newsfirstkannada.com

ರೋಬೋಟ್ ಮೂಲಕ ಭಯಾನಕ ಕೃತ್ಯಕ್ಕೆ ಸಂಚು: NIA ತನಿಖೆ ವೇಳೆ ಬಯಲಾಯ್ತು ಕುಕ್ಕರ್​ ಬಾಂಬ್​ ಬ್ಲಾಸ್ಟ್ ಶಂಕಿತರು ಹೂಡಿದ ತಂತ್ರ

Share :

01-07-2023

    ಮಂಗಳೂರನ್ನೇ ಬೆಚ್ಚಿ ಬೀಳಿಸಿತ್ತು ಕುಕ್ಕರ್​ ಬಾಂಬ್​ ಬ್ಲಾಸ್ಟ್

    NIA ಚಾರ್ಜ್ ಶೀಟ್​ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

    ರೋಬೋಟ್ ಮೂಲಕ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಉಗ್ರರು

ಮಂಗಳೂರು: ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ಕುಕ್ಕರ್​ ಬಾಂಬ್​ ಬ್ಲಾಸ್ಟ್​ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣ ಪ್ರಮುಖ ಆರೋಪಿ ಶಾರೀಕ್​ ಕುಕ್ಕರ್​ನಲ್ಲಿ ಬಾಂಬ್​ ಇಟ್ಟು ತೆರಳುವಾಗ ರಿಕ್ಷಾ ಸ್ಫೋಟಗೊಂಡಿತ್ತು. ಅದೃಷ್ಟವಶಾತ್​ ರಿಕ್ಷಾ ಚಾಲಕ ಮತ್ತು ಶಂಕಿತ ಉಗ್ರ ಸಣ್ಣ ಪುಟ್ಟಗಾಯಗಳಿಂದ ಬದುಕಿ ಉಳಿದರು. ಇದೇ ಪ್ರಕರಣದ ಬೆನ್ನು ಹತ್ತಿದ್ದ ಎನ್​ಐಎ ಅಂದಿನಿಂದ ಇಂದಿನವರಿನ ತನಿಖೆ ನಡೆಸುತ್ತಲೇ ಇದೆ. ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದಂತೆ ಹೊಸ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಇದೀಗ ರೋಬೋಟ್ ಮೂಲಕ ವಿಧ್ವಂಸಕ ಕೃತ್ಯಕ್ಕೆ ಆರೋಪಿಗಳು ಸಂಚು ರೂಪಸಿದ್ದರು ಎಂಬ ವಿಚಾರ ಬಯಲಾಗಿದೆ.

ಕುಕ್ಕರ್​ ಬಾಂಬ್​ ಬ್ಲಾಸ್ಟ್​​ ಪ್ರಕರಣ ಅಗೆದಂತೆ ಮಾಹಿತಿಗಳು ಹೊರಬೀಳುತ್ತಿವೆ. ಅದರಂತೆಯೇ ಇದೀಗ NIA ಚಾರ್ಜ್ ಶೀಟ್​ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಶಂಕಿತ ಉಗ್ರರಾದ ಮೊಹಮ್ಮದ್​ ಶಾರೀಕ್​ (25) ಮಾಜ್​ ಮುನೀರ್​ ಅಹಮದ್​ (23). ಸೈಯದ್​ ಯಾಸಿನ್​ (22), ರಿಶಾನ್​​ ತಾಜುದ್ದೀನ್​ ಶೇಖ್​ (22). ಹುಜೇರ್​ ಫರ್ಹಾನ್​​ ಬೇಗ್​ (22) ಮಜಿನ್​ ಅಬ್ದುಲ್​​ ರಹಮಾನ್​ (22) ನದೀಮ್​ನನ್ನು ವಿಚಾರಣೆ ನಡೆಸುವ ವೇಳೆ ಕೆಲವೊಂದು ಸಂಗತಿಗಳು ಬಾಯ್ಬಿಟ್ಟಿದ್ದಾರೆ. ರೋಬೋಟ್ ಮೂಲಕ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್ ಕುರಿತಂತೆ ತನಿಖೆ ನಡೆಸಿದ ಎನ್​ಐಎ 2 ಪ್ರಕರಣಗಳ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನ್ಯಾಷನಲ್​ ಇನ್ಸ್​ವೆಸ್ಟಿಗೇಶನ್​ ಏಜೆನ್ಸಿಗೆ ಕೆಲವೊಂದು ಸ್ಫೋಟಕ ಮಾಹಿತಿ ಸಿಕ್ಕಿವೆ. ಹಾಗಾಗಿ ಎನ್​ಐಎ ಅಧಿಕಾರಿಗಳು ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ.

