newsfirstkannada.com

ಬೆಂಗಳೂರು PGಯಲ್ಲಿರೋ ಹುಡುಗಿಯರೇ ಹುಷಾರ್! ಕದ್ದು ಮುಚ್ಚಿ ಸ್ನಾನದ ವಿಡಿಯೋ ತೆಗೀತಿದ್ದ ಕಾಮುಕ ಅರೆಸ್ಟ್​​​

Share :

25-06-2023

    ಸಿಲಿಕಾನ್​​​ ಸಿಟಿ ಪಿಜಿಯಲ್ಲಿರೋ ಮಹಿಳೆಯರೇ ಎಚ್ಚರ ಎಚ್ಚರ..!

    ಯುವತಿಯರು ಸ್ನಾನಕ್ಕೆ ಬರುತ್ತಿದ್ದಂತೆ ಅಲರ್ಟ್ ಆಗುತ್ತಿದ್ದ ಆರೋಪಿ

    ಆತನ ಮೊಬೈಲ್ ಪರಿಶೀಲಿಸಿದಾಗ ಹೊರಬಿತ್ತು ಬೆಚ್ಚಿಬೀಳಿಸುವ ಸತ್ಯ

ಬೆಂಗಳೂರು: ಸಿಲಿಕಾನ್ ಸಿಟಿಯ ಪಿಜಿಯಲ್ಲಿ ವಾಸವಿರುವ ಹುಡುಗಿಯರೇ ಎಚ್ಚರ ಎಚ್ಚರ. ನೀವು ಸ್ನಾನಕ್ಕೆ ಹೋಗುವಾಗ ಕೋಣೆಯ ಕಿಟಕಿ ಮುಚ್ಚಿದೆಯಾ ಅಂತಾ ಪರಿಶೀಲಿಸಿಕೊಳ್ಳಿ. ಕೊಂಚ ಎಚ್ಚರ ತಪ್ಪಿದರೂ ನಿಮ್ಮ ಖಾಸಗಿ ವಿಡಿಯೋಗಳು, ಹಾಗೂ ಫೋಟೋಗಳು ರೆಕಾರ್ಡ್ ಆಗಿ, ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಯುವತಿಯರು ಸ್ನಾನ‌ ಮಾಡುವ ವಿಡಿಯೋವನ್ನು ಕಾಮುಕನೊಬ್ಬ ಕದ್ದು ಮುಚ್ಚಿ ತನ್ನ ಮೊಬೈಲ್​​ನಲ್ಲಿ ಸೆರೆ ಹಿಡಿದಿರುವ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ಮೂಲದ ಅಶೋಕ್ ಬಂಧಿತ ಆರೋಪಿ.

ಮಹದೇವಪುರ ಹೂಡಿಯಲ್ಲಿರುವ ಪಿಜಿಯೊಂದರಲ್ಲಿ ಕಾಮುಕ ಅಶೋಕ್ ಎಂಬಾತ ವಾಸವಾಗಿದ್ದ. ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಇನ್ನು ಅಶೋಕ್ ವಾಸ ಮಾಡ್ತಿದ್ದ ಪಿಜಿ ಮುಂಭಾಗದಲ್ಲೇ ಲೇಡಿಸ್ ಪಿಜಿ ಇತ್ತು. ಲೇಡಿಸ್ ಪಿಜಿ ಸ್ನಾನದ ರೂಂ ಅನ್ನೇ ಅಶೋಕ್ ನೋಡುತ್ತಾ ಇರುತ್ತಿದ್ದನಂತೆ. ಯುವತಿಯರು ಸ್ನಾನ ಮಾಡಲು ಬರುತ್ತಿದ್ದಂತೆ ಆರೋಪಿ ಅಲರ್ಟ್ ಆಗುತ್ತಿದ್ದ. ಯುವತಿಯರು ಸ್ನಾನ ಮಾಡುತ್ತಿದ್ದ ವಿಡಿಯೋ ವೆಂಟಿಲೇಷನ್ ಮೂಲಕ ತನ್ನ ಮೊಬೈಲ್​​ನಲ್ಲಿ ಚಿತ್ರೀಕರಣ ಮಾಡುತ್ತಿದ್ದ.

ಹೀಗೆ ಯುವತಿ ಸ್ನಾನ ಮಾಡುತ್ತಿದ್ದ ವಿಡಿಯೋ ಚಿತ್ರೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಜೂನ್ 21 ರಂದು ಆರೋಪಿ ಅಶೋಕ್​ನನ್ನು ಸ್ಥಳೀಯರು ಮಹದೇವಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಬಂಧಿಸಿ, ಆತನ ಮೊಬೈಲ್ ಪರಿಶೀಲನೆ ನಡೆಸಿದಾಗ ಬೆಚ್ಚಿ ಬೀಳಿಸುವ ಮಾಹಿತಿ ಹೊರಬಿದ್ದಿದೆ. ಅಶೋಕ್ ಮೊಬೈಲ್​ನಲ್ಲಿ 7 ಯುವತಿಯರು ಸ್ನಾನದ ಮಾಡಿದ ವಿಡಿಯೋ ಪತ್ತೆಯಾಗಿದೆ. ಸದ್ಯ ಮಹದೇವಪುರ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬೆಂಗಳೂರು PGಯಲ್ಲಿರೋ ಹುಡುಗಿಯರೇ ಹುಷಾರ್! ಕದ್ದು ಮುಚ್ಚಿ ಸ್ನಾನದ ವಿಡಿಯೋ ತೆಗೀತಿದ್ದ ಕಾಮುಕ ಅರೆಸ್ಟ್​​​

https://newsfirstlive.com/wp-content/uploads/2023/06/Accused-3.jpg

Load More