ಬಿಜೆಪಿ ಟಿಕೆಟ್ ಕೊಡಿಸೋದಾಗಿ ಉದ್ಯಮಿಗೆ ವಂಚನೆ ಪ್ರಕರಣ!
ಗೋವಿಂದ್ ಪೂಜಾರಿ ಜೊತೆ ಮಠಕ್ಕೆ ಭೇಟಿ ನೀಡಿದ್ದ ಚೈತ್ರಾ
ಟಿಕೆಟ್ ವಂಚನೆ ಪ್ರಕರಣದಲ್ಲಿ ಅಭಿನವ ಹಾಲಶ್ರೀ A3 ಆರೋಪಿ
ಚೈತ್ರಾ ಕುಂದಾಪುರ ಹಿಂದೂ ಸಂಘಟನೆಯ ಕಿಡಿನುಡಿ. ಉತ್ತಮ ವಾಗ್ಮಿ. ಮಾತಿನಲ್ಲೇ ಎದುರಾಳಿಗಳನ್ನ ಕಟ್ಟಿಹಾಕ್ತಿದ್ದ ಗಟ್ಟಿಗಿತ್ತಿ. ಆದ್ರೆ, ಐಶಾರಾಮಿ ಬದುಕಿನ ಹಿಂದೇ ಬಿದ್ದಾಕೆಗೆ ಮೋಸವೂ ಒಂದು ಕಲೆಯಾಗಿ ಕಾಣಿಸಿದೆ. ಈಗ ಅದೇ ಕಲೆ ಕಪ್ಪುಚುಕ್ಕೆಯಾಗಿ ಚೈತ್ರಾ ಕುಂದಾಪುರ ಮುಖಕ್ಕೆ ಮಸಿ ಬಳಿದಿದೆ. ಇದೀಗ ಈಕೆ ವಿರುದ್ಧದ ವಂಚನೆ ಆರೋಪಕ್ಕೆ ಸಾಕ್ಷಿಯೊಂದು ಲಭ್ಯವಾಗಿದೆ.
ಕರ್ನಾಟಕ ಈವರೆಗೆ ಕಂಡು ಕೇಳರಿಯದ ಕಾಸಿಗಾಗಿ ಟಿಕೆಟ್ ಕೇಸ್ವೊಂದು ಸಂಚಲನ ಸೃಷ್ಟಿಸಿದೆ. ಬೈಂದೂರು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಸುಮಾರು 5 ಕೋಟಿ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿದೆ. ಇದೇ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಎಂಬ ಹಿಂದೂ ಸಂಘದ ಫೈರ್ಬ್ರ್ಯಾಂಡ್, ಬೆಂಗಳೂರಿನ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾಳೆ. ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚಿಸಿರುವ ಕಥೆ ಸಿನಿಮಾಗಿಂತಲೂ ರೋಚಕವಾಗಿದೆ.
ಚೈತ್ರಾ ಕುಂದಾಪುರ ವಂಚನೆ ಪುರಾಣದ ಮತ್ತಷ್ಟು ಸಾಕ್ಷಿ ಲಭ್ಯ!
ಕರಾವಳಿಯ ಬೈಂದೂರು ಮೂಲದ ಉದ್ಯಮಿ ಗೋವಿಂದ್ ಪೂಜಾರಿಗೆ ಮೀನಿನ ರೀತಿಯಲ್ಲೇ ಗಾಳ ಹಾಕಿದ ಮೀನಿನ ಹೆಜ್ಜೆಯ ಮೀನುಗಾರ್ತಿ. ಕಳೆದ ವಿಧಾನಸಭಾ ಎಲೆಕ್ಷನ್ನಲ್ಲಿ ಬಿಜೆಪಿಯ ಟಿಕೆಟ್ಗೇ ನಿಮ್ಮನ್ನೆ ಸೆಲೆಕ್ಷನ್ ಮಾಡ್ತೀನಿ ಅಂತ ಆಮಿಷವೊಡ್ಡಿದ್ಲು. 5 ಕೋಟಿ ರೂಪಾಯಿಯನ್ನ ಅಡ್ಡದಾರಿಯಲ್ಲಿ ಕಲೆಕ್ಷನ್ ಮಾಡಿದ ಚೈತ್ರಾಳನ್ನ ಇದೀಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಳಿಕ ಆಕೆಯನ್ನ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಇದೀಗ ಚೈತ್ರಾ ಕುಂದಾಪುರ ವಂಚನೆ ಪುರಾಣದ ಮತ್ತಷ್ಟು ಸಾಕ್ಷಿ ಲಭ್ಯವಾಗಿದೆ. ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀ ಮಠಕ್ಕೆ ಗೋವಿಂದ ಪೂಜಾರಿ ಭೇಟಿಕೊಟ್ಟಿದ್ದ ಫೋಟೋ ನ್ಯೂಸ್‌ಫಸ್ಟ್‌ಗೆ ಲಭ್ಯವಾಗಿದೆ.
