newsfirstkannada.com

5 ಕೋಟಿ ಅಲ್ಲ, 35 ಕೋಟಿ ರೂಪಾಯಿ ಷಡ್ಯಂತ್ರ; ಚೈತ್ರಾ ಕುಂದಾಪುರ ಸ್ಫೋಟಕ ಹೇಳಿಕೆ; ಏನಿದರ ಗುಟ್ಟು?

Share :

14-09-2023

    ಸಿಸಿಬಿ ಪೊಲೀಸರ ಮುಂದೆ ಸ್ಫೋಟಕ ವಿಚಾರ ಬಾಯ್ಬಿಟ್ಟ ಚೈತ್ರಾ ಕುಂದಾಪುರ

    ಏನದು ‘35 ಕೋಟಿ ರೂಪಾಯಿ’ ಸಿಕ್ರೇಟ್? ಈ ಮಾತಿನ ಅಸಲಿಯತ್ತೇನು?

    ಚೆಫ್ ಟ್ಯಾಕ್ ಎಂಬ ಕಂಪನಿ ನಡೆಸುತ್ತಿರುವ ಉದ್ಯಮಿ ಗೋವಿಂದ ಬಾಬು

ಬೆಂಗಳೂರು: ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರ ಮೇಲೆ ಕೋಟ್ಯಾಂತರ ರೂಪಾಯಿ ವಂಚನೆಯ ಆರೋಪ ಕೇಳಿ ಬಂದಿದೆ. ಉದ್ಯಮಿ ಗೋವಿಂದ ಬಾಬು ಅವರಿಗೆ ಬಿಜೆಪಿ ಟಿಕೆಟ್​ ಕೊಡಿಸುವುದಾಗಿ ನಂಬಿಸಿ 5 ಕೋಟಿ ರೂಪಾಯಿ ಹಣ ವಂಚಿಸಿದ್ದಾರೆ ಎಂಬ ದೂರಿನ ಮೇಲೆ ಚೈತ್ರಾ ಕುಂದಾಪುರ ಅವರನ್ನು ಬಂಧಿಸಲಾಗಿದೆ. ಸಿಸಿಬಿ ವಿಚಾರಣೆ ನಡೆಯುತ್ತಿರುವಾಗಲೇ ಇಂದಿರಾ ಕ್ಯಾಂಟೀನ್ ಬಿಲ್​ಗಾಗಿ ಇಷ್ಟೆಲ್ಲಾ ಷಡ್ಯಂತ್ರ ನಡೆದಿದೆ ಅನ್ನೋ ಸ್ಫೋಟಕ ಹೇಳಿಕೆ ಹೊರ ಬಿದ್ದಿದೆ.

ಇದನ್ನು ಓದಿ: ಚೈತ್ರಾ ಕುಂದಾಪುರ ಆಶ್ರಯ ಪಡೆದಿದ್ದು ಮುಸ್ಲಿಂರ ಮನೆಯಲ್ಲಾ?; ಅರೆಸ್ಟ್ ಮಾಡೋ ಸುಳಿವು ಸಿಗ್ತ್ತಿದ್ದಂತೆ ಮಾಡಿದ್ದೇನು?

5 ಕೋಟಿ ರೂಪಾಯಿ ವಂಚನೆ ಕೇಸ್​ಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ, ರಮೇಶ್​​, ಧನರಾಜ್​​​, ಪ್ರಜ್ವಲ್​​​, ಶ್ರೀಕಾಂತ್, ಚನ್ನಾ ನಾಯಕ್​ ಎಂಬುವವರನ್ನ ಸಿಸಿಬಿ ಪೊಲೀಸರು​ ಕಸ್ಟಡಿಗೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ವಿಚಾರಣೆಯ ಮಧ್ಯೆ ಇಂದಿರಾ ಕ್ಯಾಂಟೀನ್ ಬಿಲ್​ಗಾಗಿ ಈ ರೀತಿ ಷಡ್ಯಂತ್ರ ಮಾಡಿದ್ದಾರೆ ಎಂದು ಚೈತ್ರಾ ಕುಂದಾಪುರ ಸಿಸಿಬಿ ಕಚೇರಿ ಬಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಾಬು ಪೂಜಾರಿ ಮೇಲೆ ನೇರ ಆರೋಪ ಮಾಡಿದ ಚೈತ್ರಾ..!

ಉದ್ಯಮಿ ಗೋವಿಂದ ಬಾಬು ಚೆಫ್ ಟ್ಯಾಕ್ ಎಂಬ ಕಂಪನಿ ನಡೆಸುತ್ತಿದ್ದರು. 2017ರಿಂದ ಚೆಫ್ ಟ್ಯಾಕ್ ಕಂಪನಿಗೆ ಇಂದಿರಾ ಕ್ಯಾಂಟೀನ್ ಗುತ್ತಿಗೆ ಪಡೆದುಕೊಂಡಿದೆ. ಇದರಿಂದ ಬಾಬು ಪೂಜಾರಿಗೆ ಅಂದಾಜು 35 ಕೋಟಿ ಹಣ ಬರಬೇಕಿತ್ತು. ಹೀಗಾಗಿ ಅದನ್ನು ಬಿಡುಗಡೆ ಮಾಡ್ತೀವಿ ಚೈತ್ರಾಳನ್ನು ಲಾಕ್ ಮಾಡಿಸು ಅಂದಿದ್ರಾ ಎಂಬ ಪ್ರಶ್ನೆ ಕಾಡುತ್ತಿದೆ. ಗೋವಿಂದ ಬಾಬು 98 ಇಂದಿರಾ ಕ್ಯಾಂಟೀನ್ ಗುತ್ತಿಗೆ ಹೊಂದಿದ್ದರು. ಇಂದಿರಾ ಕ್ಯಾಂಟೀನ್ ಹಣಕ್ಕೆ ಈ ಪ್ಲಾನ್ ಮಾಡಿದ್ರು ಎಂದು ಚೈತ್ರಾ ಕುಂದಾಪುರ ಅವರು ಆರೋಪ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5 ಕೋಟಿ ಅಲ್ಲ, 35 ಕೋಟಿ ರೂಪಾಯಿ ಷಡ್ಯಂತ್ರ; ಚೈತ್ರಾ ಕುಂದಾಪುರ ಸ್ಫೋಟಕ ಹೇಳಿಕೆ; ಏನಿದರ ಗುಟ್ಟು?

https://newsfirstlive.com/wp-content/uploads/2023/09/chitra-kundapura.jpg

Load More