ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ವ್ಯಕ್ತಿ ಸಾವು
ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಕೇಸ್ ಆರೋಪಿ
ಆಂಧ್ರ ಪ್ರದೇಶದ ಮದನಪಲ್ಲಿ ಮೂಲದ ಮುನಿರಾಜು ಮೃತ ವ್ಯಕ್ತಿ
ಕೋಲಾರ: ಬೈಕ್ ಹಾಗೂ ಮೊಬೈಲ್ ಕಳ್ಳತನ ಆರೋಪದಲ್ಲಿ ವಿಚಾರಣೆಗೆ ಕರೆ ತಂದಿದ್ದ ಆರೋಪಿ ಸಾವನ್ನಪ್ಪಿದ್ದು, ಲಾಕಪ್ ಡೆತ್ ಆಗಿರೋ ಆರೋಪ ಕೇಳಿ ಬಂದಿದೆ. ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಸಾವನ್ನಪ್ಪಿರುವ ಆರೋಪ ಇದಾಗಿದೆ. ಮೃತ ಮುನಿರಾಜುವನ್ನ ಆಂಧ್ರದ ಮದನಪಲ್ಲಿ ಮೂಲದವರು ಎನ್ನಲಾಗಿದ್ದು, ನಂಗಲಿ ಪೊಲೀಸರ ವಿರುದ್ಧ ಸಂಬಂಧಿಕರು ಲಾಕಪ್ ಡೆತ್ ಅರೋಪ ಹೊರೆಸುತ್ತಿದ್ದಾರೆ.
ನಾಲ್ಕು ದಿನಗಳ ಹಿಂದೆ ಈತ ಆಸ್ಪತ್ರೆ ಸೇರಿದ್ದ. ಕಳ್ಳತನದ ಆರೋಪ ಹೊತ್ತ ಈ ವ್ಯಕ್ತಿಯೀಗ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಅನ್ನೋದು ಪೊಲೀಸರ ಮಾಹಿತಿ. ಆದರೆ ಆಗಸ್ಟ್ 31ರಂದು ಪೊಲೀಸ್ ವಿಚಾರಣೆಗೆಂದು ಮುಳಬಾಗಿಲು ನಂಗಲಿ ಪೊಲೀಸ್ ಠಾಣೆಗೆ ಕರೆ ತರಲಾಗಿತ್ತು. ನಂತರ ವಿಚಾರಣೆ ಮಾಡಿ ನಿರಪರಾಧಿ ಎಂದು ಸ್ನೇಹಿತ ಗಂಗಾಧರ್ ಅವರೊಂದಿಗೆ ಕಳುಹಿಸಿಕೊಡಲಾಗಿದೆ ಎನ್ನಲಾಗಿದೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನ ಸ್ನೇಹಿತ ಗಂಗಾಧರ್ ಮೂಲಕ ಕಳುಹಿಸಿಕೊಟ್ಟು ಪೊಲೀಸರು ಸುಮ್ಮನಾಗಿದ್ದಾರೆ. ಆದ್ರೆ ಆತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆದ್ರೆ ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟಿರುವ ಕೋಲಾರ ಎಸ್ಪಿ ನಾರಾಯಣ ಸಂಬಂಧಿಕರ ದೂರು ಆಧರಿಸಿ ಪ್ರಕರಣ ದಾಖಲಿಸಿ ವಿಚಾರಣೆಯನ್ನ ನಡೆಸುವುದಾಗಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