವಕನಿಗಾಗಿಗ ಹುಡುಕಾಟ ನಡೆಸಿದ್ದಾರೆ. ಡೆವಿಲ್ ರೈಡರ್‌ ಅನ್ನೋ ಇನ್‌ಸ್ಟಾಗ್ರಾಂ ಖಾತೆಯನ್ನು ಹಿಂಬಾಲಿಸಿದವರಿಗೆ ಮೋಟಾರ್ ಬೈಕ್ ಮಾಲೀಕ ಹಾಗೂ ಆ ಯುವಕ ಸಿಕ್ಕಿ ಬಿದ್ದಿದ್ದಾನೆ. ಕೊನೆಗೆ IPC ಸೆಕ್ಷನ್ 279, 286, 336 ಅಡಿಯಲ್ಲಿ ಪ್ರಕರಣ ದಾಖಲಿಸಿ ಯುವಕನನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್ ವ್ಹೀಲಿಂಗ್ ಮಾಡುವಾಗ ಪಟಾಕಿ ಜೊತೆ ಸರಸ.. ವಿಡಿಯೋ ನೋಡಿ ಪೊಲೀಸರು ಮಾಡಿದ್ದೇನು ಗೊತ್ತಾ?

https://newsfirstlive.com/wp-content/uploads/2023/11/Chennai-Bike-Stunt.jpg

Load More