newsfirstkannada.com

ಬೈಕ್​ ಅಡ್ಡಗಟ್ಟಿ ಬುರ್ಖಾ ಧರಿಸಿದ್ದ ಯುವತಿಗೆ ನಿಂದಿಸಿದ್ದ ಆರೋಪಿ ಅರೆಸ್ಟ್​; ಯಾರು ಈ ಕಿಡಿಗೇಡಿ?

Share :

29-08-2023

    ಬುರ್ಖಾ ಧರಿಸಿದ್ದ ಯುವತಿಗೆ ನಿಂದಿಸಿದ್ದ ಆರೋಪಿ..!

    ಹುಡುಗನೊಂದಿಗೆ ಯಾಕೆ ಹೋಗ್ತಾ ಇದ್ದೀ? ಎಂದು ಪ್ರಶ್ನೆ

    24 ಗಂಟೆಯಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿದ ಪೊಲೀಸ್ರು

ಬೆಂಗಳೂರು: ನಿನ್ನ ಹೆಸರೇನು? ಬುರ್ಖಾ ಹಾಕಿ ಎಲ್ಲಿಗೆ ಹೋಗ್ತಿದೀಯಾ? ತೆಗೀ ನಿನ್ನ ಬುರ್ಖಾ. ಆತನೊಂದಿಗೆ ಯಾಕೆ ಹೋಗ್ತಿದ್ದೀಯಾ? ಹೀಗೆ ಆವಾಜ್​​ ಹಾಕಿದ್ದ ಆರೋಪಿ ಅರೆಸ್ಟ್​ ಆಗಿದ್ದಾನೆ.

ಹೌದು, ಇದು ಕೆಜೆ ಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯ ಕೂಗಳತೆ ದೂರದಲ್ಲಿ ನಡೆದಿರೋ ಘಟನೆ. ಒಂದೇ ಕಂಪನಿಯ ಇಬ್ಬರು ಸಹದ್ಯೋಗಿಗಳು ಬೈಕ್​ನಲ್ಲಿ ಇಂಟರ್ವ್ಯೂಗೆ ತೆರಳಿದ್ರು. ಈ ವೇಳೆ ಸಡನ್​ ಆಗಿ ಬಂದ ಮೂರನೇ ವ್ಯಕ್ತಿ ಜಾಕೀರ್ ಅಹಮದ್ ಬೈಕ್​ ಅಡ್ಡಗಟ್ಟಿ ಬುರ್ಖಾ ಧರಿಸಿದ್ದ ಯುವತಿಯ ಜೊತೆ ಗಲಾಟೆ ಗಿಳಿದಿದ್ದಾನೆ. ಬುರ್ಖಾ ತೆಗೆಯುವಂತೆ ಕೆಟ್ಟದಾಗಿ ನಿಂದಿಸಿದ್ದಾನೆ.

ಯಾರು ಜಾಕೀರ್ ಅಹಮದ್?

22 ವರ್ಷದ ಆರೋಪಿ ಜಾಕೀರ್​​ ಅಹ್ಮದ್​​ ಕೋಲಾರದ ಬಂಗಾರಪೇಟೆಯ ನಿವಾಸಿಯಾಗಿದ್ದು, ರಷ್ಯಾದಲ್ಲಿ ಮೆಡಿಕಲ್​​​ ಮಾಡ್ತಿದ್ದ. ರಜೆ ಅಂತ ಜಾಕೀರ್ ಬೆಂಗಳೂರಿನ ಗೋವಿಂದಪುರದ ತನ್ನ ಅಕ್ಕನ ಮನೆಗೆ ಬಂದಿದ್ದ.

ಯಾವಾಗ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಟ್ವೀಟ್​​ ಮಾಡಿದ್ರೋ ಆಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪೂರ್ವ ವಿಭಾಗದ ಸೈಬರ್ ಠಾಣೆ ಪೊಲೀಸರು, ರಸ್ತೆಯಲ್ಲಿ ಯುವತಿ ಮೇಲೆ ದರ್ಪ ತೋರಿ, ದಾದಾಗಿರಿ ಮಾಡಿದ ಕಿಡಿಗೇಡಿ ಜಾಕೀರ್ ಮೇಲೆ ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್​ ಅಡ್ಡಗಟ್ಟಿ ಬುರ್ಖಾ ಧರಿಸಿದ್ದ ಯುವತಿಗೆ ನಿಂದಿಸಿದ್ದ ಆರೋಪಿ ಅರೆಸ್ಟ್​; ಯಾರು ಈ ಕಿಡಿಗೇಡಿ?

https://newsfirstlive.com/wp-content/uploads/2023/08/Accused_1.jpg

Load More