ಮಿಸ್​ ಆಗಿತ್ತು ಪ್ಲಾನ್​​ 

ಕಳೆದ ವರ್ಷ ನವೆಂಬರ್​ 9ರಂದು ಮಂಗಳೂರು ಕಂಕನಾಡಿ ಬಳಿಯ ಗರೋಡಿ ಎಂಬಲ್ಲಿ ಕುಕ್ಕರ್​ ಬಾಂಬ್​ ಸ್ಫೋಟಗೊಂಡಿತ್ತು. ಶಂಕಿತ ಉಗ್ರ ಶಾರೀಕ್​​ ಕುಕ್ಕರ್​ ಬಾಂಬ್​ ಜೊತೆಗೆ ಪುರುಷೋತ್ತಮ ಎಂಬವರ ಆಟೋ ರಿಕ್ಷಾ ಏರಿದ್ದ. ಈ ವೇಳೆ ಬಾಂಬ್​ ಸ್ಫೋಟಗೊಂಡಿದೆ. ಸ್ಫೋಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಕದ್ರಿ ದೇವಾಲಯಕ್ಕೆ ಕಣ್ಣಿಟ್ಟಿದ್ದ ಶಾರೀಕ್

ಶಂಕಿತ ಉಗ್ರ ಶಾರೀಕ್​ ಮಂಗಳೂರು ಕದ್ರಿ ದೇವಾಲಯದ ಮೇಲೆ ದಾಳಿ ಮಾಡುವ ಉದ್ದೇಶದಿಂದ ಕುಕ್ಕರ್​ನಲ್ಲಿ ಬಾಂಬ್​ ಇಟ್ಟುಕೊಂಡು ಹೋಗುತ್ತಿದ್ದ. ಈ ವೇಳೆ ಕಂಕನಾಡಿ ಬಳಿ ಅಚಾನಕ್​ ಆಗಿ ಬ್ಲಾಸ್ಟ್​ ಆಗಿದೆ.

ಶಾರೀಕ್​ ಬಳಸಿದ್ದು ಒಡಿಸ್ಸಾದ ಸಿಮ್​

ಉಗ್ರ ಶಾರೀಕ್​ಗೆ 31 ವರ್ಷದ ಪ್ರಾಯದ ಒಡಿಸ್ಸಾ ಮೂಲದ ಪ್ರೀತಂಕಾರ್ ಸಿಮ್​ ಪೂರೈಕೆ ಮಾಡಿದ್ದ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ. ಒಡಿಸ್ಸಾದ ಸ್ಟೆಷಲ್ ಟಾಸ್ಕ್ ಫೋರ್ಸ್, ಪ್ರೀತಂಕಾರ್​ನನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದರು. ವಿಚಾರಣೆ ವೇಳೆ ಪಾಕಿಸ್ತಾನದ ಐಎಸ್ಐ ಏಜೆಂಟ್ ಒಬ್ಬನಿಗೆ ಪ್ರೀತಂಕಾರ್ ಸಿಮ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪೂರೈಸಿರುವ ಸಂಗತಿ ಬಯಲಾಗಿದೆ. ಬಳಿಕ ಸಿಮ್ ಕಾರ್ಡ್ ಅನ್ನು ಐಎಸ್ಐ ಏಜೆಂಟ್ ಉಗ್ರ ಶಾರೀಕ್​ಗೆ ನೀಡಿದ ವಿಚಾರ ತಿಳಿದುಬಂದಿದೆ.

ದಾಳಿ ಹೊಣೆ ಹೊತ್ತಿದ್ದ ಐಎಸ್​ಕೆಪಿ

ಮಂಗಳೂರು ಕುಕ್ಕರ್ ಬಾಂಬ್​ ಬ್ಲಾಸ್​ ಮತ್ತು ತಮಿಳುನಾಡಿದ ಕೊಯಮತ್ತೂರು ಬಳಿ ನಡೆದ ಸ್ಫೋಟವನ್ನು ಇಸ್ಲಾಮಿಕ್​​ ಸ್ಟೇಟ್​​ ಸಂಘಟನೆಯ ಸಹ ಸಂಘಟನೆಯಾದ ಖೊರಾಸನ್​ ಪ್ರಾಂತ್ಯದ ಇಸ್ಲಾಮಿಕ್​ ಸ್ಟೇಟ್​​ ಉಗ್ರ ಸಂಘಟನೆಯಾದ (ಐಎಸ್​ಕೆಪಿ) ಈ ದಾಳಿಯನ್ನು ಒಪ್ಪಿಕೊಂಡಿತ್ತು.​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಬೋಟ್ ಮೂಲಕ ಭಯಾನಕ ಕೃತ್ಯಕ್ಕೆ ಸಂಚು: NIA ತನಿಖೆ ವೇಳೆ ಬಯಲಾಯ್ತು ಕುಕ್ಕರ್​ ಬಾಂಬ್​ ಬ್ಲಾಸ್ಟ್ ಶಂಕಿತರು ಹೂಡಿದ ತಂತ್ರ

https://newsfirstlive.com/wp-content/uploads/2023/07/Mangalore-Cooker-Bomb.jpg

Load More