ಅಭಿನವ ಹಾಲಶ್ರೀಗೂ ಒಂದೂವರೆ ಕೋಟಿ ನೀಡಿದ್ದ ಉದ್ಯಮಿ
ಬಿಜೆಪಿ ಟಿಕೆಟ್ ಕೊಡಿಸೋದಾಗಿ ಉದ್ಯಮಿಗೆ ವಂಚಿಸಿರೋ ಆರೋಪ ಹೊತ್ತಿರೋ ಚೈತ್ರಾ ಕುಂದಾಪುರ ವಂಚನೆ ಪುರಾಣದ ಮತ್ತಷ್ಟು ಸಾಕ್ಷಿ ಲಭ್ಯವಾಗಿದೆ.. ಗೋವಿಂದ್ ಪೂಜಾರಿ ಜೊತೆ ಚೈತ್ರಾ ಮಠಕ್ಕೆ ಭೇಟಿ ನೀಡಿದ್ದ ಎಕ್ಸ್ಕ್ಲೂಸಿವ್ ಫೋಟೋಗಳು ನ್ಯೂಸ್‌ಫಸ್ಟ್‌ಗೆ ಲಭ್ಯವಾಗಿವೆ. ವಿಜಯನಗರ ಜಿಲ್ಲೆ ಹಿರೇಹಡಗಲಿಯ ಹಾಲ ಮಠದ ಅಭಿನವ ಶ್ರೀ ಮಠಕ್ಕೆ ಚೈತ್ರ ಭೇಟಿಕೊಟ್ಟಿರೋದು ಕನ್ಫರ್ಮ್ ಆಗಿದೆ. ಇನ್ನೂ ಟಿಕೆಟ್ ವಂಚನೆ ಪ್ರಕರಣದಲ್ಲಿ ಅಭಿನವ ಹಾಲಶ್ರೀ ಮೂರನೇ ಆರೋಪಿಯಾಗಿದ್ದು, ಟಿಕೆಟ್‌ಗಾಗಿ ಅಭಿನವ ಹಾಲಶ್ರೀ ಶಿಫಾರಸ್ಸು ಮುಖ್ಯ ಅಂತ ಉದ್ಯಮಿ ಗೋವಿಂದ್ ಪೂಜಾರಿಗೆ ಚೈತ್ರಾ & ಗ್ಯಾಂಗ್ ನಂಬಿಸಿತ್ತಂತೆ. ಅಲ್ಲದೇ ಅಭಿನವ ಹಾಲಶ್ರೀಗೂ ಒಂದೂವರೆ ಕೋಟಿ ರೂಪಾಯಿಯನ್ನ ಉದ್ಯಮಿ ಗೋವಿಂದ್ ಪೂಜಾರಿ ನೀಡಿದ್ರು ಎಂಬ ಮಾಹಿತಿ ಲಭ್ಯವಾಗಿದೆ. ಚೈತ್ರಾ ಜೊತೆ ಮಠಕ್ಕೆ ಗೋವಿಂದ್ ಹೇಳಿಕೆ ನೀಡಿದ್ರು.. ಚುನಾವಣೆ ಮುನ್ನ ಚೈತ್ರಾ, ಗೋವಿಂದ್ ಪೂಜಾರಿ ಮಠಕ್ಕೆ ಭೇಟಿಯನ್ನೂ ಕೊಟ್ಟಿರೋ ಸಾಕ್ಷಿ ಈಗ ಲಭ್ಯವಾಗಿದೆ.
ಇವತ್ತು ಮತ್ತೆ ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ!
ಇನ್ನೂ ಬಂಧನಕ್ಕೆ ಒಳಗಾಗಿರೋ ಚೈತ್ರಾ ಕುಂದಾಪುರರನ್ನ ಸಿಸಿಬಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ರು. ಬಳಿಕ ಸಿಸಿಬಿ ಕಚೇರಿಯಲ್ಲಿ ಮಹಿಳಾ ಆರೋಪಿಗಳಿಗೆ ವ್ಯವಸ್ಥೆ ಇಲ್ಲದ ಹಿನ್ನೆಲೆ ಚೈತ್ರಾರನ್ನ ಸಿಸಿಬಿ ಕಚೇರಿಯಿಂದ ಡೈರಿ ಸರ್ಕಲ್‌ನಲ್ಲಿ ಇರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಇವತ್ತು ಮತ್ತೆ ಸಿಸಿಬಿ ಕಚೇರಿಗೆ ಕರೆತಂದು ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ಒಟ್ಟಾರೆ, ವಂಚನೆ ಪ್ರಕರಣದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನವಾಗಿದೆ. ಎಲೆಕ್ಷನ್ನನ್ನೇ ಬಂಡವಾಳ ಮಾಡ್ಕೊಂಡು ಚೈತ್ರಾಳ ವಂಚನೆಯ ಮುಖ ಬಯಲಾಗಿದೆ. ಹೋರಾಟವನ್ನೇ ಉಸಿರಾಡುವ, ದೇಶ ಕಟ್ಟುವ ಕಾಯಕದಲ್ಲಿ ತನ್ನನ್ನ ತೊಡಗಿರುವ ಸಂಘಕ್ಕೂ ಈ ವಂಚಕರು, ಮೋಸ ಮಾಡಿದ್ದಾರೆ. ಸದ್ಯ ಪ್ರಕರಣ ಹೇಗೆಲ್ಲಾ ತಿರುವು ಪಡೆಯುತ್ತೆ ಅನ್ನೋದು ತನಿಖೆಯ ದಿಕ್ಕುಗಳೇ ನಿರ್ಧರಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